ETV Bharat / state

ಕಂಪ್ಲಿಯಲ್ಲಿ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ: 35 ಸಾವಿರ ರೂ. ಮೌಲ್ಯದ ವಸ್ತುಗಳು ವಶಕ್ಕೆ - ಅಬಕಾರಿ ಇಲಾಖೆಯ ಅಧಿಕಾರಿ

ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಶಿಕಾರಿಹಟ್ಟಿಯ ನಾಗೇಶ್ ಮತ್ತು ಸುರೇಶ್ ಎಂಬುವರಿಗೆ ಸೇರಿದ ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು, ಸುಮಾರು 35 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

Spurious Liquor unit in Kampli
ಕಳ್ಳಭಟ್ಟಿ ಅಡ್ಡೆ
author img

By

Published : Mar 16, 2021, 7:22 PM IST

ಹೊಸಪೇಟೆ: ಕಳ್ಳಭಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ಸುಮಾರು 460 ಲೀಟರ್ ಬೆಲ್ಲದ ಕೊಳೆ, 65 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು ಒಂದು ಮೊಬೈಲ್ ವಶಪಡಿಸಿಕೊಂಡಿದೆ.

ಇನ್ನು ಈ ಅಡ್ಡೆ ಕಂಪ್ಲಿ ಪಟ್ಟಣದ ಶಿಕಾರಿಹಟ್ಟಿಯ ನಾಗೇಶ್ ಮತ್ತು ಸುರೇಶ್ ಎಂಬವರಿಗೆ ಸೇರಿದ್ದು ಎನ್ನಲಾಗಿದೆ.

ಇಲ್ಲಿನ ಸಣ್ಣಾಪುರ ರಸ್ತೆಯಲ್ಲಿರುವ ಸ್ಮಶಾನದ ಕಾಂಪೌಂಡ್ ಆವರಣ ಹಾಗೂ ಅವರ ಮನೆಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿದ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡವು, ಕಳ್ಳಭಟ್ಟಿ ಸಾರಾಯಿ, ಬೆಲ್ಲದ ಕೊಳೆ ಇನ್ನಿತರ ಅಕ್ರಮ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು ವಶಪಡಿಸಿಕೊಂಡು ವಸ್ತುಗಳ ಅಂದಾಜು ಮೌಲ್ಯ ರೂ. 35 ಸಾವಿರಗಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.