ETV Bharat / state

ಗಣಿನಾಡಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಬಿತ್ತು ಶಾಶ್ವತ ಬ್ರೇಕ್​​​! - kannadanews

ಗಣಿನಾಡು ಬಳ್ಳಾರಿಯಲ್ಲಿ ಇನ್ನೂ ಜೀವಂತವಿದ್ದ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಅಬಕಾರಿ ಇಲಾಖೆ ಯಶಸ್ವಿಯಾಗಿದೆ.

ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆ ಶಾಶ್ವತ ಬ್ರೇಕ್..!
author img

By

Published : Aug 27, 2019, 8:57 PM IST

ಬಳ್ಳಾರಿ: ಜಿಲ್ಲೆಯ ಎರಡು ಗ್ರಾಮಗಳಲ್ಲಿ ಜೀವಂತವಿದ್ದ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಬಳ್ಳಾರಿ ಉಪ ವಿಭಾಗದ ಅಬಕಾರಿ ಇಲಾಖೆಯು ಯಶಸ್ಸು ಕಂಡಿದೆ.

ಜಿಲ್ಲೆಯ ಬಳ್ಳಾರಿ ತಾಲೂಕಿನ‌ ಬೆಳಗಲ್ಲು-ಹೊನ್ನಳ್ಳಿ ತಾಂಡಗಳಲ್ಲಿ ವಿಪರೀತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ನಡೆಯುತ್ತಿರುವ ಮಾಹಿತಿ ಬಂದ ಕ್ಷಣದಲ್ಲಿಯೇ ಅಬಕಾರಿ ಇಲಾಖೆಯ ಉಪಾಧೀಕ್ಷಕರು ಅದರ ಕಡಿವಾಣಕ್ಕೆ ಮುಂದಾಗಿದ್ದಾರೆ. ಬಳ್ಳಾರಿ ಉಪ ವಿಭಾಗದ ಅಬಕಾರಿ ಇಲಾಖೆ ಅಧೀಕ್ಷಕ ಜಗದೀಶ್​ ನಾಯ್ಕ ಅವರ ಮಾರ್ಗದರ್ಶನದ ಮೇರೆಗೆ ಉಪಾಧೀಕ್ಷಕರಾದ ಮೋತಿಲಾಲ್, ವಿನೋದ ಹಾಗೂ ಸಿಬ್ಬಂದಿ ಮುಂದಾಗಿ ಅದರಲ್ಲಿ ಯಶ ಕಂಡಿದ್ದಾರೆ.

ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆಯಿಂದ ಶಾಶ್ವತ ಬ್ರೇಕ್..!

ಅಬಕಾರಿ ಇಲಾಖೆಯ ಉಪಾಧೀಕ್ಷಕ ಮೋತಿಲಾಲ್ ಹೇಳೋ ಪ್ರಕಾರ, ಈ ಹಿಂದೆ ಕಳ್ಳಭಟ್ಟಿ ಸಾರಾಯಿ ಮಾರಾಟದ ಜಾಲ ಬೆಳಗಲ್ ಮತ್ತು ಹೊನ್ನಳ್ಳಿ ತಾಂಡಾಗಳಲ್ಲಿ ನಡೆಯುತ್ತಿತ್ತು. ಅದರೀಗ ಅಲ್ಲಿ ನಡೆಯುತ್ತಿಲ್ಲ.‌ ಅದಕ್ಕೆ ಪ್ರಮುಖ ಕಾರಣವೆಂದರೆ ಮೇಲಿಂದ ಮೇಲೆ ದಾಳಿ ಹೆಚ್ಚಾದಂತೆಲ್ಲಾ ಈಗ ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣವಾಗಿ ನಿಂತಿದೆ ಎಂದು ತಿಳಿಸಿದ್ದಾರೆ. ತಿಂಗಳಲ್ಲಿ ಐದಾರು ಬಾರಿ ದಾಳಿ ಕಾರ್ಯಾಚರಣೆ ನಡೆಸಿದ್ದಲ್ಲದೇ ಜಾಗೃತಿ ಮೂಡಿಸುವ ಕಾರ್ಯವನ್ನೂ ಕೂಡ ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ. ಹೀಗಾಗಿ, ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣ ನಿಂತುಹೋಗಿದೆ ಎಂದು ತಿಳಿಸಿದ್ದಾರೆ.

Intro:ಗಣಿನಾಡಿನಲಿ ಜೀವಂತವಿದ್ದ ಕಳ್ಳಭಟ್ಟಿ ಸಾರಾಯಿ ಮಾರಾಟಕ್ಕೆ ಅಬಕಾರಿ ಇಲಾಖೆಯ ಶಾಶ್ವತ ಬ್ರೇಕ್..!
ಬಳ್ಳಾರಿ: ಜಿಲ್ಲೆಯ ಆ ಎರಡು ಗ್ರಾಮಗಳಲ್ಲಿ ಮಾತ್ರ ಕಳ್ಳಭಟ್ಟಿ ಸಾರಾಯಿ ಮಾರಾಟವು ಜೀವಂತವಿತ್ತಾದ್ರೂ ಮೇಲಿಂದ ಮೇಲೆ ದಾಳಿ ನಡೆಸೋ ಮುಖೇನ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಬಳ್ಳಾರಿ ಉಪವಿಭಾಗದ ಅಬಕಾರಿ ಇಲಾಖೆಯು ಯಶಕಂಡಿದೆ.
ಹೌದು, ಜಿಲ್ಲೆಯ ಆ ಎರಡು ಗ್ರಾಮಗಳಲ್ಲಿ ಕದ್ದುಮಚ್ಚಿ ಯಾದ್ರೂ ಕಳ್ಳಭಟ್ಟಿ ಸಾರಾಯಿ ಮಾರಾಟ‌ ಮಾಡಲಾಗು ತ್ತಿತ್ತಂತೆ.‌ ಅದಕ್ಕೆ ಶಾಶ್ವತವಾಗಿಯೇ ಬ್ರೇಕ್ ಹಾಕಲು ಬಳ್ಳಾರಿ ಉಪವಿಭಾಗದ ಅಬಕಾರಿ ಇಲಾಖೆ ಅಧೀಕ್ಷಕರಾದ ಜಗದೀಶ ನಾಯ್ಕರವರ ಮಾರ್ಗದರ್ಶನದ ಮೇರೆಗೆ ಉಪಾಧೀಕ್ಷಕರಾದ ಮೋತಿಲಾಲ್, ವಿನೋದ ಹಾಗೂ ಸಿಬ್ಬಂದಿಗಳು ಮುಂದಾಗಿ ಅದರಲ್ಲಿ ಯಶಕಂಡಿದ್ದಾರೆ.
ಹಾಗಾದ್ರೆ ಆ ಎರಡು ಗ್ರಾಮಗಳಾವ್ಯವು ಎಂಬುದರ ಕುರಿತು ತಿಳಿಯಬೇಕೇ. ಇಲ್ಲಿದೆ ನೋಡಿ ಆ ಎರಡು ಗ್ರಾಮಗಳ ಹೆಸರು. ಜಿಲ್ಲೆಯ ಬಳ್ಳಾರಿ ತಾಲೂಕಿನ‌ ಬೆಳಗಲ್ಲು -ಹೊನ್ನಳ್ಳಿ ತಾಂಡಗಳು. ಉಭಯ ತಾಂಡಾಗಳಲ್ಲಿ ವಿಪರೀತವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ನಡೆಯುತ್ತಿರುವ ಮಾಹಿತಿ ಬಂದ ತತ್ ಕ್ಷಣದಲ್ಲಿಯೇ ಅಬಕಾರಿ ಇಲಾಖೆಯ ಉಪಾಧೀಕ್ಷಕರು ಅದರ ಕಡಿವಾಣಕ್ಕೆ ಮುಂದಾಗಿರೋದು ವಿಶೇಷವೇ ಸರಿ.
ಅಬಕಾರಿ ಇಲಾಖೆಯ ಉಪಾಧೀಕ್ಷಕರಾದ ಮೋತಿಲಾಲ್ ಅವರು ಹೇಳೋ ಪ್ರಕಾರ, ಈ ಹಿಂದೆ ಕಳ್ಳಭಟ್ಟಿ ಸಾರಾಯಿ ಮಾರಾಟದ ಜಾಲವು ಬೆಳಗಲ್ ಮತ್ತು ಹೊನ್ನಳ್ಳಿ ತಾಂಡಾ ಗಳಲ್ಲಿ ನಡೆಯುತ್ತಿತ್ತು. ಅದರೀಗ ಅಲ್ಲಿ ನಡೆಯುತ್ತಿಲ್ಲ.‌
ಅದ್ಕೆ ಪ್ರಮುಖ ಕಾರಣವೆಂದರೆ ಮೇಲಿಂದ ಮೇಲೆ ದಾಳಿ ಕಾರ್ಯಾಚರಣೆಗಳು ಹೆಚ್ಚಾದಂತೆಲ್ಲಾ ಈಗ ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣವಾಗಿ ನಿಂತಿದೆ ಎಂದು ತಿಳಿಸಿದ್ದಾರೆ ಅವರು.
ತಿಂಗಳಲ್ಲಿ ಐದಾರು ಬಾರಿ ದಾಳಿ ಕಾರ್ಯಾಚರಣೆ ನಡೆಸಿದ್ದಲ್ಲದೇ ಜಾಗೃತಿ ಮೂಡಿಸುವ ಮಾರ್ಗವನ್ನೂ
ಕೂಡ ನಾವ್ ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ.
ಹೀಗಾಗಿ, ಕಳ್ಳಭಟ್ಟಿ ಸಾರಾಯಿ ಮಾರಾಟ ಸಂಪೂರ್ಣ ನಿಂತುಹೋಗಿದೆ ಎಂದು ತಿಳಿಸಿದ್ದಾರೆ ಅವರು.

Body:ಬಳ್ಳಾರಿ ಉಪವಲಯಕ್ಕೆ ನಾಲ್ಕು: ಬಳ್ಳಾರಿ ಉಪವಲಯಕ್ಕೆ ನಾಲ್ಕು ವಿಭಾಗಗಳು ಬರಲಿವೆ. ಬಳ್ಳಾರಿ ವಲಯ ನಂ.1, ಬಳ್ಳಾರಿ ವಲಯ ನಂ.2, ಸಂಡೂರು ಹಾಗೂ ಸಿರುಗುಪ್ಪ ತಾಲೂಕುಗಳಿವೆ ಎಂದು ಮೋತಿಲಾಲ್ ತಿಳಿಸಿದ್ದಾರೆ.
ಕಳೆದೊಂದು ವರ್ಷದಲ್ಲಿ ಅಂದಾಜು 1173 ಪ್ರಕರಣಗಳು ದಾಖಲಾಗಿವೆ. ಕಲಂ 32, 33, 34, 35, 37, 38, 38(ಎ),
39ರ ಅಡಿಯಲ್ಲಿ 95, ಕಲಂ 15(ಎ), 32(3)ರ ಅಡಿಯಲ್ಲಿ 806, ಕಲಂ 36ರ ಅಡಿಯಲ್ಲಿ 272 ಪ್ರಕರಣಗಳು ದಾಖ ಲಾಗಿವೆ. ಪ್ರಸಕ್ತ ಸಾಲಿನಲ್ಲಿ 352 ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_2_LIKKER_STORY_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.