ETV Bharat / state

ಈಟಿವಿ ಭಾರತ ಫಲಶ್ರುತಿ: ತಾಳೂರು ರಸ್ತೆಯ ಬಲದಂಡೆ ಉಪ ಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಬಳ್ಳಾರಿ ಜಿಲ್ಲೆ ತಾಳೂರು ರಸ್ತೆಯ ಬಲದಂಡೆ ಉಪ ಕಾಲುವೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಜಲ ಸಂಪನ್ಮೂಲ ಇಲಾಖೆ ಕೊನೆಗೂ ಚಾಲನೆ ನೀಡಿದೆ.

ತಾಳೂರು ರಸ್ತೆಯ ಬಲದಂಡೆ ಉಪಕಾಲುವೆಯಲಿ ಅಭಿವೃದ್ಧಿ ಕಾರ್ಯಕ್ಕೆ ಕಾಯಕಲ್ಪ!
author img

By

Published : Jun 11, 2019, 10:21 PM IST

ಬಳ್ಳಾರಿ: ಮೇ 13ರಂದು ಈಟಿವಿ ಭಾರತ ಬಳ್ಳಾರಿಯ ಉಪ ಕಾಲುವೆಯಲ್ಲಿ ರಾಶಿ ರಾಶಿ ತ್ಯಾಜ್ಯ... ಜನರಿಗೆ ನರಕಯಾತನೆ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು. ಆ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದ ಜಲ ಸಂಪನ್ಮೂಲ ಇಲಾಖೆಯು ಉಪ ಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದೆ.

ಉಪ ಕಾಲುವೆ ಎಡ ಮತ್ತು ಬಲ ಬದಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಓಡಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾರ್ಯವನ್ನು ಶುರು ಮಾಡಲಾಗಿದೆ. ಜೆಸಿಬಿ ಯಂತ್ರೋಪಕರಣ ಸಹಾಯದೊಂದಿಗೆ ಮೂರು ಕಡೆಗಳಲ್ಲಿ ಮೇಲ್ಸೆತುವೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ. ಉಪ ಕಾಲುವೆಯಲ್ಲಿ ತುಂಬಿದ್ದ ತ್ಯಾಜ್ಯದ ರಾಶಿಯನ್ನೂ ಕೂಡ ಶುಚಿಗೊಳಿಸಲಾಗಿದೆ. ತೆರೆದ ಉಪ ಕಾಲುವೆಯಲ್ಲಿ ಚರಂಡಿ ನೀರು ಸಂಗ್ರಹವಾಗಿದೆ. ಆ ನೀರನ್ನು ಹೊರ ಬಿಡುವ ಕಾರ್ಯವೂ ಹಂತ ಹಂತವಾಗಿ ನಡೆಯಲಿದೆ.

ತಾಳೂರು ರಸ್ತೆಯ ಬಲದಂಡೆ ಉಪ ಕಾಲುವೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ತುಂಗಭದ್ರಾ ಜಲಾಶಯದ ಉಪ ಕಾಲುವೆ ಈಗ ರಾಜಕಾಲುವೆಯಾಗಿ ಮಾರ್ಪಾಡಾಗಿತ್ತು. ನಗರದ ಅವಂಬಾವಿ, ತಾಳೂರು ರಸ್ತೆ‌, ಶ್ರೀನಗರ, ಭಗತ್​ ಸಿಂಗ್ ನಗರ, ಕಪ್ಪಗಲ್ಲು ರಸ್ತೆಯ ಕೊಳಚೆ ಪ್ರದೇಶ, ಸಿದ್ಧಾರ್ಥ ಕಾಲೋನಿ ಕೊಳಚೆ ಪ್ರದೇಶದ ಮೂಲಕ ಸಂಗನಕಲ್ಲು ಅಡ್ಡ ರಸ್ತೆಯವರೆಗೆ ಬರೀ ತ್ಯಾಜ್ಯದ ರಾಶಿಯೇ ತುಂಬಿಕೊಂಡಿತ್ತು. ಇದೀಗ ಜಲ ಸಂಪನ್ಮೂಲ ಇಲಾಖೆಯು ಉಪ ಕಾಲುವೆ ಶುಚಿತ್ವ ಕಾರ್ಯಕ್ಕೆ ಕೈಹಾಕಿರೋದು ಅಲ್ಲಿನ ನಿವಾಸಿಗಳ ಮೊಗದಲ್ಲಿ ಸಂತಸ ಮೂಡಿಸಿದೆ.

Intro:ಈ ಟಿವಿ ಭಾರತ ಫಲಶ್ರುತಿ...
ತಾಳೂರು ರಸ್ತೆಯ ಬಲದಂಡೆ ಉಪಕಾಲುವೆಯಲಿ ಅಭಿವೃದ್ಧಿ ಕಾರ್ಯಕ್ಕೆ ಕಾಯಕಲ್ಪ!
ಬಳ್ಳಾರಿ: ಕೊನೆಗೂ ನಗರದ ತಾಳೂರು ರಸ್ತೆಯ ಬಲದಂಡೆ ಉಪಕಾಲುವೆಯಲಿ ಅಭಿವೃದ್ಧಿಕಾರ್ಯಕ್ಕೆ ಕಾಯಕಲ್ಪ ದೊರೆ ತಿದೆ.
ಮೇ 13ರಂದು ಈ ಟಿವಿ ಭಾರತ ಬಳ್ಳಾರಿಯ ಉಪಕಾಲುವೆ ಯಲ್ಲಿ ರಾಶಿ, ರಾಶಿ ತ್ಯಾಜ್ಯ...ಜನರಿಗೆ ನರಕಯಾತನೆ ಶಿರ್ಷೀಕೆ ಅಡಿಯಲ್ಲಿ ವರದಿ ಮಾಡಲಾಗಿತ್ತು. ಆ ವರದಿಯನ್ನು ಸೂಕ್ಷ್ಮ ವಾಗಿ ಗಮನಿಸಿದ ಜಲ ಸಂಪನ್ಮೂಲ ಇಲಾಖೆಯು ಉಪ ಕಾಲುವೆ ಅಭಿವೃದ್ಧಿಕಾರ್ಯಕ್ಕೆ ಚಾಲನೆ ನೀಡಿದೆ.
ಉಪಕಾಲುವೆ ಎಡ ಮತ್ತು ಬಲಬದಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಓಡಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾರ್ಯವನ್ನು ಶುರು ಮಾಡಲಾಗಿದೆ.
ಜೆಸಿಬಿ ಯಂತ್ರೋಪಕರಣ ಸಹಾಯದೊಂದಿಗೆ ಮೂರು ಕಡೆಗಳಲ್ಲಿ ಮೇಲ್ಸೆತುವೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ. ಉಪಕಾಲುವೆಯೆಲ್ಲಾ ತುಂಬಿದ್ದ ತ್ಯಾಜ್ಯದ ರಾಶಿಯನ್ನೂ ಕೂಡ ಶುಚಿತ್ವಗೊಳಿಸಲಾಗಿದೆ. ಅಕ್ಕಪಕ್ಕದಲ್ಲಿ ವಾಸಿಸುತ್ತಿರುವ ಸ್ಲಂ ನಿವಾಸಿಗಳು ಉಪಕಾಲುವೆಗೆ ಒಳ ಚರಂಡಿಯನ್ನು ಹರಿಬಿಡಲಾಗುತ್ತಿದೆ. ತೆರೆದ ಉಪಕಾಲುವೆ ಯಲ್ಲಿ ಚರಂಡಿ ನೀರು ಸಂಗ್ರಹವಾಗಿದೆ. ಆ ನೀರನ್ನು ಹೊರ ಬಿಡುವ ಕಾರ್ಯವೂ ಹಂತಹಂತವಾಗಿ ನಡೆಯಲಿದೆ.

Body:ಉಪಕಾಲುವೆ ರಾಜಕಾಲುವೆಯಾಗಿ ಮಾರ್ಪಾಡಾಗಿತ್ತು: ತುಂಗಭದ್ರಾ ಜಲಾಶಯದ ಉಪಕಾಲುವೆ ಈಗ ರಾಜಕಾಲುವೆ ಯಾಗಿ ಮಾರ್ಪಾಡಾಗಿತ್ತು. ನಗರದ ಅವಂಬಾವಿ, ತಾಳೂರು ರಸ್ತೆ‌, ಶ್ರೀನಗರ, ಭಗತಸಿಂಗ್ ನಗರ, ಕಪ್ಪಗಲ್ಲು ರಸ್ತೆಯ ಕೊಳಚೆ ಪ್ರದೇಶ, ಸಿದ್ಧಾರ್ಥ ಕಾಲೊನಿ ಕೊಳಚೆ ಪ್ರದೇಶದ ಮೂಲಕ ಸಂಗನಕಲ್ಲು ಅಡ್ಟರಸ್ತೆಯವರೆಗೆ ಬರೀ ತ್ಯಾಜ್ಯದ ರಾಶಿಯೇ ತುಂಬಿಕೊಂಡಿತ್ತು. ಪ್ರತಿವರ್ಷವೂ ಈ ಬೇಸಿಗೆ ವೇಳೆ ಈ ಸಮಸ್ಯೆ ಇದ್ದೇ ಇರುತ್ತದೆ. ಜಲಸಂಪನ್ಮೂಲ ಇಲಾಖೆಯು ಉಪಕಾಲುವೆ ಶುಚಿತ್ವಕಾರ್ಯಕ್ಕೆ ಕೈಹಾಕಿರೋದು ನಿವಾಸಿಗಳ ಮೊಗದಲಿ ಸಂತಸ ಮೂಡಿದೆ.
ಜಲಸಂಪನ್ಮೂಲ ಇಲಾಖೆ ಜವಾಬ್ದಾರಿ ಮೆರೆದಿದೆ: ಉಪ ಕಾಲುವೆ ಶ್ರೀನಗರ ಮೇಲ್ಸೆತುವೆ ಬಳಿ ಜಲ ಸಂಪನ್ಮೂಲ ಇಲಾಖೆಯು ಈ ಉಪಕಾಲುವೆ ಆಸ್ತಿಯನ್ನ ಅತಿಕ್ರಮಿಸಿದರೆ ದಂಡ ಶುಲ್ಕ ಹಾಗೂ ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವು ದೆಂದು ನಾಮಫಲಕ ಹಾಕಲಾಗಿದೆ. ಆದರೆ, ಉಪಕಾಲುವೆ ಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ದಿನಾಲೂ ತ್ಯಾಜ್ಯವನ್ನು ಬಿಸಾಡುತ್ತಿದ್ದಾರೆ. ಅವರಿಗೆ ಯಾವ ರೀತಿಯ ದಂಡ ಶುಲ್ಕ ಹಾಗೂ ಕಾನೂನು ರಿತ್ಯಾ ಕ್ರಮವಿದೆ ಎಂಬುದು ಈವರೆಗೂ ಸ್ಪಷ್ಟಪಡಿಸದಿರುವುದು ಅನೇಕ ಗೊಂದಲಕ್ಕೀಡು ಮಾಡಿದೆ. ಆದರೀಗ, ಉಪಕಾಲುವೆ ಜೀರ್ಣೋದ್ಧಾರಕ್ಕೆ ಮುಂದಾಗಿದೆ.
ಈ ಉಪಕಾಲುವೆಯಲ್ಲಿ ತ್ಯಾಜ್ಯ ಬಿಸಾಡುತ್ತಿರುವ ಸುತ್ತಲಿನ‌ ನಿವಾಸಿಗಳ ವಿರುದ್ಧ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ. ಉಪಕಾಲುವೆ ನಿರ್ವಹಣೆ ಜವಾಬ್ದಾರಿಯನ್ನ ಮಹಾನಗರ ಪಾಲಿಕೆ ಮಾಡಬೇಕೋ ಅಥವಾ ಜಲ ಸಂಪ ನ್ಮೂಲ ಇಲಾಖೆ ಮಾಡಬೇಕೋ ಎಂಬ ಗೊಂದಲದಲ್ಲಿತ್ತು. ಹೀಗಾಗಿ, ಉಪಕಾಲುವೆಯಲ್ಲಿ ಪ್ರತಿವರ್ಷವೂ ಕೂಡ ಈ ರೀತಿಯ ತ್ಯಾಜ್ಯ ಮಿಶ್ರಿತ ಚರಂಡಿ ನೀರು ಒಂದೆಡೆ ನಿಲುಗಡೆ ಯಾಗಿ ಸುತ್ತಮುತ್ತಲಿನ ಸಾರ್ವಜನಿಕರ ಜೀವನಕ್ಕೂ ಅತೀವ ತೊಂದರೆಯುಂಟು ಮಾಡಿದೆ ಎಂಬ ವರದಿಯನ್ನು ಈ ಟಿವಿ ಭಾರತ ಬಿತ್ತರಿಸಲಾಗಿತ್ತು.
ಸ್ಪಂದನೆ: ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಕೂಡಲೇ ಉಪಕಾಲುವೆಯತ್ತ ಗಮನಹರಿಸಿ ಶುಚಿತ್ವಕಾರ್ಯಕ್ಕೆ ಕೈಹಾಕಿ ರೋದು ಸುತ್ತಲಿನ ನಿವಾಸಿಗಳಿಗೆ ತುಂಬಾ ಅನುಕೂಲಕರ ವಾಗಲಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_11_TALUR_ROAD_CANEL_REPAIR_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.