ಬಳ್ಳಾರಿ: ಕೋವಿಡ್-19 ಪರಿಹಾರ ಕಾರ್ಯಗಳಿಗೆ ನೆರವಾಗಲು ಜಿಲ್ಲಾ ಕಾಂಗ್ರೆಸ್ ಸಮಿತಿಯು ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಕೆಪಿಸಿಸಿ ಪರಿಹಾರ ನಿಧಿ ಸ್ಥಾಪಿಸಿದೆ.
ನಗರದ ಗಡಿಗಿ ಚನ್ನಪ್ಪ ವೃತ್ತದ ಎದುರು ಮಹಾನಗರ ಪಾಲಿಕೆ ವಾಣಿಜ್ಯ ಮಳಿಗೆ ನಂ 4ರಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಕಚೇರಿ ತೆರೆಯಲಾಗಿದೆ. ಪರಿಹಾರ ನಿಧಿಗೆ ಸಹಾಯ ಮಾಡಲು ಇಚ್ಚಿಸುವವರು ಸಮಿತಿಯ ಬ್ಯಾಂಕ್ ಖಾತೆಗೆ ನೀಡಬಹುದಾಗಿದೆ. ಅಥವಾ ನೇರವಾಗಿ ಪಕ್ಷದ ಕಚೇರಿಗೆ ಡಿಡಿ ಅಥವಾ ಚೆಕ್ ಅನ್ನು ನೀಡಬಹುದೆಂದು ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷ ಜೆ.ಎಸ್.ಆಂಜನೇಯಲು ತಿಳಿಸಿದ್ದಾರೆ.