ಬಳ್ಳಾರಿ: ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಸ್ಥಾಪಿಸಲಾದ ಮಾಧ್ಯಮ ಕಣ್ಗಾವಲು ಕೇಂದ್ರಕ್ಕಿಂದು ಭಾರತ ಚುನಾವಣಾ ಆಯೋಗದ ಚುನಾವಣಾ ವೆಚ್ಚ ವೀಕ್ಷಕ ಮನ್ವೀಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಚುನಾವಣಾ ವೆಚ್ಚ ವೀಕ್ಷಕ ಮನ್ವೀಶ್ ಕುಮಾರ್ ಅವರನ್ನ ಮಾಧ್ಯಮ ಕೇಂದ್ರಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಚುನಾವಣಾ ಕಾರ್ಯದ ಕಣ್ಗಾವಲಿನ ಕುರಿತು ವಿವರಿಸಿದರು.
ಮಾಧ್ಯಮ ಕಣ್ಗಾವಲು ಕೇಂದ್ರದಲ್ಲಿ ಇರಿಸಲಾದ ಟಿವಿಗಳಲ್ಲಿ ಬಿತ್ತರವಾಗುತ್ತಿರುವ ವಿವಿಧ ಚಾನಲ್ಗಳ ಸುದ್ದಿಯ ರೆಕಾರ್ಡ್ ವ್ಯವಸ್ಥೆ ಸೇರಿದಂತೆ ಇತರೆ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.
ಫೇಸ್ಬುಕ್, ವಾಟ್ಸಪ್ ಮೇಲೆ ನಿಗಾ ಇರಿಸಲು ಸಲಹೆ:
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಹಾಗೂ ಟ್ವಿಟರ್ನಲ್ಲಿ ಪೋಸ್ಟ್ ಮಾಡುವ ಮುಖೇನ ಪ್ರಚಾರ ಮಾಡುವ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ನಿಗಾ ಇರಿಸಬೇಕು. ಪರ, ವಿರೋಧ ಚರ್ಚೆಗಳ ಮೇಲೆಯೂ ಹದ್ದಿನ ಕಣ್ಣಿರಿಸಬೇಕು ಎಂದು ಮನ್ವೀಶ್ ಸೂಚಿಸಿದರು.