ETV Bharat / state

ಹೊಸಪೇಟೆ ಬಳಿಯ ಗ್ರಾಮದಲ್ಲಿ ನಡುಗಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲು

ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಲಘು ಭೂಕಂಪನವಾಗಿದ್ದು, ಸಂಜೆ ಗ್ರಾಮಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

earthquake-in-village-near-hospet-2-dot-9-intensity-recorded-on-richter-scale
ಹೊಸಪೇಟೆ ಸಮೀಪದ ಗ್ರಾಮದಲ್ಲಿ ನಡುಗಿದ ಭೂಮಿ: ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆ ದಾಖಲು
author img

By

Published : Mar 28, 2023, 9:16 PM IST

ವಿಜಯನಗರ: ಹೊಸಪೇಟೆ ತಾಲ್ಲೂಕಿನ ಅಯ್ಯನಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 1.45ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 2.9 ತೀವ್ರತೆಯ ಲಘು ಭೂಕಂಪನವಾಗಿದ್ದು ಸಂಜೆ ಗ್ರಾಮಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಯ್ಯನಹಳ್ಳಿ ಗ್ರಾಮದಲ್ಲಿ ಭೂಕಂಪವಾಗಿರುವ ಬಗ್ಗೆ ಬೆಂಗಳೂರಿನಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮಾಹಿತಿ ಬಂದಿದೆ.

ಭೂಕಂಪನದ ಅನುಭವವಾಗಿಲ್ಲವೆಂದ ಗ್ರಾಮಸ್ಥರು: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಂದಾಯ ನಿರೀಕ್ಷ ಅಂದಾನಗೌಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಯಾರಿಗೂ ಭೂಕಂಪನದ ಅನುಭವವಾಗಿಲ್ಲವೆಂದು ತಿಳಿಸಿದ್ದಾರೆ. ಯಾವುದೇ ರೀತಿಯ ಹಾನಿಯೂ ಸಂಭವಿಸಿಲ್ಲ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಅಂದಾನಗೌಡ ತಿಳಿಸಿದರು.

ಏನಿದು ಭೂಕಂಪ?: ಭೂಮಿಯ ಮೇಲ್ಮೈಯ ನಡುಕ ಮತ್ತು ಕಂಪನಗಳನ್ನು ಸೂಚಿಸುತ್ತದೆ. ಇದು ನೈಸರ್ಗಿಕ ಅಥವಾ ಕೃತಕ ಕಾರಣಗಳಿಂದ ಉಂಟಾಗುತ್ತದೆ. ಪ್ರತಿ ವರ್ಷ ಭೂಮಿಯ ಮೇಲೆ ಸುಮಾರು ಒಂದು ಮಿಲಿಯನ್ ಭೂಕಂಪಗಳು ಸಂಭವಿಸುತ್ತವೆ. ಭೂಕಂಪವು ಬಂಡೆಗಳ ಚಲನೆಯಿಂದ ಅಥವಾ ಭೂಮಿಯ ಹೊರಪದರದ ಆಳದಲ್ಲಿನ ಅಂತರದಿಂದ ಪ್ರಾರಂಭವಾಗುತ್ತದೆ. ಈ ಸ್ಥಳವನ್ನು ಭೂಕಂಪದ ಕೇಂದ್ರ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಇದು 100 ಕಿಲೋಮೀಟರ್ ಆಳದಲ್ಲಿದೆ. ಆದರೆ ಕೆಲವೊಮ್ಮೆ ಆಳವು 700 ಕಿಲೋಮೀಟರ್ ತಲುಪುತ್ತದೆ. ಭೂಕಂಪದ ಕೇಂದ್ರಬಿಂದುಕ್ಕಿಂತ ಮೇಲಿರುವ ಭೂಪ್ರದೇಶವನ್ನು ಅಧಿಕೇಂದ್ರ ಎಂದು ಕರೆಯಲಾಗುತ್ತದೆ.

ರಾಷ್ಟ್ರ ರಾಜಧಾನಿಯಲ್ಲೂ ಕಂಪಿಸಿತ್ತು ಭೂಮಿ: ಇತ್ತೀಚಿಗೆ ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಮಾರ್ಚ್​ 22ರ ರಾತ್ರಿ ಭೂಕಂಪ ಸಂಭವಿಸಿತ್ತು. ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ-ಎನ್‌ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿತ್ತು. ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಭೂಮಿ ನಡುಗಿದೆ. ಭಯಭೀತರಾದ ಜನರು ಮನೆಯಿಂದ ಹೊರಬಂದಿದ್ದರು.

ಇದನ್ನೂ ಓದಿ : ಟರ್ಕಿ ಭೀಕರ ಭೂಕಂಪದ ನಡುವೆಯೂ ನವಜಾತ ಶಿಶುಗಳ ರಕ್ಷಿಸಿದ ನರ್ಸ್​ಗಳು.. ವಿಡಿಯೋ

ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ: ವಿಶ್ವದೆಲ್ಲೆಡೆ ಪ್ರಕೃತಿ ವಿಕೋಪಗಳು ನಡೆಯುತ್ತಿದ್ದು, ಭೂಕಂಪನ, ಭೂಕುಸಿತ, ಚಂಡ ಮಾರುತ ಇತ್ಯಾದಿಗಳು ವರದಿಯಾಗುತ್ತಲೇ ಇವೆ. ಈ ಹಿಂದೆ ಟಿರ್ಕಿಯಲ್ಲಿ ಭಾರಿ ಭೂಕಂಪನ ಉಂಟಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಮಾರ್ಚ್​ 22ರಂದು ಪಾಕಿಸ್ತಾನದ ಕೆಲವು ಪ್ರದೇಶಗಳಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ ಸುಮಾರು 6.8 ತೀವ್ರತೆ ದಾಖಲಾಗಿತ್ತು. ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿಯಾಗಿತ್ತು. ಅಫ್ಘಾನಿಸ್ತಾನದ ಹಿಂಡುಕುಶ್​ ಪ್ರದೇಶವು ಭೂಕಂಪನದ ಕೇಂದ್ರಬಿಂದುವಾಗಿದ್ದು, ಈ ಪ್ರದೇಶದ 180 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಯುಎಸ್​ ಜಿಯೋಲಾಜಿಕಲ್​ ಸರ್ವೆ ಇಲಾಖೆ ಮಾಹಿತಿ ನೀಡಿತ್ತು.

ಇದನ್ನೂ ಓದಿ : ಮಲಾವಿಯಲ್ಲಿ ಭೀಕರ ಚಂಡಮಾರುತ: ಸಾವಿನ ಸಂಖ್ಯೆ 1,000 ಗಡಿ ದಾಟುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.