ETV Bharat / state

550ಕ್ಕೂ ಹೆಚ್ಚು ಮನೆಗಳಿರುವ ಪ್ರದೇಶಕ್ಕೆ ಪೈಪ್​ಲೈನ್​​ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆ! - ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ,

550ಕ್ಕೂ ಹೆಚ್ಚು ಮನೆಗಳಿರುವ ಪ್ರದೇಶಕ್ಕೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆಯಾಗಿದೆ.

Drinking water problem, Drinking water problem in Gopalpura, Drinking water problem in Bellary, Bellary news, ಕುಡಿಯುವ ನೀರಿನ ಸಮಸ್ಯೆ, ಗೋಪಾಲಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳ್ಳಾರಿ ಸುದ್ದಿ,
550ಕ್ಕೂ ಹೆಚ್ಚು ಮನೆಗಳಿರುವ ಪ್ರದೇಶಕ್ಕೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆ
author img

By

Published : Jun 3, 2021, 7:49 AM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಗೋಪಾಲಪುರ ಕ್ಯಾಂಪಿಗೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆಯಾಗಿದೆ.

ಹೌದು, ಬಳ್ಳಾರಿ ಮಹಾನಗರದಿಂದ ಸರಿ ಸುಮಾರು 35 ಕಿ.ಮೀ. ದೂರದಲ್ಲಿರುವ ಗೋಪಾಲಪುರ ಕ್ಯಾಂಪ್​ನಲ್ಲಿ ಅಂದಾಜು 550ಕ್ಕೂ ಅಧಿಕ ಮನೆಗಳಿವೆ. ಆದ್ರೆ ಆ ಕ್ಯಾಂಪಿಗೆ ಸಮರ್ಪಕ ಕುಡಿಯೋ ನೀರಿನ ವ್ಯವಸ್ಥೆಯೇ ಇಲ್ಲ.

Drinking water problem, Drinking water problem in Gopalpura, Drinking water problem in Bellary, Bellary news, ಕುಡಿಯುವ ನೀರಿನ ಸಮಸ್ಯೆ, ಗೋಪಾಲಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳ್ಳಾರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳ್ಳಾರಿ ಸುದ್ದಿ,
550ಕ್ಕೂ ಹೆಚ್ಚು ಮನೆಗಳಿರುವ ಪ್ರದೇಶಕ್ಕೆ ಲಿಕೇಜ್ ನೀರೇ ಕುಡಿಯಲಿಕ್ಕೆ ಆಸರೆ

ಪ್ರತಿ ಬಾರಿ ಬೇಸಿಗೆ ಕಾಲ ಎದುರಾದ್ರೆ ಸಾಕಿಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ. ಬಿಂದಿಗೆಗಳನ್ನು ತಳ್ಳುವ ಗಾಡಿಯಲ್ಲಿಟ್ಟುಕೊಂಡು ಅನತಿ ದೂರದಲ್ಲಿರುವ ಲಿಕೇಜ್ ಟ್ಯಾಪ್​ನಿಂದಲೇ ಕುಡಿಯುವ ನೀರು ತರುವ ಪರಿಸ್ಥಿತಿ ಎದುರಾಗಿದೆ. ಸಿಂಧವಾಳ ಗ್ರಾಮದಿಂದ ಸೋಮಸಮುದ್ರ ಗ್ರಾಮಕ್ಕೆ ಸಂಪರ್ಕ ಕಲ್ಪಿಸಿರುವ ಪೈಪ್ ಲೈನ್​ನಲ್ಲಿ ಲಿಕೇಜ್ ಆಗುತ್ತಿದ್ದು, ಈ ಲಿಕೇಜ್ ನೀರೇ ಈಗ ಗೋಪಾಲಪುರ ಕ್ಯಾಂಪಿಗೆ ಜೀವ ಸಂಜೀವಿನಿಯಾಗಿದೆ.

ಇಂತಹ ಅವ್ಯವಸ್ಥೆ ಇದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಆಗಲೀ ಅಥವಾ ಜಿಲ್ಲಾ ಪಂಚಾಯಿತಿ ಆಗಲೀ ಕಣ್ಮುಚ್ಚಿ ಕುಳಿತುಕೊ‌ಂಡಿರುವುದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ದಶಕ ಕಳೆದ್ರೂ ಕೂಡ ಕುಡಿಯುವ ನೀರಿನ ಬವಣೆ ಮಾತ್ರ ಇಲ್ಲಿ ನೀಗಿಲ್ಲ ಅನ್ನೋದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.