ಬಳ್ಳಾರಿ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಾತ್ವಾಕಾಂಕ್ಷೆ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಶಾಸಕ ಬಿ.ನಾಗೇಂದ್ರ ಅವರು ಅರ್ಹ ಫಲಾನುಭವಿಗಳಿಗೆ ಆರೋಗ್ಯ ಹಸ್ತ ಕಿಟ್ ವಿತರಿಸೋ ಮುಖೇನ ಸಾಂಕೇತಿಕವಾಗಿ ಚಾಲನೆ ನೀಡಿದ್ರು.
ಬಳ್ಳಾರಿ ತಾಲೂಕಿನ ಅಮರಾಪುರ, ಲಿಂಗದೇವನಹಳ್ಳಿ ಯಾಳ್ಪಿ ಗ್ರಾಮಗಳಲ್ಲೂ ಕೂಡ ಆರೋಗ್ಯ ಹಸ್ತ ಕಿಟ್ಗಳನ್ನ ಅರ್ಹರಿಗೆ ವಿತರಿಸಿದ್ರು. ಬಳಿಕ, ಮಾತನಾಡಿದ ಶಾಸಕ ನಾಗೇಂದ್ರ ಅವರು, ಕೋವಿಡ್ -19 ಸೋಂಕನ್ನ ತಡೆಗಟ್ಟಲು ಈ ಆರೋಗ್ಯ ಹಸ್ತ ಕಿಟ್ಗಳು ಬಹಳ ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ಕೂಡ ಆರೋಗ್ಯ ಹಸ್ತ ಕಿಟ್ ಸದ್ಬಳಕೆ ಮಾಡಿಕೊಳ್ಳಬೇಕೆಂದ್ರು.
ಅಮರಾಪುರ ಗ್ರಾಮದಲ್ಲಿ ಅಂದಾಜು 10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಈ ವೇಳೆ ಶಾಸಕ ನಾಗೇಂದ್ರ ಚಾಲನೆ ನೀಡಿದ್ರು.
ಡಿಸಿಸಿ ಅಧ್ಯಕ್ಷ ಜಿ.ಎಸ್. ಮಹಮ್ಮದ ರಫೀಕ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಾನಯ್ಯ, ತಾಲೂಕು ಪಂಚಾಯಿತಿ ಸದಸ್ಯ ಅಮರೇಗೌಡ ಬೇವಿನಹಳ್ಳಿ, ಮುಖಂಡೆಯರಾದ ಹಂಪಮ್ಮ, ಲೀಲಾವತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮಕ್ಕ, ಸದಸ್ಯರಾದ ವೈ.ಗಾದಿಲಿಂಗ, ಬಸವರಾಜ, ಕಾಂಗ್ರೆಸ್ ಹಿರಿಯ ಮುಖಂಡರಾದ ಮೀನಳ್ಳಿ ವೆಂಕಟೇಶ, ಶಾಸಕರ ಆಪ್ತ ಸಹಾಯಕರಾದ ಅನಂತರಾಜ, ಯುವ ಮುಖಂಡ ಎಂ.ಜಿ.ಕನಕ ಇದ್ದರು.
ಆರೋಗ್ಯ ಹಸ್ತ ಕಿಟ್ ಗಳಲ್ಲಿ ಏನೇನಿವೆ : ಆರೋಗ್ಯಹಸ್ತ ಕಿಟ್ಗಳಲ್ಲಿ ಸುರಕ್ಷಿತ ಫೇಸ್ ಮಾಸ್ಕ್, ಸ್ಯಾನಿಟೈಜರ್ಸ್, ದೇಹ ಸುರಕ್ಷಿತ ಬಟ್ಟೆಗಳು, ಹೆಲ್ಮೆಟ್ ಫೇಸ್ ಶೀಲ್ಡ್, ಪಲ್ಸ್ ಮೀಟರ್, ಥರ್ಮಲ್ ಸ್ಕ್ಯಾನರ್ಸ್, ಹ್ಯಾಂಡ್ ಗ್ಲೊವ್ಸ್ ಹಾಗೂ ಮುಂತಾದ ಅವಶ್ಯಕತೆಯ ವಸ್ತುಗಳನ್ನ ಒಳಗೊಂಡಿದೆ.