ETV Bharat / state

ಶಾಸಕ ಗಣೇಶ್​​​ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಅಭಿಮಾನಿಗಳು - etv bharat

ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರ ನೂರಾರು ಅಭಿಮಾನಿಗಳು‌ ಬೀದಿಗಿಳಿದರು.

ಗಣೇಶ್​ ಅವರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೀದಿಗಿಳಿದ ನೂರಾರು ಅಭಿಮಾನಿಗಳು‌.
author img

By

Published : Apr 10, 2019, 3:50 PM IST

ಬಳ್ಳಾರಿ: ಕಂಪ್ಲಿ ಶಾಸಕ ಜೆ.ಎನ್.ಗಣೇಶ್​ ಅವರನ್ನ ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ನೂರಾರು ಅಭಿಮಾನಿಗಳು‌ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿ ಇಂದು ಬೀದಿಗಿಳಿದು ಹೋರಾಟ ಮಾಡಿದರು.

ಪಟ್ಟಣದ ನಾಡಗೌಡರ ವೃತ್ತದ ಬಳಿ ನೂರಾರು ಕಾರ್ಯಕರ್ತರು ಜಮಾಯಿಸಿ ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ, ಮಾಜಿ ಶಾಸಕ ಎನ್.ಸೂರ್ಯ ನಾರಾಯಣರೆಡ್ಡಿ ಪರವಾಗಿ ಘೋಷಣೆ ಕೂಗಿದರು.

ಗಣೇಶ್​ ಅವರ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬೀದಿಗಿಳಿದ ನೂರಾರು ಅಭಿಮಾನಿಗಳು‌.

ಶಾಸಕ ಗಣೇಶ್​ ಅವರನ್ನು ಕೂಡಲೇ ಜಾಮೀನು ಮೇಲೆ ಹೊರತರಬೇಕು. ಲೋಕಸಭಾ ಚುನಾವಣೆ ಇರುವುದರಿಂದ ಕ್ಷೇತ್ರದ ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಚಿವ ಡಿ.ಕೆ.ಶಿವಕುಮಾರ ಅವರು ವಿಶೇಷ ಕಾಳಜಿ ವಹಿಸಿ ಶಾಸಕರನ್ನ ಜಾಮೀನಿನ ಮೇಲೆ ಬಿಡಿಸಬೇಕು. ಕಂಪ್ಲಿಯ ಸರ್ವಾಂಗೀಣ ಅಭಿವೃದ್ಧಿಗೆ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅಲ್ಲದೇ, ರಾಜ್ಯದ ಮೈತ್ರಿಕೂಟ ಸರ್ಕಾರವು ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷ ಗಾದಿಲಿಂಗಪ್ಪ ಹೇಳಿದರು.

Intro:ಶಾಸಕ ಗಣೇಶ ಬಿಡುಗಡೆಗೆ ಆಗ್ರಹಿಸಿ ಬೀದಿಗಿಳಿದ ಅಭಿಮಾನಿಗಳು!
ಬಳ್ಳಾರಿ: ಕಂಪ್ಲಿ ಶಾಸಕ ಜೆ.ಎನ್.ಗಣೇಶ ಅವರನ್ನ ಶೀಘ್ರವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ನೂರಾರು ಅಭಿಮಾನಿಗಳು‌ ಜಿಲ್ಲೆಯ ಕುರುಗೋಡು ಪಟ್ಟಣದಲ್ಲಿಂದು ಬೀದಿಗಿಳಿದು ಹೋರಾಟ ಮಾಡಿದರು.
ಕುರುಗೋಡು ಪಟ್ಟಣದ ನಾಡಗೌಡರ ವೃತ್ತದ ಬಳಿ ನೂರಾರು ಕಾರ್ಯ ಕರ್ತರು ಜಮಾಯಿಸಿ ಎಐಸಿಸಿ ಅಧಿನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವ ಕುಮಾರ, ಮಾಜಿ ಶಾಸಕ ಎನ್.ಸೂರ್ಯ ನಾರಾಯಣರೆಡ್ಡಿ ಪರವಾಗಿ ಘೋಷಣೆ ಕೂಗಿದರು.
ಶಾಸಕ ಗಣೇಶ ಅವರ ಅಮಾನತ್ತು ಅನ್ನ ಕೂಡಲೇ
ಹಿಂಪಡೆಯಬೇಕು. ಶೀಘ್ರವೇ ಜಾಮೀನು ಮೇಲೆ ಹೊರ ತರಬೇಕು ಎಂದು ಆಗ್ರಹಿಸಿದ್ದಾರೆ.
ಲೋಕಸಭಾ ಚುನಾವಣಾ ಸಂದರ್ಭ ಇದಾಗಿರೋದರಿಂದ ಕ್ಷೇತ್ರದ ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷ ಗಾದಿಲಿಂಗಪ್ಪ ಒತ್ತಾಯಿಸಿದ್ದಾರೆ‌.

Body:ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮತದಾರರು ಮತ ಹಾಕೋದು ಕಷ್ಟವಾಗುತ್ತೆ.‌ ಹೀಗಾಗಿ, ಸಚಿವ ಡಿ.ಕೆ.ಶಿವಕುಮಾರ ಅವರು ವಿಶೇಷ ಕಾಳಜಿವಹಿಸಿ ಶಾಸಕ ಗಣೇಶ ಅವರನ್ನ ಜಾಮೀನಿನ ಮೇಲೆ ಬಿಡಿಸಬೇಕು.
ಕಂಪ್ಲಿಯ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕ ಗಣೇಶ ಅವರು ಅವಿರತವಾಗಿ ಶ್ರಮಿಸಿದ್ದಾರೆ. ಅಲ್ಲದೇ, ರಾಜ್ಯದ ಮೈತ್ರಿಕೂಟ ಸರ್ಕಾರವು ಕಂಪ್ಲಿ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದಾರೆ. ಆದರೆ, ಈವರೆಗೂ ಆ ಅನುದಾನ ಸದ್ಬಳಕೆಯಾಗಿಲ್ಲ ಎಂದರು.
ಕೂಡಲೇ ನಮ್ಮ ಶಾಸಕರನ್ನ ಬಿಡುಗಡೆಗೊಳಿಸಬೇಕು. ಇಲ್ಲವಾದರೆ, ಈ ಬಾರಿಯ ಚುನಾವಣೆಯಲಿ ಕ್ಷೇತ್ರದ ಮತದಾರರಲ್ಲಿ ಗೊಂದಲ‌ಮಯ ವಾತಾವರಣ ಮೂಡಲಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_01_100419_MLA_GANESH_ABHIMINGALA_PROTEST_VEERESH GK

R_KN_BEL_02_100419_MLA_GANESH_ABHIMINGALA_PROTEST_VEERESH GK

R_KN_BEL_03_100419_MLA_GANESH_ABHIMINGALA_PROTEST_VEERESH GK
ETV Bharat Logo

Copyright © 2025 Ushodaya Enterprises Pvt. Ltd., All Rights Reserved.