ಹೊಸಪೇಟೆ: ಜಿಲ್ಲೆಯ ಕಂಪ್ಲಿ ತಾಲೂಕಿನ ಶ್ರೀ ರಾಮರಂಗಾಪುರದ ರಾಮಪ್ಪನ ಹಳ್ಳದ ತಾತ್ಕಾಲಿಕ ಸೇತುವೆ ಬಳಿ ಕೊಚ್ಚಿ ಹೋಗಿದ್ದ ಶಿವಪ್ಪ ಎಂಬಾತ ಶವವಾಗಿ ಪತ್ತೆಯಾಗಿದ್ದಾರೆ.
ಕಾಲು ಜಾರಿ ಬಿದ್ದ ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇವರ ಮೃತದೇಹವನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಇಂದು ಪತ್ತೆ ಮಾಡಿದ್ದಾರೆ.
![Dead body found in Hospete](https://etvbharatimages.akamaized.net/etvbharat/prod-images/8783269_death.jpg)
ಸೆ.10 ರಂದು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿ ಕೆ. ತಿಮ್ಮಾರೆಡ್ಡಿ ಮಾರ್ಗದರ್ಶನದಲ್ಲಿ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಸದ್ಯ ಮೃತದೇಹ ಪತ್ತೆಯಾಗಿದೆ.