ETV Bharat / state

ಗಣಿ ನಾಡಿನಲ್ಲಿ ಗಗನಮುಖಿಯಾಗಿದೆ ಸಿಟಿ ಸ್ಕ್ಯಾನ್​ ದರ: ಹಣ ದೋಚುತ್ತಿವೆ ಖಾಸಗಿ ಲ್ಯಾಬ್​ಗಳು? - ಖಾಸಗಿ ಲ್ಯಾಬ್​ಗಳು

ಕೊರೊನಾ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕು ಪರೀಕ್ಷೆಯಲ್ಲಿ ಒಮ್ಮೊಮ್ಮೆ ನೆಗೆಟಿವ್ ಬಂದರೂ ಕೂಡಾ ಸಿಟಿ ಸ್ಕ್ಯಾನ್ ಅವಶ್ಯಕತೆ ಇರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಖಾಸಗಿ ಸಿಟಿ ಸ್ಕ್ಯಾನ್​ ಸೆಂಟರ್​ಗಳು ಹಣ ದೋಚುವ ಮಾರ್ಗಗಳನ್ನು ಕಂಡುಕೊಂಡಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ct scan center
ಸಿ.ಟಿ.ಸ್ಕ್ಯಾನ್​ ಸೆಂಟರ್​
author img

By

Published : Aug 13, 2020, 10:39 AM IST

Updated : Aug 13, 2020, 12:22 PM IST

ಬಳ್ಳಾರಿ: ಮಹಾಮಾರಿ ಕೋವಿಡ್ ಸೋಂಕು ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಗಣಿ ನಾಡಿನಲ್ಲಿ ಕೋವಿಡ್ ಸೋಂಕಿನ ಲಕ್ಷಣ ಇರುವವರೆಲ್ಲರಿಗೂ ಕೂಡಾ ಸಿಟಿ ಸ್ಕ್ಯಾನ್​ ಕಡ್ಡಾಯ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡ‌ ಖಾಸಗಿ ಸಿಟಿ ಸ್ಕ್ಯಾನ್ ಸೆಂಟರ್​​ಗಳಲ್ಲಿ ಮನಸೋಇಚ್ಛೆ ಹಣ ವಸೂಲಿ ಮಾಡಲಾಗುತ್ತೆ ಎಂಬ ದೂರುಗಳು ಕೇಳಿ ಬಂದಿವೆ.

ಸಿ.ಟಿ.ಸ್ಕ್ಯಾನ್​ ಸೆಂಟರ್​

ಇದರ ರಿಯಾಲಿಟಿ ಚೆಕ್​ಗೆ ಹೊರಟ ಈಟಿವಿ ಭಾರತ ತಂಡಕ್ಕೆ ಖಾಸಗಿ ಲ್ಯಾಬ್​ಗಳು ಸಿಟಿ ಸ್ಕ್ಯಾನ್​ಗೆ ನಿಗದಿತ ದರವನ್ನು ಅಳವಡಿಸಿಕೊಳ್ಳದೇ ಇರುವುದು ಗಮನಕ್ಕೆ ಬಂದಿದೆ. ಆರ್​ಟಿಪಿಸಿಆರ್ ಅಥವಾ ಆ್ಯಂಟಿಜೆನ್ ಟೆಸ್ಟ್​ನಲ್ಲಿ ನೆಗೆಟಿವ್ ಬಂದೋರಿಗೆ ಸಿಟಿ ಸ್ಕ್ಯಾನ್ ಮಾಡೋದ್ರಿಂದ ಕೊರೊನಾ ಪತ್ತೆಯಾಗುತ್ತೆ ಅನ್ನೋ ಕಾರಣದಿಂದ ಈಗ ಖಾಸಗಿ ಲ್ಯಾಬ್​ಗಳು ದುಡ್ಡು ಮಾಡೋಕೆ ಹೊಸ ದಾರಿ ಹುಡುಕಿ ಕೊಂಡಿವೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.

ಹಣವಿರುವ ಶ್ರೀಮಂತರು ಖಾಸಗಿ ಲ್ಯಾಬ್​ಗಳಿಗೆ ತೆರಳಿ ಟೆಸ್ಟ್​ ಮಾಡಿಸಿಕೊಳ್ಳುತ್ತಿದ್ದು, ಯಾವುದೇ ದರ ಪಟ್ಟಿಯನ್ನು ಅಲ್ಲಿ ನಿಗದಿ ಮಾಡಲಾಗಿಲ್ಲ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬಿಪಿಎಲ್​ ಕಾರ್ಡ್ ಹೊಂದಿದ್ದರೆ ಉಚಿತ ಪರೀಕ್ಷೆ ಮಾಡಲಾಗುತ್ತದೆ. ಈ ಬಗ್ಗೆ ಈಟಿವಿ ಭಾರತ ಖಾಸಗಿ ಲ್ಯಾಬ್​ಗಳ ಮಾಲೀಕರನ್ನು ಸಂಪರ್ಕಿಸಲು ಯತ್ನಿಸಿದರೂ ಸಫಲವಾಗಲಿಲ್ಲ. ಏನಾದರೊಂದು ಕಾರಣ ಕೊಟ್ಟು ಮಾಲೀಕರು ನುಣುಚಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Last Updated : Aug 13, 2020, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.