ETV Bharat / state

ಬಳ್ಳಾರಿ ಜಿಲ್ಲೆಯ ಈ 330 ಗ್ರಾಮಗಳಲ್ಲಿ ಒಂದೂ ಕೊರೊನಾ ಪ್ರಕರಣಗಳಿಲ್ಲ: ಜಿಪಂ ಸಿಇಒ

ಬಳ್ಳಾರಿ ತಾಲೂಕಿನಲ್ಲಿ 22, ಹಡಗಲಿ ತಾಲೂಕಿನಲ್ಲಿ 30, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 21, ಹರಪನಳ್ಳಿ ತಾಲೂಕಿನಲ್ಲಿ 91, ಹೊಸಪೇಟೆ ತಾಲೂಕಿನಲ್ಲಿ 11, ಕಂಪ್ಲಿ ತಾಲೂಕಿನಲ್ಲಿ 10, ಕೊಟ್ಟೂರು ತಾಲೂಕಿನಲ್ಲಿ 20, ಕೂಡ್ಲಿಗಿ ತಾಲೂಕಿನಲ್ಲಿ 61, ಸಂಡೂರು ತಾಲೂಕಿನಲ್ಲಿ 38 ಮತ್ತು ಸಿರಗುಪ್ಪ ತಾಲೂಕಿನಲ್ಲಿ 26 ಹಳ್ಳಿಗಳು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿರುವುದು ವಿಶೇಷ.

ಸಿಇಒ ಕೆ.ಆರ್.ನಂದಿನಿ
ಸಿಇಒ ಕೆ.ಆರ್.ನಂದಿನಿ
author img

By

Published : May 26, 2021, 9:08 AM IST

ಬಳ್ಳಾರಿ: ಇಡೀ ದೇಶಕ್ಕೆ ದೇಶವೇ ಕೊರೊನಾ ಮಹಮಾರಿಯಿಂದ ತತ್ತರಿಸುತ್ತಿದ್ದರೆ ಬಳ್ಳಾರಿ ಜಿಲ್ಲೆಯಲ್ಲಿರುವ 330 ಹಳ್ಳಿಗಳು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿವೆ. ಜಿಲ್ಲೆಯಲ್ಲಿರುವ 11 ತಾಲೂಕುಗಳ ಒಟ್ಟು 237 ಗ್ರಾಮ ಪಂಚಾಯಿತಿ ವ್ಯಾಪ್ತಿಯ 1,038 ಗ್ರಾಮಗಳ ಪೈಕಿ 330 ಗ್ರಾಮಗಳಲ್ಲಿ ಇದುವರೆಗೂ ಯಾವುದೇ ಕೋವಿಡ್ ಪ್ರಕರಣಗಳು ದಾಖಲಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 12,042 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 7,032 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ 5,010 ಸಕ್ರಿಯ ಪ್ರಕರಣಗಳಿವೆ. 147 ಗ್ರಾಮಗಳಲ್ಲಿ ಹತ್ತಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳು ಮತ್ತು 561 ಗ್ರಾಮಗಳಲ್ಲಿ ಹತ್ತಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಅವರು ಬಿಡುಗಡೆ ಮಾಡಿರುವ ಕೋವಿಡ್ ಕುರಿತ ವರದಿಯಲ್ಲಿ ತಿಳಿಸಲಾಗಿದೆ.

ಬಳ್ಳಾರಿ ತಾಲೂಕಿನಲ್ಲಿ 22, ಹಡಗಲಿ ತಾಲೂಕಿನಲ್ಲಿ 30, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 21, ಹರಪನಳ್ಳಿ ತಾಲೂಕಿನಲ್ಲಿ 91, ಹೊಸಪೇಟೆ ತಾಲೂಕಿನಲ್ಲಿ 11, ಕಂಪ್ಲಿ ತಾಲೂಕಿನಲ್ಲಿ 10, ಕೊಟ್ಟೂರು ತಾಲೂಕಿನಲ್ಲಿ 20, ಕೂಡ್ಲಿಗಿ ತಾಲೂಕಿನಲ್ಲಿ 61, ಸಂಡೂರು ತಾಲೂಕಿನಲ್ಲಿ 38 ಮತ್ತು ಸಿರಗುಪ್ಪ ತಾಲೂಕಿನಲ್ಲಿ 26 ಹಳ್ಳಿಗಳು ಕೊರೊನಾ ಸೋಂಕಿನಿಂದ ಸುರಕ್ಷಿತವಾಗಿರುವುದು ವಿಶೇಷ.

ಜಿಲ್ಲೆಯಲ್ಲಿರುವ ಎಲ್ಲ ಗ್ರಾಪಂಗಳಲ್ಲಿ ಟಾಸ್ಕ್​ ಫೋರ್ಸ್‍ಗಳನ್ನು ಕ್ರಿಯಾಶೀಲಗೊಳಿಸಲಾಗಿದೆ. ಇದರ ಜೊತೆಗೆ ಕುಟುಂಬ ಸಂರಕ್ಷಣಾ ಟಾಸ್ಕ್​​ ಪೋರ್ಸ್ ರಚಿಸಲಾಗಿದ್ದು, ಪ್ರತಿ 50 ಮನೆಗಳಿಗೆ ಒಂದರಂತೆ ತಂಡಗಳನ್ನು ರಚಿಸಲಾಗಿದೆ. ಈ ತಂಡದ ಸದಸ್ಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.

ಸಮೀಕ್ಷೆಯ ಸಂದರ್ಭದಲ್ಲಿ ಜ್ವರ, ಶೀತ, ಕೆಮ್ಮಿನಂತಹ ಲಕ್ಷಣಗಳು ಕಂಡುಬಂದಲ್ಲಿ ಜನರಲ್ ಮೆಡಿಕಲ್ ಕಿಟ್ ನೀಡಲಾಗುತ್ತದೆ. ಮೂರು ದಿನಗಳಲ್ಲಿ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಆರೋಗ್ಯ ಸಿಬ್ಬಂದಿ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮುಖಾಂತರ ತಪಾಸಣೆ ನಡೆಸಿ ಪಾಸಿಟಿವ್ ಬಂದಲ್ಲಿ ಕೋವಿಡ್ ಕಿಟ್ ನೀಡಲಿದ್ದಾರೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.