ETV Bharat / state

ಬಳ್ಳಾರಿ ರೈಲ್ವೆ ನಿಲ್ದಾಣದ ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ

ಸೋಂಕು ತಡೆಗೆ ಮತ್ತೆ ಲಾಕ್​ಡೌನ್ ಜಾರಿಯಾಗಿದೆ. ಬಳ್ಳಾರಿಯ ರೈಲು ನಿಲ್ದಾಣದ ಹೋಟೆಲ್​​, ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ ಬೀರಿದ್ದು, ಕಳೆದ ವರ್ಷದಿಂದ‌ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

covid effects
ಕೋವಿಡ್​ ಎಫೆಕ್ಟ್
author img

By

Published : May 27, 2021, 2:39 PM IST

ಬಳ್ಳಾರಿ: ಕೋವಿಡ್​​ ರಾಜ್ಯದ ಪ್ರತೀ ಕ್ಷೇತ್ರದ ಮೇಲೂ ಪರಿಣಾಮ ಬೀರಿದೆ. ಕಳೆದ ವರ್ಷವೂ ಸೋಂಕು ತಡೆಗೆ ಲಾಕ್​ಡೌನ್​ ಘೋಷಣೆಯಾಗಿತ್ತು. ಹಂತ ಹಂತವಾಗಿ ಅನ್​ಲಾಕ್​ ಆಗುತ್ತಾ ಚೇತರಿಕೆ ಕಾಣುವಷ್ಟರಲ್ಲಿ ಕೋವಿಡ್​ ಎರಡನೇ ಅಲೆ ಅವಾಂತರ ಸೃಷ್ಟಿಸಿಬಿಟ್ಟಿದೆ. ಇದೀಗ ಸೋಂಕು ತಡೆಗೆ ಮತ್ತೆ ಲಾಕ್​ಡೌನ್ ಜಾರಿಯಾಗಿದೆ. ಬಳ್ಳಾರಿಯ ರೈಲ್ವೆ ನಿಲ್ದಾಣದ ಹೋಟೆಲ್​​, ಕ್ಯಾಂಟೀನ್​​​ಗಳ ಮೇಲೂ ಕೋವಿಡ್​ ಕರಿಛಾಯೆ ಬೀರಿದ್ದು, ಕಳೆದ ವರ್ಷದಿಂದ‌ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ.

ರೈಲು ನಿಲ್ದಾಣದ ಕ್ಯಾಂಟೀನ್​​​ಗಳ ಮೇಲೂ ಕೋವಿಡ್ ಎಫೆಕ್ಟ್​​

ಕೋವಿಡ್​ ಎರಡನೇ ಅಲೆ ವ್ಯಾಪಕವಾಗಿ ಹರಡಲು ಶುರುವಾದಾಗಿನಿಂದ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಸಂಖ್ಯೆ ಬಹಳಷ್ಟು ಕ್ಷೀಣಿಸಿದೆ. ಇದ್ರಿಂದ ಕ್ಯಾಂಟೀನ್​​ಗಳ ನಿರ್ವಹಣೆಗೂ ಕೂಡ ತೀರಾ ಸಮಸ್ಯೆಯಾಗಿದೆ. ಲಾಕ್​​ಡೌನ್​ಗೂ ಮುಂಚೆ ಒಂದೊಂದು ಕ್ಯಾಂಟೀನ್​​ಗಳಲ್ಲಿ 3-4 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಆದರೀಗ, ಆ ಸಂಖ್ಯೆ ಶೂನ್ಯಕ್ಕೆ ಬಂದು ನಿಂತಿದೆ. ಒಬ್ಬರ ವೇತನ ಕೊಡೋದಕ್ಕೂ ಕೂಡ ಕ್ಯಾಂಟೀನ್​​ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳ ಟೆಂಡರ್ ಪ್ರಕ್ರಿಯೆಯಲ್ಲಾದ ವಂತಿಗೆಯನ್ನೂ ಸಹ ಕಟ್ಟಲಿಕ್ಕೆ ಹೆಣಗಾಡುತ್ತಿರೋದು ಇದೀಗ ಬೆಳಕಿಗೆ ಬಂದಿದೆ.

ಲಾಕ್​ಡೌನ್ ಹಿನ್ನೆಲೆ ಸೀಮಿತ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುವು ಮಾಡಿ ಕೊಟ್ಟಿದೆಯಾದ್ರೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಂಡೇ ರೈಲುಗಳಲ್ಲಿ ಪ್ರಯಾಣಿಸಬೇಕಿದೆ. ಅದರಲ್ಲೂ ಈ ಸಾಂಕ್ರಾಮಿಕ ಕಾಯಿಲೆ ಹರಡುವ ಭಯದಲ್ಲೇ ಪ್ರಯಾಣಿಕರಿದ್ದು, ಉಚಿತವಾಗಿ ಕೊಡುವ ಆಹಾರ ಪೊಟ್ಟಣಗಳನ್ನೇ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಣ ಕೊಟ್ಟು ಖರೀದಿಸೋದು ದೂರದ ಮಾತು. ಕೋವಿಡ್​ ಸಂದಿಗ್ಧ ಪರಿಸ್ಥಿತಿಯಲ್ಲಿ ರೈಲ್ವೆ ನಿಲ್ದಾಣದ ಹೋಟೆಲ್, ಕ್ಯಾಂಟೀನ್​​ಗಳಲ್ಲಿ ಹೇಗೆ ತಾನೆ ಹಣ ಕೊಟ್ಟು ಆಹಾರ ಖರೀದಿಸಲು ಮುಂದಾಗುತ್ತಾರೆ ಎಂದು ನೀವೇ ಹೇಳಿ ಅಂತಾ ರೈಲು ಪ್ರಯಾಣಿಕರೊಬ್ಬರು ಪ್ರಶ್ನೆ ಮಾಡಿದ್ದಾರೆ.

ಈ ಸಂಬಂಧ ನಮ್ಮ ಬಳ್ಳಾರಿ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಬಳ್ಳಾರಿ ರೈಲು ನಿಲ್ದಾಣದ ಕ್ಯಾಂಟೀನ್ ಮಾಲೀಕ ವಿಜಯ ಅಗರವಾಲ, ಕಳೆದ ಎರಡು ವರ್ಷಗಳಿಂದಲೂ ರೈಲು ನಿಲ್ದಾಣದ ಹೋಟೆಲ್ ಮತ್ತು ಕ್ಯಾಂಟೀನ್​​ಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಹೀಗಾಗಿ, ನಾವುಗಳು ಸೇವೆ ರೂಪದಲ್ಲಿ ಕ್ಯಾಂಟೀನ್​ಗಳನ್ನು ನಡೆಸುತ್ತಿದ್ದೇವೆ. ಇದರಿಂದ ಕಾರ್ಮಿಕರ ಮಾಸಿಕ ವೇತನ ಹಾಗೂ ಮಳಿಗೆಗಳ ಮಾಸಿಕ ಬಾಡಿಗೆ ಕೂಡ ನಮ್ಮ ಕೈಯಾರೆ ಕಟ್ಟುತ್ತಿದ್ದೇವೆ. ಇದು ಸತತ ಎರಡು ವರ್ಷಗಳಿಂದಲೂ ಹೀಗೆಯೇ ಮುಂದುವರೆದಿದೆ ಎಂದ್ರು ವಿಜಯ ಅಗರವಾಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.