ಬಳ್ಳಾರಿ: ಶಾಸನ ಸೇವಾ ಗ್ರೂಪ್ (ಬಳ್ಳಾರಿ ಜೈನ ಯುವಕರ ಸಂಘ) ವತಿಯಿಂದ ಬಳ್ಳಾರಿಯ ಡಾ. ರಾಜ್ ರಸ್ತೆಯಲ್ಲಿರುವ ಬಿಡಿಎಎ ಮೈದಾನದಲ್ಲಿಂದು ಕೋವಿಡ್ ಪರಿಕರಗಳನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಯಿತು. ಇದಕ್ಕೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಚಾಲನೆ ನೀಡಿದ್ರು.
ಬೆಳಗ್ಗೆ 6.30ರಿಂದ 9.30ರವರೆಗೆ ಪಲ್ಸ್ ಆಕ್ಸಿಮೀಟರ್-450 ರೂ., ಡಿಜಿಟಲ್ ಥರ್ಮಾಮೀಟರ್-150 ರೂ., ಸ್ಟೀಮರ್-150 ರೂ., ಎನ್-95 ಮಾಸ್ಕ್-20 ರೂ.ಗೆ ಮಾರಾಟ ಮಾಡಲಾಯಿತು. ಅತ್ಯಂತ ಕಡಿಮೆ ದರದಲ್ಲಿ ಈ ವಸ್ತುಗಳ ಮಾರಾಟ ಮಾಡಿದ್ದು, ಗಣಿನಾಡಿನ ಜನರು ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿರುವ ದೃಶ್ಯ ಕಂಡುಬಂತು.
ಇದನ್ನೂ ಓದಿ: ಕೋವಿಡ್ ಶವ ಸಾಗಾಟಕ್ಕೆ ಉಚಿತ ವಾಹನ ಸೇವೆ ನೀಡಿದ ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆ