ETV Bharat / state

ಸ್ನೇಹಿತರ ಬಳಗದಿಂದ ಉಚಿತ ಕೊರೊನಾ ಸೋಂಕು ತಪಾಸಣೆ - ಬಳ್ಳಾರಿ ಸುದ್ದಿ

ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಬೇಕಿದೆ ಮತ್ತು ಮನೆಯಲ್ಲಿ ವಿಶ್ರಾಂತಿಯಾಗಿರೋದು ತುಂಬಾ ಉತ್ತಮ ಎಂದು ಸ್ನೇಹಿತರ ಬಳಗದ ಅಧ್ಯಕ್ಷರಾದ ಅಬ್ದುಲ್‌ ರಹೆಮಾನ್ ಹೇಳಿದರು..

Corona test
Corona test
author img

By

Published : May 8, 2021, 3:06 PM IST

ಬಳ್ಳಾರಿ : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಸ್ನೇಹಿತರ ಬಳಗದಿಂದ ಪಟ್ಟಣದ ಹತ್ತು ವಾರ್ಡ್​ಗಳ ನಾಗರಿಕರಿಗೆ ಉಚಿತವಾಗಿ ಕೋವಿಡ್​ ತಪಾಸಣೆ ಮಾಡಿಸಲಾಯಿತು.

ತಹಶೀಲ್ದಾರ್​​ ಎಸ್.ಮಹಾಬಲೇಶ್ವರ ಹಾಗೂ ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ಷಣ್ಮುಖ ನಾಯ್ಕ ಸಹಕಾರದೊಂದಿಗೆ ಪಟ್ಟಣದ ಹತ್ತು ವಾರ್ಡ್​ಗಳಲ್ಲಿನ ಪ್ರತಿ ಮನೆಯ ಸರ್ವ ಸದಸ್ಯರನ್ನು ಸೋಂಕಿನ ಪ್ರಾಥಮಿಕ ಗುಣಲಕ್ಷಣಗಳನ್ನು ತಪಾಸಣೆ ಮಾಡಿದರು.

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಅಧಿಕಾರಿಗಳ ನೇತೃತ್ವದಲ್ಲಿ ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರೆಹಮಾನ್ ಮುಂದಾಳತ್ವದಲ್ಲಿ ಕೂಡ್ಲಿಗಿ ಪಟ್ಟಣದ 10 ವಾರ್ಡ್​ಗಳ ಮನೆಗಳಲ್ಲಿನ ಪ್ರತಿ ಸದಸ್ಯರಿಗೆ, ಕೊರೊನಾ ಪ್ರಾಥಮಿಕ ಪರೀಕ್ಷೆಗಳನ್ನ ಮಾಡಲಾಯಿತು. ಸ್ಯಾನಿಟೈಸೇಷನ್, ಮಾಸ್ಕ್ ಧರಿಸುವಂತೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿದರು.

ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಬೇಕಿದೆ ಮತ್ತು ಮನೆಯಲ್ಲಿ ವಿಶ್ರಾಂತಿಯಾಗಿರೋದು ತುಂಬಾ ಉತ್ತಮ ಎಂದು ಸ್ನೇಹಿತರ ಬಳಗದ ಅಧ್ಯಕ್ಷರಾದ ಅಬ್ದುಲ್‌ ರಹೆಮಾನ್ ಹೇಳಿದರು.

ಶಿಕ್ಷಕಿಯರು, ಬಿಎಲ್ಒ, ಆರೋಗ್ಯ ಸಹಾಯಕಿಯರು, ಅಂಗನವಾಡಿ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ತಪಾಸಣೆಯಲ್ಲಿ ಕಾರ್ಯ ನಿರ್ವಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.