ಹೊಸಪೇಟೆ: ಕೊರೊನಾ ಎರಡನೇ ಅಲೆ ಅಟ್ಟಹಾಸ ಹೆಚ್ಚಾಗಿದ್ದು, ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿ ವೆಂಕಟಾಪುರ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ.
ಗ್ರಾಮದಲ್ಲಿ ಈ ಹಿಂದೆ 11 ಜನರಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗಿತ್ತು.
ಈ ಪೈಕಿ 57 ಜನರಿಗೆ ಸೋಂಕು ದೃಢವಾಗಿತ್ತು. ಹಾಗಾಗಿ ಆರೋಗ್ಯ ಇಲಾಖೆ ಸೀಲ್ಡೌನ್ ಮಾಡಲು ಮುಂದಾಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸೇಷನ್, ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಗುತ್ತಿದೆ.