ಬಳ್ಳಾರಿ: ಲಾಕ್ಡೌನ್ ಆದಾಗಿನಿಂದ ನಗರದಲ್ಲಿರುವ ಜಿಲ್ಲಾ ಪಶು ಆಸ್ಪತ್ರೆ ಚಿಕಿತ್ಸಾ ಘಟಕಕ್ಕೆ 30ಕ್ಕೂ ಅಧಿಕ ಪ್ರಾಣಿಗಳಿಗಳನ್ನು ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಾರೆ ಎಂದು ಡಿ ಗ್ರೂಪ್ ನೌಕರರು ತಿಳಿಸಿದರು.
ಕೊರೊನಾ ಭೀತಿ ಕೇವಲ ಜನರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಇದೆ. ಸಾಕಿದಂತಹ ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಜನರು ಮುಂಜಾಗ್ರತಾ ಕ್ರಮವಾಗಿ ಅವುಗಳನ್ನು ಚಿಕಿತ್ಸೆಗಾಗಿ ನಗರದಲ್ಲಿ ಪಶು ಆಸ್ಪತ್ರೆ ಚಿಕಿತ್ಸಾ ಘಟಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ದಿನದಲ್ಲಿ ಸುಮಾರು 30ಕ್ಕೂ ಅಧಿಕ ಪ್ರಾಣಿಗಳು ಚಿಕಿತ್ಸೆಗಾಗಿ ಇಲ್ಲಿದೆ ಬರುತ್ತಿದ್ದಾರೆ ಎಂದು ಘಟಕಾದ ನೌಕಕರು ತಿಳಿಸಿದರು.
ಸಿಬ್ಬಂದಿ ಕೊರತೆ:
ಸರ್ಕಾರದ ಕಡೆಯಿಂದ ಅಧಿಕೃತವಾಗಿ ವೈದ್ಯರ ನೇಮಕಾತಿ ಇಲ್ಲದ ಪರಿಣಾಮ ಅಗತ್ಯ ಸೌಲಭ್ಯಗಳ ಕೊರತೆಯಿದೆ. ತಮ್ಮ ಪ್ರಾಣಿಗಳನ್ನು ಕರೆದುಕೊಂಡು ಬರುವ ಜನರೇ ಅಗತ್ಯವಿರುವ ಔಷಧಗಳನ್ನು ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿಯಿದೆ.