ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಒಂದು ಲಕ್ಷಕ್ಕಿಂತ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಕಂಪ್ಲಿ ಸೇತುವೆಯ ಸಂಚಾರವನ್ನು ನಿಷೇಧಿಸಲಾಗಿದೆ. ಹಾಗಾಗಿ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಸಂಚಾರ ಮಾಡುತ್ತಿವೆ.
![Comply bridge traffic is ban as a precautionary measure](https://etvbharatimages.akamaized.net/etvbharat/prod-images/kn-hpt-02-outflow-increase-kampli-bridge-traffic-prohibition-vsl-ka10031_21092020135732_2109f_01150_332.jpg)
ಕಂಪ್ಲಿ ಸೇತುವೆಯು ಗಂಗಾವತಿ ಸಂಪರ್ಕಕ್ಕೆ ಕೊಂಡಿಯಾಗಿದೆ. ಈಗ ಸೇತುವೆ ಹಂತಕ್ಕೆ ತಲುಪಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸಂಚಾರ ನಿಷೇಧ ಮಾಡಲಾಗಿದೆ. ಪೊಲೀಸರು ಕಂಪ್ಲಿ ಸೇತುವೆ ಬಳಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನಳು ಸಂಚರಿಸದಂತೆ ನೋಡಿಕೊಳ್ಳುತ್ತಿದ್ದಾರೆ.
![Comply bridge traffic is ban as a precautionary measure](https://etvbharatimages.akamaized.net/etvbharat/prod-images/kn-hpt-02-outflow-increase-kampli-bridge-traffic-prohibition-vsl-ka10031_21092020135732_2109f_01150_165.jpg)
ಕಂಪ್ಲಿ ಸೇತುವೆಯು ಇದೇ ರೀತಿ ಮುಳಗಡೆ ಹೊಂದಿದಾಗ ಬುಕ್ಕಸಾಗರ ಸೇತುವೆ ವಾಹನ ಸಂಚಾರಕ್ಕೆ ಆಸರೆ ಆಗಲಿದೆ. ಈಗಾಗಲೇ ವಾಹನಗಳು ಬುಕ್ಕಸಾಗರ ಸೇತುವೆ ಮೂಲಕ ಓಡಾಡಲು ಪ್ರಾರಂಭಿಸಿವೆ.
![Comply bridge traffic is ban as a precautionary measure](https://etvbharatimages.akamaized.net/etvbharat/prod-images/kn-hpt-02-outflow-increase-kampli-bridge-traffic-prohibition-vsl-ka10031_21092020135732_2109f_01150_519.jpg)
ಇನ್ನು ನದಿಯ ಹರಿವು ಹೆಚ್ಚಾಗಿದ್ದರಿಂದ ಬುಕ್ಕಸಾಗರಕ್ಕೆ ಹೊಂದಿಕೊಂಡತಹ ಹೊಲಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಬಾಳೆ, ಕಬ್ಬು ಹಾಗೂ ಭತ್ತದ ಬೆಳೆಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.