ಬಳ್ಳಾರಿ: ಮಡಿತೇರು ಎಳೆಯುವ ಸಂದರ್ಭದಲ್ಲಿ ಅದರ ತಳಭಾಗ ಏಕಾಏಕಿ ಮುರಿದ ಪರಿಣಾಮ ತೇರು ಭಕ್ತರ ಮೇಲೆ ಬಿದ್ದಿದೆ. ಈ ವೇಳೆ 7 ಮಂದಿ ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಚಿಂತ ಗ್ರಾಮದ ಹುನುಮಂತಾವಧೂತರ ಆರಾಧನಾ ಮಹೋತ್ಸವ ದಿನದ ಪ್ರಯುಕ್ತ ಮಡಿತೇರು ಎಳೆಯುವ ಸಮಯದಲ್ಲಿ ತೇರಿನ ತಳಭಾಗ ಏಕಾಏಕಿ ಮುರಿದಿದೆ.
ಗ್ರಾಮದ ರಾಘವೇಂದ್ರ ರೆಡ್ಡಿ, ಗುಂಡಪ್ಪ ಸ್ವಾಮಿ, ಲಕ್ಷ್ಮೀಕಾಂತ ರೆಡ್ಡಿ, ಹುಸೇನಪ್ಪ, ತಾಯಪ್ಪ, ತಿಕ್ಕಯ್ಯ ಎಂಬುವರು ಗಾಯಗೊಂಡಿದ್ದಾರೆ. ಮಹೇಶ್ ಎಂಬಾತನ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆತನನ್ನು ಬಳ್ಳಾರಿ ವಿಮ್ಸ್ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.