ETV Bharat / state

ವಿಜಯನಗರ ಕಾಲದ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ.. ಕಣ್ಮನ ಸೆಳೆಯುವ ಸೌಂದರ್ಯದ ದೇಗುಲ.. - ಚಕ್ರತೀರ್ಥ ಕೋದಂಡರಾಮ ದೇವಸ್ಥಾ

ತುಳುವ ಮನೆತನದಿಂದ ಹಂಪಿ ಭಾಗದಲ್ಲಿ ರಾಮನ ದೇವಸ್ಥಾನ ಸ್ಥಾಪನೆಯಾಗಿರುವುದು. ‌ಇದಕ್ಕೆ ಉದಾಹರಣೆ ಎಂಬಂತೆ ಕೋದಂಡರಾಮ, ಪಟ್ಟಾಭಿರಾಮ, ಹಜಾರಾಮ, ಮಾಲ್ಯವಂತ ದೇವಾಲಯ, ರಘುನಾಥ ದೇವಾಲಯ, ರಂಗನಾಥ, ವರಾಹ, ಅನಂತಶಯನ ದೇವಸ್ಥಾನಗಳನ್ನು ಕಾಣಬಹುದು.‌

Chakrateertha Kodandarama Temple
ವಿಜಯನಗರ ಕಾಲದ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಸೌಂದರ್ಯದ ಗಣಿ
author img

By

Published : Nov 6, 2020, 11:44 PM IST

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿರುವ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಎಲ್ಲರ ಕಣ್ಮನ ಸೆಳೆಯುತ್ತಿದೆ. ತುಂಗಭದ್ರಾ ನದಿ ತಟದಲ್ಲಿ ಸುಂದರವಾದ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಉತ್ತರಾಭಿಮುಖವಾಗಿ ದೇಗುಲವಿದೆ. ಎತ್ತರದ ಕೋದಂಡ (ಬಿಲ್ಲನ್ನು) ವನ್ನು ಹಿಡಿದು ತನ್ನ ಪರಿವಾರದೊಂದಿಗೆ ನಿಂತಿರುವುದರಿಂದ ಕೋದಂಡ ಎಂಬ ಹೆಸರಿನಿಂದ ಶ್ರೀರಾಮನನ್ನ ಕರೆಯಲಾಗುತ್ತದೆ.

ದೇವಸ್ಥಾನದಲ್ಲಿ ಆಯತಾಕಾರದ ಗರ್ಭಗೃಹ, ಸಭಾ ಮಂಟಪ, ಮುಖಮಂಟಪ ಮತ್ತು ದೀಪಸ್ತಂಭಗಳಿವೆ. ಗರ್ಭಗುಡಿಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಸೇರಿದಂತೆ ಆಂಜನೇಯ ಉಬ್ಬುಶಿಲ್ಪಗಳನ್ನು ಬೃಹತ್ ಬಂಡೆಯಲ್ಲಿ ಕೆತ್ತಲಾಗಿದೆ. ಸಮಭಂಗಿಯಲ್ಲಿ ನಿಂತಿರುವ ರಾಮ ಮತ್ತು ಲಕ್ಷ್ಮಣ ಕೈಗಳಲ್ಲಿ ದೊಡ್ಡದಾದ ಬಿಲ್ಲು ಮತ್ತು ಬಾಣಗಳಿವೆ. ಸೀತೆಯ ಬಲಗೈಯಲ್ಲಿ ಪದ್ಮವನ್ನು ಕಾಣಬಹುದು. ಶಿಲ್ಪಗಳ ಮೇಲ್ಭಾಗದಲ್ಲಿ ಕೀರ್ತಿಮುಖದ ಪ್ರಭಾವಳಿ ಹಾಗೂ ರಾಮನ ತೆಲೆಯ ಮೇಲೆ ಏಳು ಹೆಡೆಗಳುಳ್ಳ ಸರ್ಪವಿದೆ. ಇನ್ನು ಗರ್ಭಗೃಹದ ಮೇಲ್ಭಾಗದಲ್ಲಿ ದ್ವಿತಗಳುಳ್ಳ ಶಿಖರವಿದ್ದು, ಅದರ ಕಳಸವನ್ನು ಪ್ರತಿಷ್ಠಾಪಿಸಿರುವುದನ್ನು ನೋಡಬಹುದಾಗಿದೆ.

ವಿಜಯನಗರ ಕಾಲದ ಚಕ್ರತೀರ್ಥ ಕೋದಂಡರಾಮ ದೇವಸ್ಥಾನ ಸೌಂದರ್ಯದ ಗಣಿ

ವಿರೂಪಾಕ್ಷೇಶ್ವರ ಹಾಗೂ ಕೋದಂಡರಾಮನಿಗೂ ವಿಶೇಷ ಸಂಬಂಧವಿರುವುದನ್ನು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ತಿಳಿದು ಬರುತ್ತದೆ. ಯಾಕೆಂದರೆ ಹಂಪಿಯಲ್ಲಿ ನಡೆಯುವಂತ ಫಲಪೂಜಾ ಮಹೋತ್ಸವ ಇದಕ್ಕೆ ಸಾಕ್ಷಿಯಾಗಿದೆ. ಪಂಪಾ-ವಿರೂಪಾಕ್ಷರ ವಿವಾಹ ನಿಶ್ಚಿತಾರ್ಥ, ಜಾತ್ರೆಯಲ್ಲಿ ನಡೆಯುವ ಪಂಪಾ-ವಿರೂಪಾಕ್ಷರ ಕಲ್ಯಾಣ ಮಹೋತ್ಸವ, ಮೆರವಣಿಗೆ ಮತ್ತು ರಥೋತ್ಸವಗಳಿಗೆ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಈ ಕಾರ್ಯಕ್ರಮಗಳು ಕೋದಂಡರಾಮನ ದೇವಸ್ಥಾನದಲ್ಲಿ ನಡೆಯುವುದು ವಿಶೇಷ.

ದೇವಸ್ಥಾನ ಮುಂದೆ ಉತ್ತರಾಭಿಮುಖವಾಗಿ ನದಿ ಹರಿಯುತ್ತದೆ. ಹಾಗಾಗಿ ಇದು ಪವಿತ್ರ ಸ್ಥಳವೆಂಬುದು ಜನರ ನಂಬಿಕೆಯಾಗಿದೆ.‌ ಚಕ್ರತೀರ್ಥದಲ್ಲಿ ಶೈವರು, ಜೈನರು, ವೈಷ್ಣವರು ತಮ್ಮ ಶಿಲ್ಪಗಳನ್ನು ಕೆತ್ತನೆ ಮಾಡಿರುವುದನ್ನು ನೋಡಬಹುದಾಗಿದೆ. ಕೋಟಿಲಿಂಗ, ವಿಷ್ಣುವಿನ ದಶಾವತಾರ, ವಿಷ್ಣುವಿನ 24 ಹೆಸರುಗಳನ್ನು ಸಹ ಕೆತ್ತಲಾಗಿದೆ.

ರಾಮನ ಆರಾಧನೆ ಸಿಗುವುದು ವಿಜಯನಗರ ಕಾಲದಲ್ಲಿ. ತುಳುವ ಮನೆತನದಲ್ಲಿ ರಾಮನ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿರುವುದು ತಿಳಿದು ಬರುತ್ತದೆ.‌ ತುಳುವ ವಂಶದಲ್ಲಿ ಶ್ರೀವೈಷ್ಣವ ಧರ್ಮ ಹೆಚ್ಚು ಪ್ರಚಲಿದಲ್ಲಿತ್ತು. ಅಲ್ಲದೇ, ಅರಸರು ಪ್ರೋತ್ಸಾಹ ನೀಡಿಕೊಂಡು ಬರುತ್ತಿದ್ದರು. ಹಾಗಾಗಿ ತುಳುವ ಮನೆತನದಿಂದ ಹಂಪಿ ಭಾಗದಲ್ಲಿ ರಾಮನ ದೇವಸ್ಥಾನ ಸ್ಥಾಪನೆಯಾಗಿರುವುದು. ‌ಇದಕ್ಕೆ ಉದಾಹರಣೆ ಎಂಬಂತೆ ಕೋದಂಡರಾಮ, ಪಟ್ಟಾಭಿರಾಮ, ಹಜಾರಾಮ, ಮಾಲ್ಯವಂತ ದೇವಾಲಯ, ರಘುನಾಥ ದೇವಾಲಯ, ರಂಗನಾಥ, ವರಾಹ, ಅನಂತಶಯನ ದೇವಸ್ಥಾನಗಳನ್ನು ಕಾಣಬಹುದು.‌

ಚಕ್ರತೀರ್ಥದಲ್ಲಿ ಸೂರ್ಯನಾರಾಯಣ, ಶ್ರೀನಿವಾಸ ದೇವಾಲಯಗಳಿವೆ. ಅಲ್ಲದೇ, ಚಕ್ರಾಕಾರದ ಯಂತ್ರದ ನಡುವೆ ಕೈಯಲ್ಲಿ ಮಾಲೆ ಹಿಡಿದು ಧ್ಯಾನದಲ್ಲಿ ಕುಳಿತಿರುವ ಆಂಜನೇಯ ದೇವರ ಉಬ್ಬು ಶಿಲ್ಪವಿದೆ. ಯಂತ್ರೋದ್ಧಾರಕ ಪ್ರಾಣದೇವರ ಹೆಸರಿನಿಂದ ಕರೆಯಲಾಗುತ್ತದೆ. ಈ ವಿಗ್ರಹವನ್ನು ಶ್ರೀಕೃಷ್ಣದೇವರಾಯನ ಗುರುಗಳಾದ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿರುವುದು ಎಂದು ಹೇಳಲಾಗುತ್ತದೆ. ಆದರೆ, ಈ ಕುರಿತು ಶಾಸನಗಳಾಗಲಿ ಹಾಗೂ ಮಾಹಿತಿ ಇತಿಹಾಸದಲ್ಲಿ ದಾಖಲಾಗಿಲ್ಲ.‌ ಸುತ್ತಲಿನ ಕಲ್ಲು ಬಂಡೆಗಳಲ್ಲಿ ಅಲ್ಲಲ್ಲಿ ಅನಂತಶಯನ ಅರೆಯುಬ್ಬು ಚಿತ್ರಗಳನ್ನು ಕೆತ್ತಿರುವುದು ಕಂಡು ಬರುತ್ತದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.