ETV Bharat / state

ಸುದೀಪ್ ಕಟೌಟ್ ಮುಂದೆ ಕೋಣ ಕಡಿದ ಪ್ರಕರಣ : 15 ಆರೋಪಿಗಳು ಪೊಲೀಸರ ವಶಕ್ಕೆ - actor sudeep

ಸೆ.2ರಂದು ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಅಭಿಮಾನಿಗಳು ಕೋಣವನ್ನು ಬಲಿ ನೀಡಿದ್ದರು. ಕೋಣ ಕಡಿಯುವುದನ್ನು ವಿಡಿಯೋ ಮಾಡಲಾಗಿದ್ದು, ಅದು ಸಾಕಷ್ಟು ಸದ್ದು ಮಾಡುತ್ತಿದೆ..

Case register against 15 people who killed buffalo in front of sudeep poster
ಸುದೀಪ್ ಕಟೌಟ್ ಮುಂದೆ ಕೋಣ ಕಡಿದ ಪ್ರಕರಣ
author img

By

Published : Sep 3, 2021, 5:27 PM IST

ಬಳ್ಳಾರಿ : ಜಿಲ್ಲೆಯ ಸಂಡೂರಿನ ಬಂಡ್ರಿಯಲ್ಲಿ ನಟ ಸುದೀಪ್​ ಕಟೌಟ್ ಮುಂದೆ ಕೋಣ ಕಡಿದಿದ್ದ 15 ಜನರ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನ ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಗಳಾದ ಶಿವಣ್ಣ, ನಂಜಪ್ಪ, ದುರುಗಪ್ಪ, ಬಸವರಾಜ, ಚಿನ್ನಾಪುರಿ, ನಾಗರಾಜ, ಅಂಜಿ, ಕುರ್ರಾ, ಎರಸ್ವಾಮಿ, ಆನಂದ, ಕುಮಾರಸ್ವಾಮಿ, ಧರ್ಮೇಶ್ , ಅಂಜಿ, ಬಸವರಾಜ ಹಾಗೂ ರಾಜು ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಓದಿಗೆ: ಸುದೀಪ್​ ಜನ್ಮದಿನ ಆಚರಣೆ: ಅಭಿಮಾನಿಗಳಿಂದ ಕಿಚ್ಚನ ಕಟೌಟ್​ಗೆ ಕೋಣನ ರಕ್ತಾಭಿಷೇಕ!

ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ : ಸೆ.2ರಂದು ನಟ ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಅಭಿಮಾನಿಗಳು ಕೋಣವನ್ನು ಬಲಿ ನೀಡಿದ್ದರು. ಕೋಣ ಕಡಿಯುವುದನ್ನು ವಿಡಿಯೋ ಮಾಡಲಾಗಿದ್ದು, ಅದು ಸಾಕಷ್ಟು ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಸರಿಯಲ್ಲ, ನನಗೆ ನಿಮ್ಮ ಪ್ರೀತಿ ಮಾತ್ರ ಸಾಕು: ಸುದೀಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.