ಹೊಸಪೇಟೆ(ಬಳ್ಳಾರಿ): ಹಗರಿಬೊಮ್ಮನಹಳ್ಳಿ ಶಾಸಕ ಎಲ್.ಪಿ.ಬಿ.ಭೀಮಾನಾಯ್ಕ ಅವರ ಹಾಲು ಉತ್ಪಾದಕರ ಸಂಘದ ಸದಸ್ಯತ್ವ ಮಂಗಳವಾರ ರದ್ದಾಗಿದೆ.
ಹೊಸಪೇಟೆಯ ಉಪವಿಭಾಗದ ಸಹಕಾರ ಸಹಾಯಕ ನಿಬಂಧಕರಾದ ಲಿಯಾಕತ್ ಅಲಿ ಈ ಕುರಿತ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ಭೀಮಾನಾಯ್ಕ ಅವರು ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶಕ ಸ್ಥಾನ ಹಾಗೂ ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೊ) ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ.
ಭೀಮಾನಾಯ್ಕ ಅವರು ಚುನಾವಣೆಯಲ್ಲಿ ಖೊಟ್ಟಿ ದಾಖಲೆಯನ್ನು ನೀಡಿದ್ದಾರೆ. ತಮ್ಮ ವಿಧಾನಸಭಾ ಚುನಾವಣೆಯ ಪ್ರಮಾಣ ಪತ್ರದಲ್ಲಿ ಹಗರಿಬೊಮ್ಮನಹಳ್ಳಿ ನಿವಾಸಿಯೆಂದು ತಿಳಿಸಿದ್ದಾರೆ. ಆದರೆ, ಅವರು ಆಯ್ಕೆಯಾದ ಅಡವಿ ಆನಂದ ದೇವನಹಳ್ಳಿ ಹಾಲು ಉತ್ಪಾದಕರ ಸಂಘ ಅದರ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಸದಸ್ಯರಾಗಿ ಮುಂದುವರಿಯಲು ಸಾಧ್ಯವಿಲ್ಲ. ಹಾಗಾಗಿ ಸದಸ್ಯ ರದ್ದು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.