ETV Bharat / state

ವಿಜಯನಗರದಲ್ಲಿ ಭಾರಿ ಮಳೆ: ಸಿಡಿಲಿಗೆ ಬಾಲಕ ಬಲಿ, 17 ಕುರಿಗಳು ಸಾವು

author img

By

Published : Apr 22, 2022, 9:22 PM IST

Updated : Apr 22, 2022, 9:57 PM IST

ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿಯಲ್ಲಿ ಸಿಡಿಲಿಗೆ ಬಾಲಕನೊಬ್ಬ ಮೃತಪಟ್ಟಿದ್ದಾನೆ.

ವಿಜಯನಗರದಲ್ಲಿ ಸಿಡಿಲಿಗೆ ಬಲಿಯಾದ ಬಾಲಕ
ವಿಜಯನಗರದಲ್ಲಿ ಸಿಡಿಲಿಗೆ ಬಲಿಯಾದ ಬಾಲಕ

ವಿಜಯನಗರ: ಜಿಲ್ಲೆಯ ವಿವಿಧೆಡೆ ಇಂದು ಸಹ ಬಿರುಗಾಳಿಸಹಿತ ಜೋರು ಮಳೆಯಾಗಿದ್ದು, ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಂತ್ರಪಳ್ಳಿಯಲ್ಲಿ ಸಿಡಿಲಿಗೆ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಸಿ. ನಾಗರಾಜ್‌ (11) ಮೃತ ಬಾಲಕ. ಆಟವಾಡಿ ಮನೆಗೆ ಬರುವಾಗ ಈ ಘಟನೆ ನಡೆದಿದೆ.

ಸಿಡಿಲು ಬಡಿತಕ್ಕೆ ಆಘಾತಗೊಂಡು ಸ್ಥಳದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ. ತಂದೆ ಮಂಜುನಾಥ ತಾಯಿ ಕಮಲಮ್ಮರಿಗೆ ಎರಡನೇ ಮಗನಾಗಿದ್ದ ನಾಗರಾಜನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಹಗರಿಬೊಮ್ಮನಹಳ್ಳಿಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

17ಕ್ಕೂ ಹೆಚ್ಚು ಕುರಿಗಳ ಸಾವು: ಜೋರು ಮಳೆ ಹಿನ್ನೆಲೆಯಲ್ಲಿ ಸಿಡಿಲು ಬಡಿದು 17ಕ್ಕೂ ಹೆಚ್ಚು ಕುರಿಗಳು ಸಾವಿಗೀಡಾಗಿದ್ದು, 15ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ. ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಈ ಘಟನೆ ಜರುಗಿದೆ. ರೈತ ತಿಪ್ಪೇಶಪ್ಪ, ಮಂಜುನಾಥ,ತಳವಾರ ರೇವಣ್ಣಪ್ಪ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನು ಕಳೆದುಕೊಂಡ ಕುರಿಗಾಯಿ ಕುಟುಂಬ ಈಗ ಕಣ್ಣೀರಿಡುತ್ತಿದೆ. ಕಂಚಿಕೇರಿ ಗ್ರಾಮದಲ್ಲೂ ಸಿಡಿಲಿಗೆ ಒಂದು ಆಕಳು ಬಲಿಯಾಗಿದೆ.

ಇದನ್ನೂ ಓದಿ: ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಸಚಿವ: ಸಿದ್ದರಾಮಯ್ಯ

Last Updated : Apr 22, 2022, 9:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.