ETV Bharat / state

ಶಾಸಕ ಭೀಮಾನಾಯ್ಕ ದುಂಡಾವರ್ತನೆ ಖಂಡಿಸಿ ಹಗರಿಬೊಮ್ಮನಹಳ್ಳಿ ಬಂದ್​ಗೆ ಬಿಜೆಪಿ ಕರೆ

ಶಾಸಕ ಭೀಮಾನಾಯ್ಕ ಅವರ ಅಧಿಕಾರದ ದರ್ಪವನ್ನ ಖಂಡಿಸಿ ನ. 11ರಂದು ಹಗರಿ ಬೊಮ್ಮನಹಳ್ಳಿ ತಾಲೂಕ ಬಂದ್​ಗೆ ಬಿಜೆಪಿ ಕರೆ ನೀಡಿದೆ. ಬಂದ್​ಗೆ​ ತಾಲೂಕಿನ ಎಲ್ಲಾ ಮಂಡಲ ಅಧ್ಯಕ್ಷರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಈ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಕೆ.ನೇಮಿರಾಜ ಕರೆ ನೀಡಿದ್ದಾರೆ.

BJP calls for Hagaribommanahalli bund
ಶಾಸಕ ಭೀಮಾನಾಯ್ಕ ದುಂಡಾವರ್ತನೆ ಖಂಡಿಸಿ ಹಗರಿಬೊಮ್ಮನಹಳ್ಳಿ ಬಂದ್​ಗೆ ಬಿಜೆಪಿ ಕರೆ
author img

By

Published : Nov 9, 2020, 10:37 AM IST

Updated : Nov 9, 2020, 10:46 AM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ನ. 11ರಂದು ಹಗರಿ ಬೊಮ್ಮನಹಳ್ಳಿ ತಾಲೂಕು ಬಂದ್​ಗೆ ಬಿಜೆಪಿ ಕರೆ ನೀಡಿದೆ.

ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ..

ಈ ಸಂಬಂಧ ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಅವರು ಬಿಜೆಪಿಯ ಮುಖಂಡರೊಂದಿಗೆ ಸಭೆ ನಡೆಸಿದ್ದು, ಬಳಿಕ ಹಗರಿಬೊಮ್ಮನಹಳ್ಳಿ ತಾಲೂಕು ಬಂದ್​ಗೆ ಕರೆ ನೀಡಿರುವ ಕುರಿತ ಮಾಹಿತಿ ಪ್ರಕಟಿಸಿದ್ರು. ಬಳಿಕ ಮಾತನಾಡಿದ ಅವರು, ಹಾಲಿ ಶಾಸಕ ಭೀಮಾನಾಯ್ಕ ಅವರ ಅಧಿಕಾರದ ದರ್ಪವನ್ನ ಖಂಡಿಸಿ ಈ ಬಂದ್ ಮಾಡಲಾಗುವುದು. ಬಂದ್​ಗೆ ತಾಲೂಕಿನ ಎಲ್ಲಾ ಮಂಡಲ ಅಧ್ಯಕ್ಷರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಈ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.

ಬಂದ್​ಗೆ ಕಾರಣವೇನು?: ಬಿಜೆಪಿ ಕಾರ್ಯಕರ್ತರ ವಿರುದ್ಧ ತೋಳುತಟ್ಟಿ ಜಗಳಕ್ಕೆ ಪಂಥಾಹ್ವಾನ ನೀಡಿದ್ದಲ್ಲದೇ ಪುರಸಭೆಯ ಕಂಪೌಂಡ್​ ಹಾರಿ ಜಗಳಕ್ಕೆ ಹೋಗಿ ಶಾಸಕ ಭೀಮಾನಾಯ್ಕ ಅವರು ದುಂಡಾವರ್ತನೆ ಪ್ರದರ್ಶಿಸಿದ್ದರು. ಹಗರಿಬೊಮ್ಮನಹಳ್ಳಿಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಈ ಗಲಾಟೆ ನಡೆದಿತ್ತು. ಘಟನೆಯಲ್ಲಿ ಶಾಸಕ ಭೀಮಾನಾಯ್ಕ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಇದೀಗ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಸಭೆ ಸೇರಿ ನ.11 ರಂದು ಬಂದ್ ಗೆ ನಿರ್ಧಾರ ಕೈಗೊಂಡಿದ್ದಾರೆ. ಇಂದು ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಿದ್ದಾರೆ.

Last Updated : Nov 9, 2020, 10:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.