ETV Bharat / state

ಬಳ್ಳಾರಿ ಪೊಲೀಸರ ಕಾರ್ಯಾಚರಣೆ: 62 ಲಕ್ಷ ರೂ ಮೌಲ್ಯದ ನಗ,ನಾಣ್ಯ ವಶ - Bellary police seized Rs 62 lakh worth

2017 ರಿಂದ 2019ರ ವರೆಗೆ ನಡೆದ ಸರಣಿ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಬಳ್ಳಾರಿ ಪೊಲೀಸರು ಒಟ್ಟು 14 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಹಣ ಒಡವೆ ಸೇರಿದಂತೆ ಒಟ್ಟು 62 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸರಣಿ ಕಳ್ಳತನದ ಬೆನ್ನು ಹತ್ತಿದ ಬಳ್ಳಾರಿ ಪೊಲೀಸರು
author img

By

Published : Oct 17, 2019, 2:12 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಮನೆಗಳ್ಳತನ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಕಳುವಾದ ಅಂದಾಜು 62 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು ನಗದು ವಶಕ್ಕೆ ಪಡೆದಿದ್ದಾರೆ.

ಕಳೆದ ಸೆಪ್ಟೆಂಬರ್ 17ರಂದು ಹೊಸಪೇಟೆ ಅರವಿಂದ ನಗರದ ನಿವಾಸಿ ಗುರುರಾಜ ಎಂಬುವವರ ಮನೆಯ ತಿಜೋರಿಯಲ್ಲಿದ್ದ ಸರಿಸುಮಾರು 9 ಲಕ್ಷ ರೂ ನಗದು ಹಾಗೂ ಅಂದಾಜು 1 ಕೆ.ಜಿ. 220 ಗ್ರಾಂ ತೂಕದ ಬಂಗಾರದ ಆಭರಣ ಕಳುವಾಗಿತ್ತು. ಈ ಪ್ರಕರಣ ಬೇಧಿಸೋದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೆಚ್ಚುವರಿ ಎಸ್ಪಿ ಲಾವಣ್ಯ ಹಾಗೂ ಹೊಸಪೇಟೆ ನಗರ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ, ವಿಶೇಷ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದ್ದಾರೆ.

ಸರಣಿ ಕಳ್ಳತನ ಪ್ರಕರಣಗಳನ್ನು ಬೇಧಿಸಿದ ಬಳ್ಳಾರಿ ಪೊಲೀಸರು

ಬೆಂಗಳೂರು ಮೂಲದ ಸಚಿನ್, ಹೊಸಪೇಟೆಯ ದರ್ಶನ್ ಮತ್ತು ಗೋಣಿ ಬಸಪ್ಪ ಸೇರಿದಂತೆ ಐವರೂ ಮಹಿಳೆಯರನ್ನು ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9 ಲಕ್ಷ ರೂ ನಗದು ಸೇರಿದಂತೆ ಒಟ್ಟಾರೆ 47,80,000 ರೂ.ಗಳ ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ರು.

ಹೊಸಪೇಟೆ ನಗರದ ನಾನಾ ಕಡೆ 2017 ರಿಂದ 2019ರ ವರೆಗೆ ಸರಗಳ್ಳತನ, ಬೈಕ್ ಕಳವು, ಮನೆಗಳ್ಳತನ ಪ್ರಕರಣಗಳು ನಡೆದಿದ್ದವು.

Intro:ತಿಂಗಳಲ್ಲೇ 62 ಲಕ್ಷ ರೂ.ಗಳ ಮೌಲ್ಯದ ನಗ - ನಾಣ್ಯ ವಶ
14 ಮಂದಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಜಿಲ್ಲಾ ಪೊಲೀಸರು..!
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದಲ್ಲಿ ಭಾರೀ ಮೊತ್ತದ ಮನೆಗಳ್ಳತನ ಸೇರಿದಂತೆ ಇನ್ನಿತರೆ ಪ್ರಕರಣಗಳಲ್ಲಿ ಕಳುವಾದ ಅಂದಾಜು 62 ಲಕ್ಷ ರೂ.ಗಳ ಮೌಲ್ಯದ ನಗ, ನಾಣ್ಯವನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಸೆಪ್ಟೆಂಬರ್ 17ರಂದು ಹೊಸಪೇಟೆ ಅರವಿಂದ ನಗರದ ನಿವಾಸಿ ಗುರುರಾಜ ಎಂಬುವವರ ಮನೆಯ ತಿಜೋರಿಯಲ್ಲಿದ್ದ ಸರಿಸುಮಾರು 9 ಲಕ್ಷ ನಗದು ಹಣ ಹಾಗೂ ಅಂದಾಜು 1 ಕೆ.ಜಿ. 220 ಗ್ರಾಂ ತೂಕದ ಬಂಗಾರದ ಆಭರಣವು ಕಳುವಾಗಿತ್ತು. ಭಾರೀ ಮೊತ್ತದ ನಗ, ನಾಣ್ಯ ವಶಕ್ಕೆ ಪಡೆಯೋದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೆಚ್ಚುವರಿ ಎಸ್ಪಿ ಲಾವಣ್ಯ ಹಾಗೂ ಹೊಸಪೇಟೆ ನಗರ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚಿಸಿ, ಅತೀವ ಕಾರ್ಯಾಚರಣೆ ಮಾಡಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿಂದು ಸಂಜೆ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿ, ಈ ಭಾರೀ ಮೊತ್ತದ ಮನೆಗಳ್ಳತನದ ಪ್ರಕರಣದಲ್ಲಿ ಸುಮಾರು 16 ಮಂದಿ ಭಾಗಿಯಾಗಿದ್ದು, ಅದರಲ್ಲಿ ಐವರ ಮಹಿಳೆಯರೂ ಇದ್ದಾರೆ. ಇದೀಗ ಐವರು ಮಹಿಳೆಯರು ಸೇರಿದಂತೆ 14 ಮಂದಿ ಆರೋಪಿತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಭಾರೀ ಮೊತ್ತದ ನಗ, ನಾಣ್ಯ ದೋಚಿರುವ ಕಳ್ಳರು ಒಂದೆಡೆ ಯಿಂದ ಮತ್ತೊಂದೆಡೆಗೆ ಹಸ್ತಾಂತರಿಸುತ್ತಾ ಹೋಗಿದ್ದಾರೆ. ಆದರೆ, ಅವರ ಸಂಬಂಧಿಕರೇ ಆಗಿರುವ ಈ ಐವರು ಮಹಿಳೆಯರಿಗೂ ಈ ನಗ, ನಾಣ್ಯ ನೀಡಿದ್ದಾರೆ. ಅದು ಕೂಡ ಈ ಮಾಲು ಕಳ್ಳತನದ್ದೆಂದು ಗೊತ್ತಾಗಿದೆ ಎಂಬ ಮಾಹಿತಿಯನ್ನು ತನಿಖೆಯಲ್ಲಿ ಆ ಮಹಿಳೆಯರು ಬಾಯಿಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಮೂಲದ ಸಚಿನ್, ಹೊಸಪೇಟೆ ಮೂಲದವರಾದ ದರ್ಶನ್ ಮತ್ತು ಗೋಣಿ ಬಸಪ್ಪ ಸೇರಿದಂತೆ ಐದುಮಂದಿ ಮಹಿಳೆ ಯರನ್ನ ಈ ಭಾರೀ ಮೊತ್ತದ ನಗ, ನಾಣ್ಯ ದೋಚಿರುವ ಪ್ರಕರಣ ದಲ್ಲಿ ಬಂಧಿಸಿ, ಅವರಿಂದ 9 ಲಕ್ಷ ನಗದು ಹಣ ಸೇರಿದಂತೆ ಒಟ್ಟಾರೆ 47, 80,000 ರೂ.ಗಳ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳು ವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಅಲ್ಲದೇ, ಹೊಸಪೇಟೆ ನಗರದ ನಾನಾ ಕಡೆ 2017 ರಿಂದ 2019ರ ವರೆಗೆ ಸರಗಳ್ಳತನ, ಎರಡು ಬೈಕ್ ಕಳವು, ಎರಡು‌ ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಮಲಾಪುರದ ಬಸವರಾಜ, ಸಂಡೂರಿನ ಗುರ್ರಪ್ಪ, ಹಗರಿಬೊಮ್ಮನಹಳ್ಳಿಯ ಫೈರೋಜ್, ಸಂದೀಪ್, ಕರೀಂ ಸೇರಿದಂತೆ ಇತರೆ ಆರುಮಂದಿ ಆರೋಪಿತರನ್ನು ಬಂಧಿಸಿದ ಹೊಸಪೇಟೆ ಪೊಲೀಸರು, 1ಕೆಜಿ 225 ಗ್ರಾಂ ತೂಕದ ಚಿನ್ನ ಹಾಗೂ 16 ಲಕ್ಷ ನಗದು ಸೇರಿದಂತೆ ಒಟ್ಟಾರೆಯಾಗಿ 62 ಲಕ್ಷ ರೂ.ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಇಡೀ ಪ್ರಕರಣ ಗಳಿಗೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭಸುತ್ತಿರೊ ಶೋಯೇಬ್, ಶ್ಯಾಮ್, ಹನುಮಂತ ಎಂಬ ಕೈದಿಗಳೂ ಕೂಡ ಕುಮ್ಮಕ್ಕು ನೀಡಿದ್ದಾರೆಂದು ತಿಳಿಸಿದ್ದಾರೆ.
Body:ಇಡೀ ಪ್ರಕರಣ ಪತ್ತೆಹಚ್ಚುವಲ್ಲಿ‌ ಯಶಸ್ವಿಯಾದ ಜಿಲ್ಲಾ ಎಎಸ್ಪಿ ಲಾವಣ್ಯ, ಹೊಸಪೇಟೆ ಉಪವಿಭಾಗದ ಡಿವೈಎಸ್ಪಿ ರಘುಕುಮಾರ, ಸಿಪಿಐಗಳಾದ ಸಿದ್ದೇಶ್ವರ, ಪರಸಪ್ಪ ಭಜಂತ್ರಿ, ಕೆ. ಪ್ರಸಾದ ಗೋಖಲೆ, ನಾರಾಯಣ, ಪಿಐಗಳಾದ ಮಹಾಂತೇಶ ಸಜ್ಜನ್, ಸುಭಾಷ, ಪಿಎಸ್ ಐಗಳಾದ ಜಡಿಯಪ್ಪ, ಸುಪ್ರೀತ್, ಶರಣಪ್ಪ, ನಾಯಕ, ಎಎಸ್ ಐಗಳಾದ ಕೊದಂಡಪಾಣಿ, ರಾಮಪ್ಪ, ಸಿಬ್ಬಂದಿ ಉಮಾಶಂಕರ, ಸಾಬಯ್ಯ, ಶ್ರೀಧರ, ಸುರೇಶ, ಮಲಿಯಪ್ಪ, ಫಣಿರಾಜು, ಶ್ರೀನಿವಾಸ ಜಾವೀದ್, ರಘು, ಕೊಟ್ರೇಶ, ಮಾಣಿಕ್ಯರೆಡ್ಡಿ, ಪ್ರಕಾಶ, ಸಂಗಜ್ಜ, ಲಿಂಗರಾಜು, ಗಾಳೆಪ್ಪ, ಷಣ್ಮುಖ, ಕಾಳ್ಯಾನಾಯ್ಕ, ಮಂಜುನಾಥ, ರಾಮಮೂರ್ತಿ, ಬಡಾವಣೆ ಠಾಣೆಯ ಕೊಟ್ರೇಶ, ಪ್ರವೀಣ ಕುಮಾರ್, ಮಹಿಳಾ ಸಿಬ್ಬಂದಿ ಶಿಲ್ಪಾ, ಮಂಜುಳಾ, ಶಾರದಾ ಬಾಯಿ, ಸುಧಾಬಾಯಿ, ಗಂಗೂ ಮನ್ನಾಪುರ, ಉಮಾ, ಅನುಷಾ, ನಾಗವೇಣಿ ನೇತೃತ್ವದ ತಂಡಕ್ಕೆ ಎಸ್ಪಿ ಬಾಬಾ ಅಭಿನಂದನೆ ಸಲ್ಲಿಸಿ, ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_6_SP_PRESS_MEET_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.