ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮಹಿಳಾ ಮೀಸಲು ಕ್ಷೇತ್ರ 34ನೇ ವಾರ್ಡ್ನಿಂದ ಆಂಧ್ರದ ಕಮ್ಮ ಸಮುದಾಯದ ಇಬ್ಬರು ಮಹಿಳೆಯರು ಅಖಾಡಕ್ಕೆ ಇಳಿದಿದ್ದು, ಸ್ಥಳೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ರಾಜೇಶ್ವರಿ ಅವರ ಪತಿಯ ಹುಟ್ಟೂರು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕೊಟ್ಟಾಲಪಲ್ಲಿ. ಬಿಜೆಪಿ ಅಭ್ಯರ್ಥಿ ಉಜ್ವಲ ಅವರ ಪತಿ ಸಹ ಇದೇ ಊರಿನವರು. ಈ ಮಹಿಳೆಯರ ಪತಿಯಂದಿರು ಕೇವಲ ವ್ಯಾಪಾರಕ್ಕಾಗಿ ಬಳ್ಳಾರಿಗೆ ಆಗಮಿಸಿದ್ದು, ಇವರ ಮೂಲ ಆಂಧ್ರ.
ಈ ಹಿಂದೆ ಇವರು ಯಾವುದೇ ರಾಜಕೀಯ, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಯಾವುದೇ ಸಮಾಜ ಸೇವೆಯನ್ನು ಸಹ ಮಾಡಿಲ್ಲ. ಆದರೆ, ಇವರು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಹೇಗೆ? ಇವರಿಗೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಇವರ ಆಸ್ತಿ ನೋಡಿ, ಟಿಕೆಟ್ ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪಕ್ಷಕ್ಕಾಗಿ ದುಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡದೇ, ಆಂಧ್ರ ಸೊಸೆಯಂದಿರಿಗೆ ಹಣಕ್ಕಾಗಿ ಟಿಕೆಟ್ ನೀಡಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿ ದುಷ್ಕೃತ್ಯ