ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯು 2020ನೇ ಇಸವಿಯಲ್ಲಿ ಸಿಹಿ ಘಟನೆಗಳಿಗಿಂತ ಕಹಿ ಘಟನೆಗಳನ್ನೇ ಹೆಚ್ಚಾಗಿ ನೋಡಿದೆ. ಕೊರೊನಾ ಸಾವು-ನೋವು ಸೇರಿದಂತೆ ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಭ್ರಷ್ಟಾಚಾರ ಪ್ರಕರಣಗಳು ಈ ವರ್ಷದ ಹೈಲೈಟ್ ಆಗಿವೆ.
ಬಳ್ಳಾರಿ ವಲಯ ಐಜಿಪಿಯವರ ಕಿರುಕುಳಕ್ಕೆ ಬೇಸತ್ತು ಹಂಪಿ ಡಿವೈಎಸ್ಪಿಯವರ ರಾಜೀನಾಮೆ ಪ್ರಹಸನವೂ ಸೇರಿದಂತೆ ಮತ್ತಷ್ಟು ಕಹಿಯಾದ ಘಟನೆಗಳೇ ಹೆಚ್ಚಿವೆ. ಇದಲ್ಲದೆ ಭಾರೀ ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಷ್ಟ ಸೇರಿದಂತೆ ಕೌಟುಂಬಿಕ ಕಲಹ ಹಾಗೂ ಇನ್ನಿತರೆ ಕ್ಷುಲ್ಲಕ ಕಾರಣಗಳಿಂದಾಗಿ ಹತ್ತಾರು ಮಂದಿಯ ಕೊಲೆ ಪ್ರಕರಣಗಳೇ ಹೆಚ್ಚಾಗಿ ಸಂಭವಿಸಿವೆ.
2020ರ ಘಟನಾವಳಿಗಳಿವು
- ಮಾ. 01- ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಮಾತಿನಲ್ಲಿ ಹಿಡಿತ ಇರಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಾಗ್ದಾಳಿ!
- ಮಾ. 14- ಮಾಲವಿ ಫಕ್ಕೀರಸ್ವಾಮಿ ಉರುಸ್ನಲ್ಲಿ ಪ್ರಸಾದ ಸೇವಿಸಿ 120 ಮಂದಿ ಅಸ್ವಸ್ಥ!
- ಏ. 13- ಜಿಲ್ಲಾ ಉಸ್ತುವಾರಿ ಸಚಿವರ ಮೊದಲ ಕೋವಿಡ್ - 19 ಸಭೆ: ಈ ಸಭೆಯಿಂದ ಪತ್ರಕರ್ತರನ್ನು ಹೊರಗಿಟ್ಟ ಜಿಲ್ಲಾಡಳಿತ
- ಏ. 28- ಸಿರುಗುಪ್ಪದಲ್ಲಿ ಸುರಿದ ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ: ಎರಡೇ ದಿನದಲ್ಲಿ ಸರ್ವೇ ಕಾರ್ಯ ಮುಗಿಸಿದ ಜಿಲ್ಲಾಡಳಿತ!
- ಏ. 29- ಸಿರುಗುಪ್ಪದಲ್ಲಿ ದೇವದಾಸಿ ಪದ್ಧತಿ ಜೀವಂತ... ತಾಯಿಯೇ ಸ್ವಂತ ಮಗಳನ್ನು ಅನಿಷ್ಠ ಪದ್ಧತಿಗೆ ದೂಡುವ ಪ್ರಸಂಗ ಬೆಳಕಿಗೆ…! (EXCLUSIVE)
- ಏ. 30- ಬೆಂಗಳೂರಿನಿಂದ ಕಾಲ್ನಡಿಗೆ ಹೊರಟ ಜೀವ ಸಾವು... ಮೃತ ಜೀವಕ್ಕೆ ಪರಿಹಾರ ಘೋಷಿಸಿದ ಕಾರ್ಮಿಕ ಇಲಾಖೆ
- ಮೇ. 10- ಜಿಲ್ಲಾಡಳಿತದ ಸಮಯ ಸ್ಫೂರ್ತಿಯಿಂದ ಗರ್ಭಿಣಿ ಮಾನಸಿಕ ಅಸ್ವಸ್ಥೆಯ ಸುರಕ್ಷಿತ ಡೆಲಿವರಿ.. ಗಂಡು ಮಗುವಿನ ಜನ್ಮ
- ಜೂ. 12- ಮಹಾಮಾರಿ ಕೊರೊನಾ ಕೂಡಿಸಿತು ಸಹೋದರತ್ವ ಸಂಬಂಧ… ಕಣ್ಮರೆಯಾಗಿದ್ದ ಯುವತಿ ಗಣಿ ನಾಡಿನಲ್ಲಿ ಪ್ರತ್ಯಕ್ಷ…!
- ಜೂ.28- ಗಣಿನಾಡಿನ ಇಬ್ಬರು ವಿದ್ಯಾರ್ಥಿನಿಯರಿಗೆ ಕರೆ ಮಾಡಿ ಆಲ್ ದಿ ಬೆಸ್ಟ್ ಹೇಳಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
- ಜುಲೈ.14-ಪಿಯುಸಿ ಫಲಿತಾಂಶ ಪ್ರಕಟ ಇಂದು… ಕೊಟ್ಟೂರಿನ ಇಂದು ಪಿಯು ಕಾಲೇಜು ರಾಜ್ಯಕ್ಕೆ ಪ್ರಥಮ ಸ್ಥಾನ!
- ಜುಲೈ.16-ಗಣಿನಾಡಿನ ರಂಗಭೂಮಿಯ ಹಿರಿಯ ಜೀವಿ ಸುಭದ್ರಮ್ಮ ಮನ್ಸೂರ್ ನಿಧನ
- ಜುಲೈ.29- ವಿಶ್ವ ಹುಲಿ ದಿನಾಚರಣೆ ನಿಮಿತ್ತ ರಾಯಲ್ ಬಂಗಾಳ ಹುಲಿ ದತ್ತು ಪಡೆದ ಅರಣ್ಯ ಸಚಿವ ಆನಂದ್ ಸಿಂಗ್!
- ಆಗಸ್ಟ್ 04- ಪಿಟಿಪಿ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲು… ಕೊರಚ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ!
- ಆಗಸ್ಟ್ 14- ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಶಾಸಕರ ಮನೆ ಮೇಲೆ ದಾಳಿ ಪ್ರಕರಣ: ಬಳ್ಳಾರಿ ಜೈಲಿಗೆ ಬಂದ ಆರೋಪಿತರು!
- ಆಗಸ್ಟ್ 21- ಅನಾರೋಗ್ಯಕ್ಕೆ ತುತ್ತಾಗಿ ಮಡದಿ ಸತ್ತಿದ್ದಕ್ಕೆ ಬೇಸತ್ತು ತನ್ನಿಬ್ಬರು ಮಕ್ಕಳೊಂದಿಗೆ ನಾಲೆಗೆ ಹಾರಿದ ತಂದೆ… ಅದೃಷ್ಟವಶಾತ್ ಜೀವಂತವಾಗಿ ಬದುಕುಳಿದ ಮೊದಲನೇ ಮಗಳು!
- ಆಗಸ್ಟ್ 26- ಕೂಡ್ಲಿಗಿ ಬಳಿ ಭೀಕರ ಅಪಘಾತ: ಲಾರಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಂಡಕ್ಟರ್ ಹೊಟ್ಟೆಯಲ್ಲಿ ಹೊಕ್ಕಿದ ಕಬ್ಬಿಣದ ರಾಡುಗಳು!
- ಸೆಪ್ಟೆಂಬರ್ 01- ಬಳ್ಳಾರಿ ಜಿಲ್ಲಾ ಪಂಚಾಯಿತಿ ಮಾಜಿ ಸಿಇಒ ನಿತೀಶ್ ನೆತ್ತಿಯ ಮೇಲೆ ಅಕ್ರಮದ ತೂಗುಗತ್ತಿ
- ಅಕ್ಟೋಬರ್ 15- ಮಹಾನಗರ ಪಾಲಿಕೆ ಆಯುಕ್ತರ ಲಂಚದ ಬೇಡಿಕೆ ವಿಡಿಯೋ ವೈರಲ್… ಅದೆಲ್ಲಾ ಫೇಕ್ ವಿಡಿಯೋ ಎಂದ ಆಯುಕ್ತೆ ತುಷಾರಮಣಿ!
- ಅಕ್ಟೋಬರ್ 17- ಲಂಚ ಪಡೆದ ಆರೋಪದ ವಿಡಿಯೋ ವೈರಲ್: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಸೇವೆಯಿಂದ ಅಮಾನತು
- ಅಕ್ಟೋಬರ್ 24- ಹಂಪಿ ಡಿವೈಎಸ್ಪಿ ರಾಜೀನಾಮೆ ವಿಚಾರ: ಶಿಷ್ಠಾಚಾರ ಪಾಲನೆಯಾಗಿಲ್ಲ ಎಂದು ಎಸ್ಪಿ ಸೈದುಲು ಸ್ಪಷ್ಟನೆ
- ನವೆಂಬರ್ 10- ಹಗರಿಬೊಮ್ಮನಹಳ್ಳಿ ಬಂದ್ಗೆ ಭಾರೀ ವಿರೋಧ
- ನವೆಂಬರ್ 11- ಶಾಸಕರ ಮೇಲೆಯೇ ದುಂಡಾವರ್ತನೆ ಪ್ರದರ್ಶನ.. ನಮ್ಮನ್ನು ರಕ್ಷಣೆ ಮಾಡೋದು ಯಾರು ಗೃಹ ಸಚಿವರೇ? ಶಾಸಕ ಭೀಮಾ ನಾಯ್ಕ ಪ್ರಶ್ನೆ
- ನವೆಂಬರ್ 11- ಹಗರಿಬೊಮ್ಮನಹಳ್ಳಿ ಬಂದ್ ಹಿನ್ನಲೆ: ಅಂಗಡಿ- ಮುಂಗಟ್ಟು ಸಂಪೂರ್ಣ ಸ್ತಬ್ಧ
- ನವೆಂಬರ್ 13- ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆಯಾಗಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್ ನೇಮಕ
- ನವೆಂಬರ್ 17- ಕರ್ನಾಟಕ-ಆಂಧ್ರ ಗಡಿ ಸರ್ವೇ ಕಾರ್ಯದ ಹಿನ್ನೆಲೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
- ನವೆಂಬರ್ 23- ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಕನ್ನಡ ಒಕ್ಕೂಟ ವಿರೋಧ... ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಭಾಗಿ
- ನವೆಂಬರ್ 23- ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕ್ಯಾಬಿನೆಟ್ ನಿರ್ಧಾರ… ಅದು ನನ್ನ ನಿರ್ಧಾರವಲ್ಲ: ಸಚಿವ ಮಾಧುಸ್ವಾಮಿ
- ನವೆಂಬರ್ 24- ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ದಿಢೀರ್ ವರ್ಗಾವಣೆ
- ನವೆಂಬರ್ 28- ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸದೆ ನೂತನ ವಿಜಯನಗರ ಜಿಲ್ಲೆ ಘೋಷಣೆ.. ಪರಿಣಾಮ ಎದುರಿಸಬೇಕಾಗುತ್ತೆ- ಶಾಸಕ ಗಾಲಿ ಸೋಮಶೇಖರ ರೆಡ್ಡಿ ಎಚ್ಚರಿಕೆ
- ಡಿಸೆಂಬರ್ 02- ನೂತನ ವಿಜಯನಗರ ಜಿಲ್ಲೆ ರಚನೆ… ಸಚಿವ ಶ್ರೀರಾಮುಲು-ರೆಡ್ಡಿ ಸಹೋದರರಲ್ಲಿ ಭಾರೀ ಬಿರುಕು
- ಡಿಸೆಂಬರ್ 09- ಬೈಲೂರು ಗ್ರಾಪಂ ಸದಸ್ಯರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 13 ಮಂದಿ ವಿರುದ್ಧ ಎಫ್ಐಆರ್ ದಾಖಲು!