ETV Bharat / state

ಸಿಂಹಗಳ ಸಫಾರಿಗೆ ಸಿದ್ಧವಾಗುತ್ತಿದೆ ಬಳ್ಳಾರಿ ವಾಜಪೇಯಿ ಝೂಲಾಜಿಕಲ್‌ ಪಾರ್ಕ್

ಶಿಲ್ಪಕಲಾ ವೈಭವದ ಮೂಲಕ ವಿಶ್ವದ ಗಮನ ಸೆಳೆದಿರುವ ಐತಿಹಾಸಿಕ ಹಂಪಿಯ ಬಳಿಯೇ ರಾಜ್ಯದ ಅತಿ ದೊಡ್ಡ ಜೈವಿಕ ಉದ್ಯಾನವನವಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇದೀಗ ಅದು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆಯುತ್ತಿದೆ.

ಅಟಲ್ ಬಿಹಾರಿ ವಾಜಪೇಯಿ ಝುವಾಲಜಿಕಲ್‌ ಪಾರ್ಕ್
author img

By

Published : May 3, 2019, 11:17 AM IST

ಬಳ್ಳಾರಿ: ರಾಜ್ಯದಲ್ಲಿಯೇ ದೊಡ್ಡ ಜೈವಿಕ ಉದ್ಯಾನವನವಾದ ಜಿಲ್ಲೆಯ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಕಾರಣ ​ಎರಡು ಸಿಂಹ ಮತ್ತು ನಾಲ್ಕು ಹುಲಿಗಳನ್ನು ತರಲಾಗಿದ್ದು, ಈ ನಿಟ್ಟಿನಲ್ಲಿ ಪ್ರಾಣಿ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸಿಂಹ ಸಫಾರಿಗೆ ತಯಾರಿ ನಡೆದಿದೆ. ಉದ್ಯಾನವನದಲ್ಲಿ ಎರಡು ಸಿಂಹ, ನಾಲ್ಕು ಹುಲಿ, 200 ಜಿಂಕೆಗಳು ಓಡಾಡಿಕೊಂಡಿದ್ದು ಇವುಗಳನ್ನು ನೋಡಲೆಂದೇ ದಿನನಿತ್ಯ ಸಾವಿರಾರು ಜನರು ಪಾರ್ಕ್​ಗೆ ಬರುತ್ತಿದ್ದಾರೆ.

ಸಿಂಹ ಸಫಾರಿಗಾಗಿ 30 ಹೆಕ್ಟೇರ್​ ಪ್ರದೇಶ ಮೀಸಲಿರಿಸಲಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಫೆ. 21ರಂದು ಪೃಥ್ವಿ ಮತ್ತು ರಮ್ಯಾ ಹೆಸರಿನ ಎರಡು ಹುಲಿಗಳನ್ನು ಈ ಉದ್ಯಾನಕ್ಕೆ ತಂದಿದ್ದು, ಇದೀಗ ವಾತಾವರಣಕ್ಕೆ ಹೊಂದಿಕೊಳ್ಳಲಿವೆಯೇ ಎನ್ನುವುದಕ್ಕೆ ನಿಗಾವಹಿಸಲಾಗುತ್ತಿದೆ. ಅಲ್ಲದೆ ಬನ್ನೇರುಘಟ್ಟ ಅಭಯಾರಣ್ಯದಿಂದ ಎರಡು ಗಂಡು ಮತ್ತು ಎರಡು ಹೆಣ್ಣು ಹುಲಿ ಸೇರಿದಂತೆ ಒಟ್ಟು 4 ಹುಲಿಗಳು ಬಂದಿದ್ದು, ಅವುಗಳು ಸಹ ಸಫಾರಿಗೆ ರೆಡಿಯಾಗಿವೆ. ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಆರಂಭದಲ್ಲಿ ಜಿಂಕೆಗಳ ಸಫಾರಿ ಆಗಿತ್ತು. ಇದೀಗ ಹುಲಿಗಳ ಆಗಮನ, ತದನಂತರ ಸಿಂಹಗಳ ಸಫಾರಿ ನಡೆಯಲಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಒಬ್ಬರಿಗೆ 50 ರೂ.:

ಉದ್ಯಾನದಲ್ಲಿ ಸಫಾರಿ ತೆರಳುವ ಪ್ರಾಣಿ ಪ್ರಿಯರಿಗೆ ತಲಾ 50 ರೂ. ಪಡೆದು ಅರಣ್ಯ ಇಲಾಖೆ ವಾಹನದಲ್ಲಿಯೇ ಸುತ್ತಾಡಿಸುವ ವ್ಯವಸ್ಥೆ ಇದೆ. ಉದ್ಯಾನದಲ್ಲಿ ಸಿಂಹಗಳ ವಾಸಕ್ಕೆ ಮನೆ ನಿರ್ಮಿಸಲಾಗಿದೆ. ಸಫಾರಿಯ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಅಲ್ಲಲ್ಲಿ ಕೆರೆಗಳನ್ನ ನಿರ್ಮಿಸಲಾಗಿದೆ. ಉದ್ಯಾನದಲ್ಲಿನ ಪ್ರಾಣಿಗಳು, ಕಚೇರಿಯ ಬಳಕೆ, ಗಿಡ-ಮರಗಳಿಗೆ ನೀರಿನ ವ್ಯವಸ್ಥೆಗಾಗಿ ಕಮಲಾಪುರ ಬಳಿಯ ಎಲ್​ಎಲ್​ಸಿಯಿಂದ 2.5 ಕ್ಯೂಸೆಕ್​ ನೀರು ಪಡೆಯುವುದಕ್ಕೆ ಯೋಜನೆಯೂ ಸಿದ್ಧವಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿ:

2017ರ ನ. 3ರಂದು ಕಮಲಾಪುರದ ಬಳಿಯ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಯನ್ನ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಿದ್ದರು. ಇದರಲ್ಲಿ 75 ಚುಕ್ಕೆ ಜಿಂಕೆಗಳು, 80 ಕೃಷ್ಣಮೃಗ, 7 ನೀರು​ನಾಯಿ, 6 ಸಾಂಬಾರ್​ ಪ್ರಾಣಿಗಳಿವೆ. ಆ ‌ಪೈಕಿ 5 ಚುಕ್ಕೆ ಜಿಂಕೆಗಳು, 9 ಕೃಷ್ಣಮೃಗ, 2 ನೀರು​ನಾಯಿ ಮರಿಗಳಾಗಿದ್ದು ಜಿಂಕೆಗಳ ಸಂತತಿಯೂ ವೃದ್ಧಿಸಿದೆ. ಈ ಜಿಂಕೆ ಸಫಾರಿಯನ್ನು ನೋಡಲು ಪ್ರವಾಸಿಗರು, ಪ್ರಾಣಿ ಪ್ರೀಯರು ಇದೀಗ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಹುಲಿ ಮತ್ತು ಸಿಂಹಗಳ ಸಫಾರಿಗೆ ಸಿದ್ಧವಾಗಿದ್ದು, ಕತ್ತೆ ಕಿರುಬ ಸೇರಿ ಇತರ ಕಾಡುಪ್ರಾಣಿಗಳ ಸಫಾರಿಗೂ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಅಟಲ್ ಬಿಹಾರಿ ವಾಜಪೇಯಿ ಝುವಾಲಜಿಕಲ್‌ ಪಾರ್ಕ್

ಜೀವನದಲ್ಲಿ ಹುಲಿ ಹಾಗೂ ಸಿಂಹಗಳನ್ನು ನೇರವಾಗಿ ನೋಡಿರಲಿಲ್ಲ. ಇದೀಗ ಅವುಗಳನ್ನು ನೋಡಿ ಸಂತೋಷವಾಯ್ತು. ಕಮಲಾಪುರದ ಈ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್​ನಲ್ಲಿ ಬೇಗ ಈ ಸಫಾರಿ ಪ್ರಾರಂಭವಾಗಲಿ ಎನ್ನುತ್ತಾರೆ ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂಜೀವ್ ಕುಮಾರ್ ಸೂಡಿ.

ಒಟ್ಟಾರೆ, ಉದ್ಯಾನಕ್ಕೆ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಲು ಮೂಲ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖಾ ಅಧಿಕಾರಿಗಳು ಉತ್ಸುಕತೆ ತೋರುತ್ತಿದ್ದಾರೆ. ಈ ಪ್ರದೇಶದಲ್ಲಿ ಉದ್ಯಾನವನಕ್ಕೆ ಈ ಕಾಡುಪ್ರಾಣಿಗಳನ್ನು ತಂದು ಬಿಟ್ಟಿದ್ದು ಸಾರ್ವಜನಿಕರಿಗೆ ನೋಡಲು ಸಂತೋಷಪಡುತ್ತಿದ್ದಾರೆ.

Intro:ದೇಶದಲ್ಲೇ ಅತ್ಯಂತ ದೊಡ್ಡ ಜೈವಿಕ ಉದ್ಯಾನ ಎನ್ನುವ ಹೆಗ್ಗಳಿಕೆ ಹೊಂದಿರುವ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರದ ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ ಗೆ ಎರಡು ಸಿಂಹ ಮತ್ತು ನಾಲ್ಕು ಹುಲಿಗಳನ್ನು ತರಲಾಗಿದೆ. ಪ್ರಾಣಿ ಪ್ರೀಯರಲ್ಲಿ ತೀವ್ರ ಕುತೂಲಹ ಮೂಡಿಸಿದ್ದ ಸಿಂಹ ಸಫಾರಿಗೆ ಕಾಲ ಕೂಡಿ ಬಂತು.
ಈ ಪಾರ್ಕ್ ಗೆ ಜಿಂಕೆನೂ ಬಂತು, ಹುಲಿ - ಸಿಂಹ ಕಡೆಗೂ ಬಂತು. ಪಾರ್ಕ್ ಗೆ ಕಳೆ ಬಂತು.

Body:ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಜೂಯಾಲಾಜಿಕಲ್ ಪಾರ್ಕ್ ಎರಡು ಸಿಂಹ, ನಾಲ್ಕು ಹುಲಿಗಳು, 200 ಜಿಂಕೆಗಳು ಇವೆ. ಇದನ್ನು ನೋಡಲು ಸಾರ್ವಜನಿಕರು ನಾಗಲೋಟವಾಗಿ ಆಗಮಿಸಿದ್ದು ವಿಶೇಷ.

ಸಿಂಹ ಸಫಾರಿಗಾಗಿ 30 ಹೆಕ್ಟೇರ ಪ್ರದೇಶ ಮೀಸಲಿರಿಸಲಾಗಿದೆ.
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಪೃಥ್ವಿ ಮತ್ತು ರಮ್ಯಾ ಹೆಸರಿನ 2 ಹುಲಿಗಳನ್ನು ಫೆಬ್ರವರಿ 21 ರಂದು ಕಮಲಾಪುರ ಜೈವಿಕ ಉದ್ಯಾನಕ್ಕೆ ತಂದು ವಾತಾವರಣಕ್ಕೆ ಹೊಂದಿಕೆಯಾಗಲು ವೀಕ್ಷಣೆಗೆ ಇಡಲಾಗಿತ್ತು.

ಆದಾದ ನಂತರ ಬನ್ನೇರುಘಟ್ಟ ಅಭಯಾರಣ್ಯ ದಿಂದ ಮತ್ತೆರಡು ಹುಲಿಗಳು ಬಂದಿರುವುದರಿಂದ ಒಟ್ಟು 4 ಹುಲಿಗಳು ಸಫಾರಿಗೆ ರೆಡಿಯಾಗಿವೆ. ಅದರಲ್ಲಿ ಎರಡು ಗಂಡು, ಎರಡು ಹೆಣ್ಣು ಹುಲಿಗಳಿವೆ.

ಎರಡು ಸಿಂಹಗಳು ಆಗಮನ :

ಬನ್ನೇರುಘಟ್ಟ ಅಭಯಾರಣ್ಯದಿಂದ 2 ಸಿಂಹಗಳನ್ನು ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ತಂದಿದ್ದು. ಬಳ್ಳಾರಿಯ ಬಿರುಬಿಸಿನ ತಾಪಕ್ಕೆ ಹೊಂದಿಕೊಳ್ಳಲಿವೆಯೇ ? ಎನ್ನುವುದಕ್ಕೆ ನಿಗಾವಹಿಸಲಾಗುತ್ತಿದೆ. ವಾತಾವರಣ ಕ್ಕೆ ಹೊಂದಿಕೊಂಡ ನಂತರ ಸಫಾರಿಗೆ ಬಿಡುತ್ತಿದ್ದು, ಮತ್ತೆರೆಡು ಸಿಂಹಗಳು ಉದ್ಯಾನಕ್ಕೆ ಬರಬಹುದು ಎನ್ನುವುದು ಅರಣ್ಯ ಇಲಾಖೆಯ ಸಿಬ್ಬಂದಿ ಅಭಿಪ್ರಾಯ.

ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಆರಂಭದಲ್ಲಿ ಜಿಂಕೆಗಳ ಸಫಾರಿ ಆಯ್ತ, ನಂತರ ಹುಲಿಗಳ ಆಗಮನ ತದನಂತರ ಸಿಂಹಗಳ ಸಫಾರಿಗೆ ಕಾಲ ಕೂಡಿ ಬಂತು. ಸಾರ್ವಜನಿಕರ ಈ ಹುಲಿ ಸಿಂಹಗಳನ್ನು ನೋಡಲು ನಾಗಲೋಟವಾಗಿ ಬಂದಿದ್ದು ವಿಶೇಷ ವಾಗಿತ್ತು.

ಒಬ್ಬರಿಗೆ 50 ರೂಪಾಯಿ :

ಉದ್ಯಾನದಲ್ಲಿ ಸಫಾರಿ ತೆರಳುವ ಪ್ರಾಣಿ ಪ್ರಿಯರಿಗೆ ತಲಾ 50 ರೂಪಾಯಿ ಪಡೆದು ಅರಣ್ಯ ಇಲಾಖೆ ವಾಹನದಲ್ಲಿಯೇ ಸುತ್ತಾಡಿಸುವ ವ್ಯವಸ್ಥೆಯೂ ಇಲ್ಲಿದೆ. ಜೈವಿಕ ಉದ್ಯಾನದಲ್ಲಿ ಸಿಂಹ ಸಫಾರಿಗೆ 3.5 ಕಿಲೋ ಮೀಟರ್ ಉದ್ದ ಹಾಗೂ 16 ಅಡಿ ಎತ್ತರದಲ್ಲಿ ತಂತಿ ಬೇಲಿ ಅಳವಡಿಸಲಾಗಿದೆ ಎಂದರು.

ಎರಡು ಹೆಣ್ಣು ಗಂಡು ಸಿಂಹಗಳನ್ನು ಸಫಾರಿಗೆ ಇರುವ ಯೋಜನೆ ರೂಪಿಸಿಲಾಗಿದೆ. ಇರದಲ್ಲಿ ಬನ್ನೇರುಘಟ್ಟ ಅಭಯಾರಣ್ಯ ಪ್ರದೇಶದಿಂದ ಒಂದು ಹೆಣ್ಣು , ಗಂಡು ಸಿಂಹಗಳನ್ನು ವಾಹನಗಳಲ್ಲಿ ತರಲಾಗಿದೆ.

ಉದ್ಯಾನದಲ್ಲಿ ಸಿಂಹಗಳ ವಾಸಕ್ಕೆ ಮನೆ ನಿರ್ಮಿಸಲಾಗಿದೆ. ಸಫಾರಿಯ ಪ್ರದೇಶದಲ್ಲಿ ಕುಡಿವ ನೀರಿಗಾಗಿ ಅಲ್ಲಲ್ಲಿ ಕೆರೆಗಳನ್ನಜ ನಿರ್ಮಿಸಲಾಗಿದೆ ಎಂದರು. ಉದ್ಯಾನದಲ್ಲಿನ ಪ್ರಾಣಿಗಳು, ಕಚೇರಿಯ ಬಳಕೆ, ಗಿಡ ಮರಗಳಿಗೆ ನೀರಿನ ವ್ಯವಸ್ಥೆ ಗಾಗಿ ಕಮಲಾಪುರ ಬಳಿಯ ಎಲ್ ಎಲ್ ಸಿ ಯಿಂದ 2.5 ಕ್ಯೂಸೆಕ್ ನೀರು ಪಡೆಯುವುದಕ್ಕೆ ಯೋಜನೆಯೂ ಸಿದ್ಧವಾಗಿದೆ ಎಂದರು.

ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿ :

2017 ನವೆಂಬರ್ 3 ರಂದು ಕಮಲಾಪುರದ ಬಳಿಯ ಇಂದಿರಾ ಪ್ರಿಯದರ್ಶಿನಿ ಜಿಂಕೆ ಸಫಾರಿಯನ್ನಹ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ್ದರು.
ಇರದಲ್ಲಿ 75 ಚುಕ್ಕೆ ಜಿಂಕೆಗಳು, 80 ಕೃಷ್ಣಮೃಹ, 7 ನೀರ್ಗಾಯಿ, 6 ಸಾಂಬಾರ್ ಪ್ರಾಣಿಗಳಿವೆ. ಆ ‌ಪೈಕಿ 5 ಚುಕ್ಕೆ ಜಿಂಕೆಗಳು, 9 ಕೃಷ್ಣಮೃಗಾ, 2 ನೀರ್ ಗಾಯಿ ಮರಿಗಳಾಗಿ ಜಿಂಕೆಗಳ ಸಂತತಿ ವೃದ್ಧಿಸಿದೆ. ಈ ಜಿಂಕೆ ಸಫಾರಿಯನ್ನು ನೋಡಲು ಪ್ರವಾಸಿಗರು, ಪ್ರಾಣಿಪ್ರೀಯರಿಗೆ ಹೆಚ್ಚಾಗಿ ಆಗಮಿಸುತ್ತಿದ್ದಾರೆ.

ಈ ಜಿಂಕೆಗಳು, ಹುಲಿಗಳು ಮತ್ತು ಸಿಂಹಗಳ ಸಫಾರಿಗೆ ಸಿದ್ಧವಾಗಿದ್ದು. ಕತ್ತೆ ಕಿರುಬ ಸೇರಿ ಇತರ ಕಾಡುಪ್ರಾಣಿಗಳ ಸಫಾರಿಗೆ ಚಿಂತನೆ ನಡೆದಿದೆ.

ಜೀವನದಲ್ಲಿ ಹುಲಿಗಳು, ಸಿಂಹಗಳನ್ನು ನೇರವಾಗಿ ನೋಡಿದಿಲ್ಲ ಅವುಗಳನ್ನು ನೋಡಿ ಸಂತೋಷವಾಯ್ತ್ ,
ಕಮಲಾಪುರ ಈ ಅಟಲ್ ಬಿಹಾರಿ ವಾಜಪೇಯಿ ಜೂಯಾಲಾಜಿಕಲ್ ಪಾರ್ಕ್ ಬೇಗ ಈ ಸಫಾರಿ ಪ್ರಾರಂಭವಾಗಲಿ ಎಂದು ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಂಜೀವ್ ಕುಮಾರ್ ಸೂಡಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಉದ್ಯಾನಕ್ಕೆ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯಲು ಮೂಲ ಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಉತ್ಸುಕತೆ ತೋರುತ್ತಿದ್ದಾರೆ.

Conclusion:ಒಟ್ಟಾರೆಯಾಗಿ ಈ ಪ್ರದೇಶದಲ್ಲಿ ಉದ್ಯಾನವನಕ್ಕೆ ಈ ಕಾಡುಪ್ರಾಣಿಗಳನ್ನು ತಂದು ಬಿಟ್ಡಿದ್ದು ಸಾರ್ವಜನಿಕರಿಗೆ ನೋಡುಲು ಸಂತೋಷವಾಗಿದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.