ಬಳ್ಳಾರಿ: ಮಹಾನಗರ ಪಾಲಿಕೆ ಅಧಿಕಾರಿಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡ ಘಟನೆ ನಗರದ ನಲ್ಲಗಡ್ಡ ಪ್ರದೇಶದಲ್ಲಿ ನಡೆದಿದೆ.
ನಮ್ಮ ಏರಿಯಾದಲ್ಲಿ ಏನೆಲ್ಲಾ ಸಮಸ್ಯೆಗಳಿದ್ರೂ ಅದನ್ನು ನೀವು ಬಗೆಹರಿಸಿಲ್ಲ ಎಂದು ಆರೋಪಿಸಿ, ನಗರ ಶಾಸಕ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರಿಗೆ ಕರೆ ಮಾಡಿ, ಸ್ಥಳದಲ್ಲೇ ಇದ್ದ ಅಧಿಕಾರಿಗೆ ಮಾತನಾಡಲು ಫೋನ್ ಕೊಟ್ಟಿದ್ದರು.
ಈ ವೇಳೆ ಶಾಸಕರು ಏನೇ ಸಮಸ್ಯೆ ಇದ್ರೂ ಅದನ್ನು ಬಗೆಹರಿಸಿ ಎಂದು ಅಧಿಕಾರಿ ಖಾಜಾಸಾಬ್ಗೆ ದೂರವಾಣಿ ಮೂಲಕ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ನಲ್ಲಗಡ್ಡ ಪ್ರದೇಶದಲ್ಲಿನ ಚರಂಡಿಗಳು ಪ್ರತಿನಿತ್ಯ ಬ್ಲಾಕ್ ಆಗಿ ದುರ್ವಾಸನೆ ಬರುತ್ತಿದೆ. ಅಲ್ಲಿನ ಜನರು ಪ್ರತಿನಿತ್ಯ ಮಹಾನಗರ ಪಾಲಿಕೆಗೆ ಬಂದು ದೂರು ಕೊಡಬೇಕಾ ಎಂದು ಅಧಿಕಾರಿಗೆ ಪ್ರಶ್ನಿಸಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ.
ಜನರಿಗೆ ನಡೆಯಲು ಸ್ಥಳ ಬಿಡಿ. ಕಸ ತೆಗೆಯುವಾಗ ಸ್ಲ್ಯಾಬ್ ತೆಗೆಯೋದು ಬೇಡ, ಮುಚ್ಚುವುದು ಬೇಡ. ಮೊದಲು ಚರಂಡಿ ಮೇಲಿನ ಸ್ಲ್ಯಾಬ್ಗಳನ್ನು ತೆಗೆಯಿರಿ ಎಂದು ಮಹಿಳೆಯರು ಒತ್ತಾಯಿಸಿದ್ರು.