ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಕಚ್ಚಾ ಮನೆಯ ಮೇಲ್ಛಾವಣಿ ಕುಸಿತದಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ ಕುಸಿದಿದ್ದು, ಮನೆಯೊಳಗೆ ಮಲಗಿದ್ದ ಇಮಾಮ್ ಬೀ (45), ಹಸೀನಾ (25), ಇಮ್ರಾನ್ (3) ಚಿರನಿದ್ರೆಗೆ ಜಾರಿದ್ದಾರೆ.ನಿರಂತರವಾಗಿ ಮಳೆ ಸುರಿದ ಪರಿಣಾಮ ಮನೆ ಶಿಥಿಲಗೊಂಡು ಕುಸಿದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ, ಸಿಇಒ ಕೆ.ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.