ETV Bharat / state

ಕನ್ನಡಪರ ಹೋರಾಟಗಾರರಿಗೆ ಸಮನ್ಸ್​​: ಸಂಡೂರು‌ ಬಳಿ ಕರಾಳ ದಿನಾಚರಣೆ - ಜಿಂದಾಲ್

ಯಾವುದೇ ಪರವಾನಗಿ ಪಡೆಯದೇ ಜಿಂದಾಲ್ ಉಕ್ಕು ಕಾರ್ಖಾನೆ ಎದುರು ಪ್ರತಿಭಟ‌ನೆ ಕೈಗೊಂಡಿದ್ದ ಕನ್ನಡಪರ ಹೋರಾಟಗಾರಿಗೆ ಸಮನ್ಸ್ ಜಾರಿಗೊಳಿಸಿದ್ದರಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​​ ನೇತೃತ್ವದಲ್ಲಿಂದು‌ ಈ‌ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.

ಸಂಡೂರು‌ ಬಳಿ ಕರಾಳ ದಿನಾಚರಣೆ
author img

By

Published : Jul 3, 2019, 10:20 PM IST

ಬಳ್ಳಾರಿ: ಯಾವುದೇ ಪರವಾನಗಿ ಪಡೆಯದೇ ಜಿಂದಾಲ್ ಉಕ್ಕು ಕಾರ್ಖಾನೆ ಎದುರು ಪ್ರತಿಭಟ‌ನೆ ಕೈಗೊಂಡಿದ್ದ ಕನ್ನಡಪರ ಹೋರಾಟಗಾರಿಗೆ ಸಮನ್ಸ್ ಜಾರಿಗೊಳಿಸಿದ್ದರಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​​ ನೇತೃತ್ವದಲ್ಲಿಂದು‌ ಈ‌ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.

ಸಂಡೂರು‌ ಬಳಿ ಕರಾಳ ದಿನಾಚರಣೆ

ಜಿಲ್ಲೆಯ ಸಂಡೂರು ತಾಲೂಕು ದಂಡಾಧಿಕಾರಿ ಕಚೇರಿಯ ಎದುರು ವಾಟಾಳ್ ನಾಗರಾಜ್​​ ಸಮಕ್ಷಮದಲ್ಲಿ ಹತ್ತಾರು ಕನ್ನಡಪರ ಹೋರಾಟಗಾರರು ಜಮಾಯಿಸಿ ಕೆಲಕಾಲ ತಹಸೀಲ್ದಾರ್ ಹಾಗೂ ಜಿಂದಾಲ್ ಸಮೂಹ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಕಪ್ಪು ನಿಲುವಂಗಿಯನ್ನು ಧರಿಸುವ ಮುಖೇನ ವಾಟಾಳ್ ನಾಗರಾಜ್​ ಗಮನ ಸೆಳೆದರು.‌

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌‌ ನಾಗರಾಜ್​​​, ತಾಲೂಕು ದಂಡಾಧಿಕಾರಿ ನೀಡಿರುವ ಸಮನ್ಸ್​​ಗೆ ಕಿಂಚಿತ್ತೂ ಬೆಲೆ ಕೊಡುವುದಿಲ್ಲ. ಅವರು ಜಿಂದಾಲ್ ಸಂಸ್ಥೆಯ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದೇವೆ ಹೊರತು ಯಾವುದೇ ಗಲಾಟೆ ಮಾಡಿಲ್ಲ. ಕೊಲೆ ಮಾಡಿಲ್ಲ. ಆದರೆ, ತಹಸೀಲ್ದಾರ್ ನೋಟಿಸ್ ಕೊಟ್ಟಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಸಾವಿರಾರು ಹೋರಾಟ ಮಾಡಿದ್ದೇವೆ, ಯಾವ ತಹಸೀಲ್ದಾರ್ ಕೂಡ ಈ ರೀತಿಯ ಆದೇಶವನ್ನು ನೀಡಿಲ್ಲ. ಆದ್ದರಿಂದ ಈ ಆದೇಶವನ್ನ ಇಲ್ಲಿ ಹರಿದು ಹಾಕುತ್ತೇನೆ ಎಂದರು.

Intro:ಕನ್ನಡಪರ ಹೋರಾಟಗಾರರಿಗೆ ಸಮನ್ಸ್ ಜಾರಿ
ಸಂಡೂರು‌ ತಾಲೂಕು ಕಚೇರಿಯ‌ ಎದುರು ಕರಾಳ ದಿನಾಚರಣೆ: ಸಮನ್ಸ್ ನೋಟಿಸ್ ಹರಿದು ಎಸೆದ ವಾಟಾಳ್ ನಾಗರಾಜ….
ಬಳ್ಳಾರಿ: ಯಾವುದೇ ಪರವಾನಗಿ ಪಡೆಯದೇ ಜಿಂದಾಲ್
ಉಕ್ಕು ಕಾರ್ಖಾನೆ ಎದುರು ಪ್ರತಿಭಟ‌ನೆ ಕೈಗೊಂಡಿದ್ದ ಕನ್ನಡ
ಪರ ಹೋರಾಟಗಾರಿಗೆ ಸಮನ್ಸ್ ನೋಟಿಸ್ ಜಾರಿಗೊಳಿಸಿದ್ದ
ರಿಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ನೇತೃತ್ವದಲ್ಲಿಂದು‌ ಈ‌ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲಾಯಿತು.
ಜಿಲ್ಲೆಯ ಸಂಡೂರು ತಾಲೂಕು ದಂಡಾಧಿಕಾರಿ ಕಚೇರಿಯ
ಎದುರು ವಾಟಾಳ್ ನಾಗರಾಜ ಸಮಕ್ಷಮದಲ್ಲಿ ಹತ್ತಾರು ಕನ್ನಡ
ಪರ ಹೋರಾಟಗಾರರು ಜಮಾಯಿಸಿ ಕೆಲಕಾಲ ತಹಸೀಲ್ದಾರ್ ಹಾಗೂ ಜಿಂದಾಲ್ ಸಮೂಹ ಸಂಸ್ಥೆಯ ವಿರುದ್ಧ ಘೋಷಣೆ ಕೂಗಿದರು. ಕಪ್ಪನೆಯ ನಿಲುವಂಗಿಯನ್ನು ಧರಿಸುವ ಮುಖೇನ ವಾಟಾಳ್ ನಾಗರಾಜ ವಿಶೇಷ ಗಮನ ಸೆಳೆದರು.‌ ನಾನಾ‌ ಕನ್ನಡ
ಪರ ಸಂಘಟನೆಗಳು ಹಣೆಗೆ ಕಪ್ಪುಪಟ್ಟಿ ಧರಿಸಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್‌‌ ನಾಗರಾಜ, ತಾಲೂಕು ದಂಡಾಧಿಕಾರಿಗೆ ನೀಡಿರುವ ಸಮನ್ಸ್ ನೋಟಿಸ್ ಗೆ ಕಿಂಚಿತ್ತೂ ಮರ್ಯಾದೆ ಕೊಡಲ್ಲ. ಅವರು ಜಿಂದಾಲ್ ಸಂಸ್ಥೆಯ ಏಜೆಂಟ್ ಆಗಿ ಕೆಲಸ ಮಾಡುತ್ತಾರೆ. ಹೀಗಾಗಿ, ತಹಸೀಲ್ದಾರರ ಸಮನ್ಸ್ ನೋಟಿಸ್ ಅ‌ನ್ನು ಸಾರ್ವಜನಿಕವಾಗಿ ಹರಿದು ಕಚೇರಿ ಎದುರು ಮೇಲೆ ತೂರುವ ಮುಖೇನ ತಹಸೀಲ್ದಾರ್ ಕಚೇರಿಗೆ ಆಗಮಿಸುವವರನ್ನು ಮುಜುಗರಕ್ಕೀಡು ಮಾಡಿದ್ದಾರೆ.
ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡ್ತಾ ಇದ್ದೇವೆ. ಯಾವುದೇ ಗಲಾಟೆ ಮಾಡಿಲ್ಲ. ಕೊಲೆ ಮಾಡಿಲ್ಲ. ಪೊಲೀಸರು ಅವರ ಕೆಲಸ ಅವರು ಮಾಡ್ತಿದ್ದಾರೆ. ಆದರೆ, ತಹಸೀಲ್ದಾರ್ ನೋಟಿಸ್ ಕೊಟ್ಟಿದ್ದಾರೆ. ಯಾರಿಗೆ ಮಣಿದು ನೋಟಿಸ್ ಕೊಟ್ಟಿದ್ದಾರೆ. ಒಂದು ವರ್ಷಕ್ಕೆ ಆಗುವಂತೆ ಹೋರಾಟ ಮಾಡಬಾರದು. ಯೋಗ್ಯ, ಅಯೋಗ್ಯ ಪದಕ್ಕೆ ವ್ಯತ್ಯಾಸ ಇದೆ.
ಇದು ಪ್ರಜಾಪ್ರಭುತ್ವದ ಕಗ್ಗೊಲೆ.‌ ರಾಜ್ಯದಲ್ಲಿ ಸಾವಿರಾರು ಹೋರಾಟ ಮಾಡಿದ್ದೇವೆ. ಆದರೆ ಯಾವ ತಹಸೀಲ್ದಾರ್ ಈ
ರೀತಿ ಹೇಳಿಲ್ಲ. ಈ ಆದೇಶ ವಾಪಾಸ್ ತೆಗೆದುಕೊಳ್ಳಬೇಕು, ಇಲ್ಲವಾದರೇ, ತಹಸೀಲ್ದಾರ್ ಕಚೇರಿಯಲ್ಲಿ ಕೂಡ್ತಿವಿ. ಜಿಂದಾಲ್ ಕರ್ನಾಟಕ ಬಿಟ್ಟು ಹೋಗಬೇಕು. ನಿಮಗೆ ಅವಕಾಶ ಇಲ್ಲ. ಈ ರಾಜ್ಯ ಬಿಟ್ಟು ತೊಲಗಿ. ಜಿಲ್ಲೆಯಲ್ಲಿ ಕೋಟಿಗಟ್ಟಲೇ ಲೂಟಿ ಮಾಡ್ತಾ ಇದ್ದಿರಿ. ರಾಜ್ಯದ ಕಾಂಗ್ರೆಸ್ ನಾಯಕರು ಕೆಲವರು, ಪರ ವಿರೋಧ, ಮಾಡ್ತಾರೆ, ಬಿಜೆಪಿ ನಾಟಕ ಆಡ್ತಿದೆ. ಸಿಎಂ ಬಾಯಿ ಬಿಡ್ತಿಲ್ಲ. ಜೆಡಿಎಸ್ ಮೌನವಿದೆ. ಜಿಂದಾಲ್ ಕೋರ್ಟ್ ಗೆ ಹೋದರೂ
ನಾವು ಬಿಡೋದಿಲ್ಲ. ಇದೇ 9ರಂದು ಹೊಸಪೇಟೆಯ ಟಿಬಿ ಡ್ಯಾಂ ಮೇಲಿನ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗುವುದು. 15 ನೇ ತಾರಿಖು ತೋರಣಗಲ್ಲಿನಲ್ಲಿ ಕನ್ನಡಿಗರ ಸಮಾವೇಶ. ಬಳ್ಳಾರಿ ಬಂದ್ ಬಗ್ಗೆ ತಿರ್ಮಾನ ಮಾಡ್ತೆವೆ. ರಾಜ್ಯ ಸರ್ಕಾರ ಪೊಲೀಸರ ಔರಾದ್ ಕರ್ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
Body:ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಯರಿಸ್ವಾಮಿ ಮಾತನಾಡಿ, ಜಿಂದಾಲ್ ಸಂಸ್ಥೆಗೆ ಭೂಮಿ ಪರ
ಭಾರೆ ಮಾಡುತ್ತಿರುವ ಕ್ರಮವನ್ನು ‌ಖಂಡಿಸಿ ಕೈಗೊಳ್ಳುವ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ದೂರಿದ್ದಾರೆ.
ಇದಕ್ಕೂ ಸಂಡೂರಿನ ವಿಜಯ ವೃತ್ತದಿಂದ ತಾಲೂಕು ಕಚೇರಿವರೆಗೆ‌ ಕರಾಳ ದಿನದ ಮೆರವಣಿಗೆ ಮಾಡಿದರು. ಪ್ರತಿಭಟನೆ ವೇಳೆ, ತಹಸೀಲ್ ಕಚೇರಿಯ ಎದುರು ಕುಳಿತುಕೊಳ್ಳಲು ಹೋಗಿದ್ದ ವಾಟಾಳ್ ‌ನಾಗರಾಜ ಮತ್ತು ಸಹಚರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_VATAL_PROTEST_IN_SANDUR_7203310

KN_BLY_04i_VATAL_PROTEST_IN_SANDUR_7203310

KN_BLY_04j_VATAL_PROTEST_IN_SANDUR_7203310

KN_BLY_04k_VATAL_PROTEST_IN_SANDUR_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.