ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕೊರೊನಾ ವೈರಸ್ ಭೀತಿ ನಡುವೆ ನೂರಾರು ಜನ ಸಾರ್ವಜನಿಕವಾಗಿ ಬೆಳಿಗ್ಗೆ ವಾಕಿಂಗ್, ಕ್ರಿಕೆಟ್ ಆಟವಾಡಿದ್ರು. ಮತ್ತೊಂದು ಕಡೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಬ್ಯಾಡ್ಮಿಂಟನ್ ಅಂಗಣ ಓಪನ್ ಆಗಿದೆ.
ಕೊರೊನಾ ವೈರಸ್ ಹಿನ್ನೆಲೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ 14 ಮಾರ್ಚ್ 2020 ರಂದು ಜಾಗೃತಿ ಸಭೆ ನಡೆಸಿ ಕ್ರೀಡಾಕೂಟಕ್ಕೆ ಸಂಬಂಧಿಸಿದ ಈಜುಕೊಳ, ಜಿಮ್, ಬ್ಯಾಡ್ಮಿಂಟನ್ ಆಟ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದರು. ಅಂತೆಯೇ ಡಿಸಿ ಆದೇಶದ ಮೇರೆಗೆ ಈಜುಕೊಳ ಮತ್ತು ಮಲ್ಟಿ ಜಿಮ್ ತರೆಯುವುದಿಲ್ಲ ಎಂದು ಆದೇಶ ಪತ್ರವನ್ನು ವ್ಯವಸ್ಥಾಪಕರು ಹೊರಡಿಸಿದ್ದಾರೆ. ಆದರೆ ಡಿಸಿ ಎಸ್.ಎಸ್ ನಕುಲ್ ಅಧ್ಯಕ್ಷತೆ ಹೊಂದಿರುವ ಯುವಜನ ಮತ್ತು ಕ್ರೀಡಾ ಇಲಾಖೆಯ ಈಜುಕೊಳ ಮತ್ತು ಮಲ್ಟಿ ಜಿಮ್ ಮಾತ್ರ ಬಂದ್ ಆಗಿದೆ. ಆದರೆ ಬ್ಯಾಡ್ಮಿಂಟನ್ ಮಾತ್ರ ಓಪನ್ ಆಗಿದೆ ಏಕೆ ? ಎಂದು ಕೆಲ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಪ್ರಶ್ನೆ ಮಾಡಿದ್ರೆ ನಾವು ಡಿಸಿ ಅವರ ಅನುಮತಿಯನ್ನು ಪಡೆದುಕೊಂಡೇ ಆಟವಾಡುತ್ತಿದ್ದೇವೆ ಎನ್ನುತ್ತಿದ್ದಾರೆ.
ಇನ್ನು ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕರಿಗೆ ಈ ಬ್ಯಾಡ್ಮಿಂಟನ್ ಅಂಕಣ ಒಪನ್ ಆಗಿರುವ ಬಗ್ಗೆ ಕೇಳಿದ್ರೆ, ಆರಂಭದಲ್ಲಿ ಈಜುಕೊಳ, ಮಲ್ಟಿ ಜಿಮ್, ಮತ್ತು ಬ್ಯಾಡ್ಮಿಂಟನ್ ಅಂಕಣಗಳಿಗೆ ಬೀಗಹಾಕಿ ಬಂದ್ ಮಾಡಿದ್ದೆವು. ಆದ್ರೆ ಡಿಸಿ ಸಲಹೆ ಮೇರೆಗೆ ಬ್ಯಾಡ್ಮಿಂಟನ್ ಅಂಕಣ ಮಾತ್ರ ಒಪನ್ ಮಾಡಿದ್ದೇವೆ ಅಂತಿದ್ದಾರೆ.ಸಾರ್ವಜನಿಕರು ಸೇರುವ ಎಲ್ಲ ವಲಯಗಳನ್ನು ಬಂದ್ ಮಾಡಿರುವ ಜಿಲ್ಲಾಧಿಕಾರಿಗಳು ಬ್ಯಾಡ್ಮಿಂಟನ್ ಅಂಕಣ ತೆರೆದು ಆಟವಾಡಲು ಹೆಚ್ಚಿನ ಜನ ಸೇರುವ ಸ್ಥಳವಾದದ್ದರಿಂದ ಮುಂಜಾಗೃತ ಕ್ರಮ ತೆಗೆದುಕೊಳ್ಳುವುದು ಸೂಕ್ತ ಎಂದು ಸಾರ್ವಜನಿಕರು ಆಗ್ರಹಿಸಿದರು.