ETV Bharat / state

ಎಟಿಎಂ ಅವಾಂತರ.. ₹10,000 ಡ್ರಾ ಮಾಡಿದ್ರೆ ₹50,000.. ₹500 ಒತ್ತಿದ್ರೆ ₹2500.. - canara bank atm technical issues

ಈ ಘಟನೆಯ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ದೂರವಾಣಿ ಕರೆಮಾಡಿ ತಿಳಿಸಿದಾಗ, ಮಷಿನ್​ನಲ್ಲಿ ತಾಂತ್ರಿಕ ದೋಷ ಇದ್ದಿರಬಹುದು. ಈಗ ಅಲ್ಲಿಗೆ ಕಳಿಸಿ ಕೊಡಲು ನಮ್ಮಲ್ಲಿ ತಾಂತ್ರಿಕ ನಿರ್ವಾಹಕರಿಲ್ಲ ಎಂದು ತಮ್ಮ ನಿರ್ಲಕ್ಷ್ಯವನ್ನ ಎತ್ತಿ ತೋರಿಸಿ ದೂರವಾಣಿ ಕರೆಯನ್ನ ಕಟ್ ಮಾಡಿದ್ದಾರೆ..

atm
atm
author img

By

Published : May 23, 2021, 9:03 PM IST

ಬಳ್ಳಾರಿ : ಜಿಲ್ಲೆಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಇರುವ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಕೆಲಕಾಲ ಅವಾಂತರ ಸೃಷ್ಠಿಯಾಗಿತ್ತು. ಗಾಂಧಿನಗರ ಠಾಣೆಯ ಪೊಲೀಸರಿಂದ ಈ ಅವಾಂತರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.

ಈ ಕೆನರಾ ಬ್ಯಾಂಕಿನ ಎಟಿಎಂಗೆ ಬರುವ ಗ್ರಾಹಕರು, ಎಟಿಎಂ ಮಷಿನ್‌ನೊಳಗಡೆ ಕಾರ್ಡ್‌ ಹಾಕಿ 500 ರೂ. ಬಿಡಿಸಿದ್ರೆ, ಮಷಿನ್ನಿಂದ 2500 ರೂ. ಹಣ ಹೊರ ಬರುತ್ತದೆ.

ಮತ್ತೊಬ್ಬರು 10,000 ರೂ.ಗಳನ್ನ ಡ್ರಾ ಮಾಡಿದ್ರೆ ಸರಿ ಸುಮಾರು 50,000 ರೂ.ಗಳು ಬಂದಿತ್ತು. ಆ ಮಾಹಿತಿಯನ್ನ ಗ್ರಾಹಕರೇ ಗಾಂಧಿನಗರ ಠಾಣೆಯ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್ ಲಕ್ಷ್ಮಣ ಹಾಗೂ ಪಿಸಿ ಕಾಶೀನಾಥ ಅವರ ಗಮನಕ್ಕೆ ತಂದಿದ್ದಾರೆ.

ಕೂಡಲೇ ಕೆನರಾ ಬ್ಯಾಂಕಿನ ಎಟಿಎಂ ಮಷಿನ್‌ನತ್ತ ಧಾವಿಸಿ,‌ ಬ್ಯಾಂಕಿನವರಿಗೆ ಆಗುವ ಭಾರೀ ಮೊತ್ತದ ನಷ್ಟವನ್ನ ಉಳಿತಾಯ ಮಾಡಿದ್ದಾರೆ.

ಈ ಘಟನೆಯ ಕುರಿತು ಬ್ಯಾಂಕಿನ ವ್ಯವಸ್ಥಾಪಕರಿಗೆ ದೂರವಾಣಿ ಕರೆಮಾಡಿ ತಿಳಿಸಿದಾಗ, ಮಷಿನ್​ನಲ್ಲಿ ತಾಂತ್ರಿಕ ದೋಷ ಇದ್ದಿರಬಹುದು.

ಈಗ ಅಲ್ಲಿಗೆ ಕಳಿಸಿ ಕೊಡಲು ನಮ್ಮಲ್ಲಿ ತಾಂತ್ರಿಕ ನಿರ್ವಾಹಕರಿಲ್ಲ ಎಂದು ತಮ್ಮ ನಿರ್ಲಕ್ಷ್ಯವನ್ನ ಎತ್ತಿ ತೋರಿಸಿ ದೂರವಾಣಿ ಕರೆಯನ್ನ ಕಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.