ETV Bharat / state

ಅಕ್ರಮವಾಗಿ ಅದಿರು ಸಾಗಣೆ: ಆರು ಜನರ ಬಂಧನ

author img

By

Published : May 14, 2021, 12:22 PM IST

ಜಮೀನಿನಲ್ಲಿ ಅಂದಾಜು 2 ಲಕ್ಷ ರೂ. ಮೌಲ್ಯದ 40 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಪರವಾನಗಿ ಇಲ್ಲದೇ ಸಾಗಿಸುತ್ತಿದ್ದ ಆರು ಜನರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಅಕ್ರಮ ಅದಿರು ಸಾಗಣೆ
ಅಕ್ರಮ ಅದಿರು ಸಾಗಣೆ

ಹೊಸಪೇಟೆ: ಸಂಡೂರು ತಾಲೂಕಿನ ತೊಣಸಿಗೆರೆ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಅದಿರು ಸಾಗಣೆಗೆ ಸಂಬಂಧಿಸಿದಂತೆ ಆರು ಜನರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಬಳ್ಳಾರಿ ಮೂಲದ ರಮೇಶ, ಕಿಶೋರ ಬಾಬು, ಶಿವು ನಾಯ್ಕ, ಶಿವ ನಾಯ್ಕ, ಅಶೋಕ ಹಾಗೂ ರುದ್ರೇಶ ಬಂಧಿತರು. ಜಮೀನಿನಲ್ಲಿ ಅಂದಾಜು 2 ಲಕ್ಷ ರೂ. ಮೌಲ್ಯದ 40 ಮೆಟ್ರಿಕ್ ಟನ್ ಮ್ಯಾಂಗನೀಸ್ ಅದಿರನ್ನು ಪರವಾನಗಿ ಇಲ್ಲದೇ ಸಾಗಿಸಲಾಗುತ್ತಿತ್ತು. ಸಾಗಣೆಗೆ ಬಳಸಿದ್ದ ಎರಡು ಟಿಪ್ಪರ್ ಲಾರಿ, ಸ್ಕಾರ್ಪಿಯೋ ಹಾಗೂ ಐದು ಮೊಬೈಲ್​​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ದಕ್ಷಿಣ ವಲಯದ ಆರ್​​ಎಫ್​​ಒ ಸೋಮಶೇಖರ್ ರೆಡ್ಡಿ, ವಲಯ ಉಪ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ, ಜಡಿಯಪ್ಪ, ಅರಣ್ಯ ರಕ್ಷಕರಾದ ಮಂಜುನಾಥ್, ಸುಧಾಕರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಇದನ್ನೂ ಓದಿ : ‘ತೌಕ್ತೆ’ ಚಂಡಮಾರುತ ಎಫೆಕ್ಟ್: ಕರ್ನಾಟಕ, ಮಹಾರಾಷ್ಟ್ರ, ಗೋವಾ, ಗುಜರಾತ್​ನಲ್ಲಿ ಅಲರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.