ETV Bharat / state

'ಎಷ್ಟು ದಿನ ಜೀವಂತವಾಗಿರುತ್ತೇವೆ ಗೊತ್ತಿಲ್ಲ, ಮುಂದೊಂದು ‌ದಿನ ನೆನಪು ಮಾಡಿಕೊಳ್ಳುಬಹುದು'

ವಿಜಯನಗರ ಜಿಲ್ಲೆ ರಚನೆಯಿಂದ 371ಜೆ ವಂಚಿತ ಆಗಲಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿಬಿಡಲಾಗಿದೆ.‌ ಇದಕ್ಕೆ ಕಿವಿಗೊಡಬಾರದು. ತಾಂತ್ರಿಕ ಸಮಸ್ಯೆಯಾಗಬಹುದು. ಹಾಗಾಗಿ ಯಾವ ತಾಲೂಕಿನಿವರೂ 371ಜೆನಿಂದ ವಂಚಿತರಾಗುವುದಿಲ್ಲ ಎಂದು ಸಚಿವ ಆನಂದ್​ ಸಿಂಗ್ ಸ್ಪಷ್ಟನೆ ನೀಡಿದರು‌.

Anand Singh reaction about Vijayanagara district
ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್
author img

By

Published : Nov 26, 2020, 10:07 PM IST

ಹೊಸಪೇಟೆ: ನನ್ನ ನಿರ್ಧಾರಕ್ಕೆ ಕ್ಷೇತ್ರದ ಮತದಾರರು ವಿಶ್ವಾಸವಿಟ್ಟು ನನಗೆ ಮತದಾನ‌ ಮಾಡಿ ಆರಿಸಿ ತಂದಿದ್ದಾರೆ. ಹಾಗಾಗಿ ಜನರ ಧ್ವನಿಯಾಗಿ ಹಾಗೂ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್ ಹೇಳಿದರು.

ಇದನ್ನೂ ಓದಿ: ವಿಜಯನಗರ ಪ್ರತ್ಯೇಕ ಜಿಲ್ಲೆ ಆಗಲೇಬೇಕು: ಸಚಿವ ಶ್ರೀರಾಮುಲು

ತಾಲೂಕಿನ ಪಾಪಿನಾಯಕನಹಳ್ಳಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರ ಆಗುವ ಮುಂಚೆ ಹೋರಾಟಗಾರರ ಬೇಡಿಕೆ ಇತ್ತು. ಏಕಂದರೆ ಬೋರ್ ಹಾಕಿದರೆ ನೀರು ಬೀಳದ ಪರಿಸ್ಥಿತಿ ಇತ್ತು. ಒಂದು ವೇಳೆ ನೀರು ಬಿದ್ದರೂ ಕೃಷಿಗೆ ಬಳಕೆ ಮಾಡದಂತಹ ಪರಿಸ್ಥಿತಿ ಇತ್ತು ಎಂದು ಕ್ಷೇತ್ರದ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಬಂದ್ ಮಾಡುವುದಕ್ಕೆ ಎಲ್ಲರಿಗೂ ಸ್ವಾತಂತ್ರ್ಯವಿದೆ.‌ ಸಂವಿಧಾನದ ಪ್ರಕಾರ ಶಾಂತ ರೀತಿಯಲ್ಲಿ ಬಂದ್​ ಮಾಡಬೇಕಾಗುತ್ತದೆ. ಎಲ್ಲರು ಅಣ್ಣ-ತಮ್ಮಂದರ ಹಾಗೆ ಎಂದು ಬಂದ್​ ಕುರಿತು ತಮ್ಮ ಸೌಮ್ಯ ಸ್ವಭಾವ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ್​ ಸಿಂಗ್

ಸಾವಿರಾರು ಎಕೆರೆ ತಗೆದುಕೊಂಡಿರುವುದರ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.‌ ಒಳ್ಳೆಯ ಕೆಲಸ ಮಾಡುವಾಗ ಇಂತಹ ಸಮಸ್ಯೆಗಳು ಸಾಮಾನ್ಯ. ಆರೋಪಗಳನ್ನು ಸ್ಫೂರ್ತಿಯಾಗಿ ತಗೆದುಕೊಳ್ಳಲಾಗುವುದು. ಜಿಲ್ಲೆ ಮಾಡುವುದರಿಂದ ತೊಂದರೆಯಾಗುವುದಿಲ್ಲ. ಎಷ್ಟು ದಿನ ಜೀವಂತವಾಗಿರುತ್ತೇವೆ ಎಂಬುದು ತಿಳಿದಿಲ್ಲ. ‌‌ಮುಂದೊಂದು ‌ದಿನ ನೆನಪು ಮಾಡಿಕೊಳ್ಳುಬಹುದು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಆಡಳಿತಾತ್ಮಕವಾಗಿ ಬೇರೆ ಇರುತ್ತದೆ ಎಂದು ನೂತನ ವಿಜಯನಗರ ಜಿಲ್ಲೆ ಬಗ್ಗೆ ಸಮರ್ಥಿಸಿಕೊಂಡರು.

ರಾಯಚೂರು ಒಡೆದು ಕೊಪ್ಪಳ ಜಿಲ್ಲೆ ಹಾಗೂ ಬಿಜಾಪುರ ಒಡೆದು ಬಾಗಲಕೋಟೆ ಜಿಲ್ಲೆ ಮಾಡಲಾಯಿತು. ಹಾಗೆಯೇ ಕಲಬುರಗಿಯಿಂದ ಯಾದಗಿರಿ ಜಿಲ್ಲೆ ಮಾಡಲಾಯಿತು. ಹುಡುಕುತ್ತಾ ಹೋದರೆ ಇದೇ ಉದಾಹರಣೆಗಳು ಸಿಗುತ್ತವೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಜಿಲ್ಲೆ ಅಧಿಕೃತ ಘೋಷಣೆಯಾಗಲಿ. ಅಭೀ ಪಿಚ್ಚರ್ ಬಾಕಿ ಹೈ ಎಂದರು.

ಇದನ್ನೂ ಓದಿ: ಸಿಎಂಗೆ ಖಾತೆ ನೀಡಲು ಕಷ್ಟವಾದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧ: ಆನಂದ್ ಸಿಂಗ್

ವಿಜಯನಗರ ಜಿಲ್ಲೆ ರಚನೆಯಿಂದ 371 ಜೆ ವಂಚಿತ ಆಗಲಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ವದಂತಿ ಹರಿಬಿಡಲಾಗಿದೆ.‌ ಇದಕ್ಕೆ ಯಾರೂ ಕಿವಿಗೊಡಬಾರದು. ತಾಂತ್ರಿಕ ಸಮಸ್ಯೆಯಾಗಬಹುದು. ಹಾಗಾಗಿ ಯಾವ ತಾಲೂಕಿನಿವರು 371 ಜೆನಿಂದ ವಂಚಿತರಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.