ETV Bharat / state

ಆತ್ಮಹತ್ಯೆಗೆ ಪ್ರಚೋದನೆ ಆರೋಪ: 22 ಜನರ ವಿರುದ್ಧ ಪ್ರಕರಣ ದಾಖಲು - ನಂದೀಶ್ ಪಾಟೀಲ್ ಆತ್ಮಹತ್ಯೆ

ಹೂವಿನಹಡಗಲಿಯ 10ನೇ ವಾರ್ಡ್​ನ ನಂದೀಶ್ ಪಾಟೀಲ್ ಏಪ್ರಿಲ್‌ 1 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಕಾರಣವೇನೆಂದು ಅವರು 10 ಪುಟಗಳ ಡೆತ್ ನೋಟ್ ಬರೆದು, ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದರು.

Hospet
ನಂದೀಶ್ ಪಾಟೀಲ್
author img

By

Published : Apr 5, 2021, 12:33 PM IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಜೂಜಾಟ ಗೀಳು ಮತ್ತು ಸಾಲಬಾಧೆಯಿಂದ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಪ್ರಚೋದನೆ‌ ನೀಡಿದ ಆರೋಪದ ಮೇಲೆ 22 ಜನರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೂವಿನಹಡಗಲಿಯ 10ನೇ ವಾರ್ಡ್​ನ ನಂದೀಶ್ ಪಾಟೀಲ್ ಏಪ್ರಿಲ್‌ 1 ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆ ಕಾರಣವೇನೆಂದು ಅವರು 10 ಪುಟಗಳ ಡೆತ್ ನೋಟ್ ಬರೆದು, ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದರು. ಆ ಪತ್ರದಲ್ಲಿ 22 ಜನರು ನನ್ನ ಆತ್ಮಹತ್ಯಗೆ ನೇರ ಕಾರಣ ಎಂದು ಉಲ್ಲೇಖಿಸಿದ್ದರು.

ಸದ್ಯ ಪತ್ರವನ್ನು ಆಧಾರಿಸಿ ದೂರು ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉಂಡು ಮಲಗಿದರೂ ಮುಗಿಯದ ಮುನಿಸು: ನೇಣಿಗೆ ಶರಣಾದ ಇಬ್ಬರು ಗಂಡಂದಿರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.