ETV Bharat / state

ಪಂಚಾಯತ್ ರಾಜ್ ಇಲಾಖೆಯಲ್ಲಿ ಲಂಚಾವತಾರ: ಪ.ಯ. ಗಣೇಶ್​ ಆರೋಪ

author img

By

Published : Jun 19, 2020, 3:51 PM IST

ಹೊಸಪೇಟೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಅಧಿಕಾರಿಗಳೇ ಲಂಚ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆಲ ಸಂಘಟನೆಯವರಿಗೆ ಅಧಿಕಾರಿಗಳು ಹಣದ ರೂಪದಲ್ಲಿ ಲಂಚ ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ. ಯ. ಗಣೇಶ್​ ಆರೋಪಿಸಿದ್ದಾರೆ.

pressmeet
pressmeet

ಬಳ್ಳಾರಿ: ಹೊಸಪೇಟೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಅಧಿಕಾರಿಗಳು ಹಣದ ರೂಪದಲ್ಲಿ 95 ಪತ್ರಕರ್ತರಿಗೆ ಮತ್ತು ಸಂಘಟನೆಯವರಿಗೆ ಲಂಚವನ್ನು ನೀಡುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ ಆರೋಪಿಸಿದ್ದಾರೆ.

allegation of giving bribe on government officers
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ.ಯ ಗಣೇಶ

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಸಿರುಗುಪ್ಪ, ಕೊಪ್ಪಳ, ಗಂಗಾವತಿ, ಗದಗ, ದಾವಣಗೆರೆ, ಚಿತ್ರದುರ್ಗ, ಹಗರಿಬೊಮ್ಮನಹಳ್ಳಿ ಸುತ್ತಮುತ್ತಲಿನ ತಾಲೂಕು ಹಾಗೂ ಜಿಲ್ಲೆಗಳಲ್ಲಿರುವ ಪತ್ರಕರ್ತರಿಗೆ ಮತ್ತು ವಿವಿಧ ಸಂಘಟನೆಯವರಿಗೆ ಲಂಚ ನೀಡಲಾಗುತ್ತಿದೆ ಎಂದು ದೂರಿದರು.

ಲಂಚ ನೀಡುತ್ತಿರುವ ಆರೋಪ

ಹೊಸಪೇಟೆ ತಾಲೂಕಿನ ಪಂಚಾಯತ್ ರಾಜ್ ಕಚೇರಿಯ ಎ.ಇ.ಇ ಸುರೇಶ್, ಜೆ.ಇ ಗಳಾದ ಮೊಹಮ್ಮದ್ ಮದೀನಾ, ಮೊಹಮ್ಮದ್ ಸೂಡಿ ಮತ್ತು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಎ.ಇ.ಇ ಪಂಪಾಪತಿ ಅವರೆಲ್ಲರನ್ನು ಅಮಾನತುಗೊಳಿಸಬೇಕು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಒತ್ತಾಯಿಸಿದರು.

ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ತನಿಖೆ ಮಾಡಬೇಕು ಎಂದರು. ಈ ಸಮಯದಲ್ಲಿ ಚಂದ್ರಶೇಖರ್ ದೊಡ್ಡಮನಿ, ಶ್ರೀನಿವಾಸ್ ರೆಡ್ಡಿ, ದಲ್ಲಾಳಿ ಹುಸೇನ್ ಮೌಲ, ಬಿ.ವೆಂಕಟರಮಣ, ರಮೇಶ್ ಕುಮಾರ್, ರೇವಣ್ಣ, ದತ್ತಾತ್ರೇಯ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.