ಹೊಸಪೇಟೆ: ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ-50ರಲ್ಲಿರುವ ಸುರಂಗ ಮಾರ್ಗ (ಟನಲ್)ಕ್ಕೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಅ.15 ರಂದು ಈಟಿವಿ ಭಾರತ, ''ಹೊಸಪೇಟೆ: ನಿರ್ಮಾಣವಾದ ಆರೇ ವರ್ಷದಲ್ಲಿ ಸೋರುತ್ತಿರುವ ಸುರಂಗ ಮಾರ್ಗ'' ಎಂಬ ಶೀರ್ಷಿಕೆ ಅಡಿಯಲ್ಲಿ ವಿಸ್ತೃತ ವರದಿಯನ್ನು ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಸಚಿವ ಆನಂದ ಸಿಂಗ್ ಸಮಸ್ಯೆ ಇತ್ಯರ್ಥಪಡಿಸಲು ಕಂಪನಿಗೆ ತಾಕೀತು ಮಾಡಿದ್ದಾರೆ.
ಹೊಸಪೇಟೆ: ನಿರ್ಮಾಣವಾದ ಆರೇ ವರ್ಷಗಳಲ್ಲಿ ಸೋರುತ್ತಿರುವ ಸುರಂಗ ಮಾರ್ಗ
ಈ ಕುರಿತು ಮಾತನಾಡಿದ ಅವರು, ಮಳೆ ಬಂದಾಗ ಟನಲ್ ಸೋರಿಕೆ ಆಗುತ್ತಿದೆ. ಹಾಗಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಗುತ್ತಿಗೆದಾರನಿಗೆ ಈ ಕುರಿತು ತಿಳಿಸಲಾಗಿದೆ. ದೆಹಲಿ ತಂಡ ಬಂದು ಸಮಸ್ಯೆಯನ್ನು ಪರಿಹರಿಸಲಿದೆ. ಸೋರಿಕೆಗೆ ವಾಟರ್ ಪ್ರೂಫ್ ಗ್ರೌಂಡಿಂಗ್ ಮಾಡಬೇಕಾಗಿದೆ ಎಂದು ತಿಳಿಸಿದರು.
ಒಂದು ವಾರದೊಳಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸದಿದ್ದರೆ ಕೊಪ್ಪಳ ಹಿಟ್ನಾಳ್ ಬಳಿ ಇರುವ ಟೋಲ್ ಸಂಗ್ರಹ ನಿಲ್ಲಿಸಲು ಸೂಚನೆ ನೀಡಲಾಗುವುದು ಎಂದರು.