ಹೊಸಪೇಟೆ: ಮಾತುಕತೆಯಾಗಿದ್ದ ಯುವತಿ ಜೊತೆ ಮದುವೆ ತಡ ಮಾಡಲಾಗುತ್ತಿದೆ ಎಂದು ಮುನಿಸಿಕೊಂಡ ಯುವಕನೋರ್ವ ಟವರ್ ಏರಿ ಕುಳಿತ ಘಟನೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ (23) ಟವರ್ ಏರಿ ಕುಳಿತಿದ್ದ ಭೂಪ.
ಪುತ್ರನಿಗೆ ಮದುವೆ ಮಾಡಬೇಕೆಂದು ಪೋಷಕರು ಯುವತಿಯನ್ನು ಹುಡುಕಿ ಮಾತುಕತೆ ಮಾಡಿಕೊಂಡಿದ್ದರು. ಆದರೆ ಚಿರಂಜೀವಿಗಿಂತ ಹಿರಿಯ ಸಹೋದರನಿಗೆ ಮದುವೆ ಆಗಲಿ ಅಂತ ಮನೆಯಲ್ಲಿ ಮಾತುಕತೆ ಮಾಡಲಾಗಿದೆ. ಆದರೆ, ಯುವಕ ನನಗೆ ಹುಡುಗಿ ಫಿಕ್ಸ್ ಮಾಡಿದ್ದಿರಿ, ಯಾಕೆ ಮದುವೆ ತಡ ಮಾಡುತ್ತಿದ್ದೀರಿ, ನನಗೆ ಮದುವೆ ಬೇಕು ಎಂದು ಟವರ್ ಏರಿ ಹಠ ಹಿಡಿದಿದ್ದಾನೆ.
ಕೊನೆಗೆ ಹರಸಾಹಸ ಮಾಡಿ ಪೊಲೀಸರು ಹಾಗೂ ಸ್ಥಳೀಯರು, ಮನವೊಲಿಸಿ ಯುವಕನನ್ನು ಟವರ್ ನಿಂದ ಕೆಳಗಿಳಿಸಿದ್ದಾರೆ. 'ನಾನು ಇಳಿದ ಮೇಲೆ ನನಗ್ಯಾರು ಹೊಡಿಬಾರದು' ಅಂತ ಷರತ್ತು ಹಾಕಿ ಟವರ್‌ನಿಂದ ಚಿರಂಜೀವಿ ಕೆಳಗೆ ಇಳಿದಿದ್ದಾನೆ.