ಬಳ್ಳಾರಿ: ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿಶೇಷಚೇತನರು, ಹಿರಿಯ ನಾಗರಿಕರು, ವಿಧವೆಯರ ಕುಟುಂಬಗಳಿಗೆ ಕಾರ್ಮಿಕ ಇಲಾಖೆ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜು ಎಂಬುವರು ತಮ್ಮ ಸ್ವಂತ ಹಣದಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ.
ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ ಸಿರಗುಪ್ಪ ತಾಲೂಕಿನ ರಾವಿಹಾಳ ಗ್ರಾಮದ ವಿಶೇಷಚೇತನರು, ಹಿರಿಯರು, ವಿಧವೆಯರ ಕುಟುಂಬಗಳಿಗೆ ಆರ್.ಎನ್. ಶಿವರಾಜು 20 ಸಾವಿರ ರೂ. ಖರ್ಚು ಮಾಡಿ ಅಕ್ಕಿ, ಬೇಳೆ, ಎಣ್ಣೆ, ಹಿಟ್ಟು, ಸಕ್ಕರೆ ಸೇರಿದಂತೆ ಅವಶ್ಯಕ ಆಹಾರ ಪದಾರ್ಥಗಳನ್ನು ಕಿಟ್ಗಳ ಮೂಲಕ 100ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಮುಂಚಿನಿಂದಲೂ ಈ ರೀತಿಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಇದೀಗ ಊರಿನ ಜನರು ಅನುಭವಿಸುತ್ತಿರುವ ತೊಂದರೆ ಮನಗಂಡು ದಿನಸಿ ಕಿಟ್ಗಳನ್ನು ವಿತರಿಸುತ್ತಿದ್ದೇನೆ. ದಯವಿಟ್ಟು ಎಲ್ಲರೂ ಮನೆಯಲ್ಲಿಯೇ ಇರಿ ಎಂದು ವಿನಂತಿಸಿಕೊಂಡರು.