ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾಡ್ನಾಕಾನಹಳ್ಳಿ ಗ್ರಾಮದಲ್ಲಿ ಹೆಂಡತಿಯ ಶೀಲ ಶಂಕಿಸಿ ಪತಿಯೋರ್ವ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಮೃತ ಶಿವಕುಮಾರ್ (24) ಕಳೆದ ಒಂದು ವರ್ಷದ ಹಿಂದೆ ಬಳ್ಳಾರಿ ಸಮೀಪದ ಕಪ್ಪಗಲ್ ನಲ್ಲಿ ಮದುವೆಯಾಗಿದ್ದು, ಹೆಂಡತಿ ಹೆರಿಗೆಗೆಂದು ತವರಿಗೆ ತೆರಳಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ದುರ್ದೈವೆಂದರೇ ಮಗುವಿನೊಂದಿಗೆ ಸುಖವಾಗಿ ಬಾಳುವ ಕನಸು ಕಾಣುವುದನ್ನು ಬಿಟ್ಟು ಹೆಂಡತಿಯ ಶೀಲ ಶಂಕಿಸಿದ್ದಾನೆ.
ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಾಯಿ ಸುಶೀಲಮ್ಮ ನೀಡಿದ ದೂರಿನಂತೆ ಕಾನಾಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.