ETV Bharat / state

ಎರಡೂ ಕೈ- ಕಾಲುಗಳನ್ನ ಕಳೆದುಕೊಂಡ ಜಿಂದಾಲ್ ನೌಕರ: ಜೀವನ ಸಾಗಾಟಕ್ಕೆ ಪರದಾಟ..! - ಜಿಂದಾಲ್ ಉಕ್ಕು ಕಾರ್ಖಾನೆ

ಜಿಂದಾಲ್ ಉಕ್ಕು ಕಾರ್ಖಾನೆಯ ನೌಕರನೊಬ್ಬ, ತನ್ನ ಎರಡೂ ಕೈ- ಕಾಲುಗಳನ್ನ ಕಳೆದುಕೊಂಡಿದ್ದಾನೆ. ಸಂಸ್ಥೆಯಿಂದ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣ ಒದಗಿಸಬೇಕು. ಹಾಗೂ ಮಾಸಿಕವಾಗಿ ಪಿಂಚಣಿ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

A Jindal employee who lost both hands and feet
ಎರಡೂ ಕೈ- ಕಾಲುಗಳನ್ನ ಕಳೆದುಕೊಂಡ ಜಿಂದಾಲ್ ನೌಕರ
author img

By

Published : Jun 30, 2020, 7:21 PM IST

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಯ ಐಟಿಪಿಎಸ್ ಕೋಕ್ ಓವನ್ ಘಟಕದ ನೌಕರನೊಬ್ಬ, ತನ್ನ ಎರಡೂ ಕೈ- ಕಾಲುಗಳನ್ನ ಕಳೆದುಕೊಂಡಿದ್ದಾನೆ. ಬರುವ ಸಂಬಳದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಬೀದಿಗೆ ಬಂದಿದೆ.

ಜಿಲ್ಲೆಯ ಕಂಪ್ಲಿ ತಾಲೂಕಿನ ಹೊಸ ದರೋಜಿ ಗ್ರಾಮದ ಒಡೆಯರ ಶ್ರೀಧರ ಎಂಬ ವ್ಯಕ್ತಿಯು, ಕೈ ಕಾಲುಗನ್ನು ಕಳೆದುಕೊಂಡಿದ್ದು, ಜೀವನ ಸಾಗಾಟಕ್ಕೆ ಪರಿತಪಿಸುತ್ತಿದ್ದಾರೆ.

ಶ್ರೀಧರ ಕಳೆದ 9 ವರ್ಷಗಳಿಂದ ಜಿಂದಾಲ್ ‌ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಐಟಿಪಿಎಸ್ ಕೋಕ್ ಓವನ್ ಘಟಕದಲ್ಲಿ ಬ್ಯಾಟರಿ ಅಪರೇಟರ್ ಆಗಿ ಕೆಲ್ಸ ಮಾಡುತ್ತಿದ್ದರು. ಅದೊಂದು ದಿನ ಇದ್ದಕ್ಕಿದ್ದಂತೆಯೇ ಜ್ವರ ಕಾಣಿಸಿಕೊಂಡು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ಎರಡು ವರ್ಷಗಳ ಹಿಂದೆ ದಾಖಲಾಗಿದ್ದರು.

ಎರಡೂ ಕೈ- ಕಾಲುಗಳನ್ನ ಕಳೆದುಕೊಂಡ ಜಿಂದಾಲ್ ನೌಕರ

ಜಿಂದಾಲ್ ‌ಸಮೂಹ‌ ಸಂಸ್ಥೆಯ ಐಟಿಪಿಎಸ್ ಕೋಕ್ ಓವನ್ ಘಟಕದಲ್ಲಿ ಕೆಲ್ಸ‌ ಮಾಡುತ್ತಿದ್ದ ಆತನಿಗೆ, ವಿಪರೀತ ಧೂಳಿನಿಂದಲೇ ಆರೋಗ್ಯ ಹದಗೆಟ್ಟಿರುತ್ತೆ. ಕಾಲಿನ ಬೆರಳಿನಲ್ಲಿ ನೋವು ಕಾಣಿಸಿಕೊಂಡು ತನ್ನ ಎರಡೂ ಕೈ- ಕಾಲುಗಳನ್ನ ಕತ್ತರಿಸುವ ಹಂತಕ್ಕೆ ತಲುಪಿತ್ತು. ಕೈ ಕಾಲುಗನ್ನು ಕಳೆದುಕೊಂಡಿದ್ದಾರೆ.

ಜಿಂದಾಲ್ ಸಂಸ್ಥೆಯಿಂದ‌ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ನನ್ನ‌ ಎರಡೂ ಕೈ- ಕಾಲುಗಳನ್ನ ಕಳೆದುಕೊಳ್ಳಬೇಕಾಯಿತು. ಸಂಸ್ಥೆ ಕೇವಲ‌ ನಾಲ್ಕು ಲಕ್ಷ ರೂ.ಗಳನ್ನ ನೀಡಿ ಕೈತೊಳೆದುಕೊಂಡಿದೆ. ನನ್ನ ಚಿಕಿತ್ಸೆಯ ವೆಚ್ಚವು ಅಂದಾಜು 15 ರಿಂದ 18 ಲಕ್ಷದವರೆಗೆ ಆಗಿದೆ. ಹೊಲ ಮಾರಿ ಚಿಕಿತ್ಸೆ ಪಡೆದುಕೊಂಡು ಬದುಕುಳಿದಿರುವೆ ಎಂದು ಅಳಲನ್ನ ತೋಡಿಕೊಂಡರು.

ಇನ್ನು ಸಂಸ್ಥೆಯಿಂದ ಚಿಕಿತ್ಸೆಗಾಗಿ ಖರ್ಚು ಮಾಡಿದ ಹಣ ಒದಗಿಸಬೇಕು. ಹಾಗೂ ಮಾಸಿಕವಾಗಿ ಪಿಂಚಣಿ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.