ETV Bharat / state

ಅಕ್ರಮ ದಾಸ್ತಾನು: 97.50 ಕ್ವಿಂಟಲ್ ಪಡಿತ ಅಕ್ಕಿ ವಶ - ಅಕ್ರಮ ದಾಸ್ತಾನು

ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 97.50 ಕ್ವಿಂಟಲ್ ಪಡಿತರ ಅಕ್ಕಿಯನ್ನು ಕೂಡ್ಲಿಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

hospet
97.50 ಕ್ವಿಂಟಲ್ ಪಡಿತ ಅಕ್ಕಿ ವಶ
author img

By

Published : Apr 24, 2021, 11:57 AM IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹೊಸಕೆರೆ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 2.79 ಲಕ್ಷ ರೂ. ಮೌಲ್ಯದ 97.50 ಕ್ವಿಂಟಲ್ ಪಡಿತರ ಅಕ್ಕಿಯನ್ನು ಕೂಡ್ಲಿಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

97.50 ಕ್ವಿಂಟಲ್ ಪಡಿತ ಅಕ್ಕಿ ವಶ..

ತಾಲೂಕಿನ ಹೊಸಕೆರೆ ಗ್ರಾಮದ ನಾಗರಾಜ್ ಅವರ ತೋಟದ ಮನೆಯಲ್ಲಿ ಗಿಡ್ಡಪ್ಪ ಹಾಗೂ ವಿರೇಶ್ ಪಡಿತರವನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ಖಚಿತ ಮಾಹಿತಿಯ ಮೇರೆಗೆ ಕೂಡ್ಲಿಗಿ ಪೊಲೀಸ್ ಠಾಣೆಯ ಪಿಎಸ್‍ಐ ಸುರೇಶ್ ಹಾಗೂ ವಸಂತ, ಆಹಾರ ಇಲಾಖೆಯ ಶಿರಸ್ತೇದಾರ ಮಲ್ಲಿಕಾರ್ಜುನ ಹಾಗೂ ಸಿಬ್ಬಂದಿ ಅಕ್ರಮ ದಾಸ್ತಾನು ಸಂಗ್ರಹ ಸ್ಥಳದ ಮೇಲೆ ದಾಳಿ ಮಾಡಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಿಡ್ಡಪ್ಪ ಹಾಗೂ ವೀರೇಶ್​ನನ್ನು ಬಂಧಿಸಲಾಗಿದ್ದು, ಆರೋಪಿ ನಾಗರಾಜ್ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.