ಹೊಸಪೇಟೆ (ವಿಜಯನಗರ): ನಗರದ ಮೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ ಪೊಲೀಸರು 1.80 ಲಕ್ಷ ರೂ. ಮೌಲ್ಯದ 9 ಕೆಜಿ ಗಾಂಜಾ ವಶಕ್ಕೆ ಪಡೆದು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಪಶು ಆಸ್ಪತ್ರೆಯ ಆವರಣದಲ್ಲಿ 60 ಸಾವಿರ ಮೌಲ್ಯದ 3 ಕೆಜಿ ಗಾಂಜಾ, ಇಂತಿಯಾಜ್ ಮತ್ತು ಮಹಮ್ಮದ್ ರಫೀಕ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ಟಿಬಿಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯ ಜಿಂಕೆ ಪಾರ್ಕ್ ಬಳಿ 70 ಸಾವಿರ ರೂ. ಬೆಲೆ ಬಾಳುವ 3.5 ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಂಡು, ನಿತಿನ್ ಚೌಧರಿ ಮತ್ತು ವೀರಕೃಷ್ಣ ಆರೋಪಿಗಳನ್ನು ಬಂಧಿಸಲಾಗಿದೆ.
ಚಿತ್ತವಾಡ್ಗಿ ಪೊಲೀಸ್ ಠಾಣೆ ವ್ಯಾಪ್ತಿ ರಾಘವೇಂದ್ರ ಕಾಲೋನಿಯಲ್ಲಿ 50 ಸಾವಿರ ಮೌಲ್ಯದ 2.4 ಕೆಜಿ ಗಾಂಜಾ ವಶಕ್ಕೆ ಪಡೆದುಕೊಂಡು, ಆರೋಪಿಗಳಾದ ಸುನೀಲ್ ವರಕೇರಿ ಹಾಗೂ ರಾಘವೇಂದ್ರ ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ 19 ರಿಂದ 28 ವಯಸ್ಸಿನೊಳಗಿನ ಯುವಕರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.