ETV Bharat / state

ಕೊರೊನಾ ಸೋಂಕಿಂದ 7 ಮಂದಿ ಸಾರಿಗೆ ನೌಕರರು ಬಲಿ: ಇನ್ನೂ ದೊರಕದ ಪರಿಹಾರ - ಸಾರಿಗೆ ನೌಕರರು ಬಲಿ ದೊರಕದ ಪರಿಹಾರ

ನನ್ನ ಪತಿಗೆ ಬರುತ್ತಿದ್ದ ವೇತನದಿಂದ ಜೀವನ ಸಾಗುಸುತ್ತಿದ್ದೆವು. ಆದರೆ, ಅವರು ಕೊರೊನಾ ಸೋಂಕಿಗೆ ಬಲಿಯಾದ ಬಳಿಕ ಜೀವನ ನಡೆಸೋದೇ ಕಷ್ಟವಾಗಿದೆ. ಇತ್ತ ನಿಗಮದಿಂದ ಬರಬೇಕಾದ 30 ಲಕ್ಷ ರೂ.ಗಳ ಪರಿಹಾರವೂ ಕಳೆದೊಂದು ವರ್ಷದಿಂದ ಬಂದೇ ಇಲ್ಲ ಎನ್ನುತ್ತಾರೆ ಸಾರಿಗೆ ನೌಕರರೊಬ್ಬರ ಪತ್ನಿ.

neksrt
neksrt
author img

By

Published : Jun 11, 2021, 7:26 AM IST

ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕಿಗೆ ಬಳ್ಳಾರಿ- ವಿಜಯನಗರ ಜಿಲ್ಲೆಗಳ ಏಳು ಮಂದಿ ಸಾರಿಗೆ ನೌಕರರು ಬಲಿಯಾಗಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿದ 30 ಲಕ್ಷ ರೂ.ಗಳ ಪರಿಹಾರಧನ ಮಾತ್ರ ಈವರೆಗೂ ಮೃತ ನೌಕರರ ಕುಟುಂಬಗಳಿಗೆ ತಲುಪಿಲ್ಲ. ಕಾರಣ ಕೇಳಿದರೆ ಖಜಾನೆ ಖಾಲಿ ಎಂಬ ಉತ್ತರ ಬರುತ್ತಿದೆ ಎಂದು ಸಂಬಂಧಿಕರ ಅಳಲು ತೋಡಿಕೊಂಡಿದ್ದಾರೆ.

ಎನ್​ಇಕೆಎಸ್​ಆರ್​ಟಿಸಿ ನಿಗಮದ ವ್ಯಾಪ್ತಿಯಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 39 ಮಂದಿ ಸಾರಿಗೆ ನೌಕರರು ಸಾವನ್ನಪ್ಪಿದ್ದಾರೆ. ಕಳೆದೊಂದು ವರ್ಷದಿಂದ ಈ ಮೃತ ನೌಕರರ ಅವಲಂಬಿತ ಕುಟುಂಬಸ್ಥರಿಗೆ ತಲುಪಬೇಕಾದ ಪರಿಹಾರ ಧನ ತಲುಪೇ ಇಲ್ಲ.

"ನನ್ನ ಪತಿಗೆ ಬರುತ್ತಿದ್ದ ವೇತನದಿಂದ ಜೀವನ ಸಾಗುಸುತ್ತಿದ್ದೆವು. ಆದರೆ, ಅವರು ಕೊರೊನಾ ಸೋಂಕಿಗೆ ಬಲಿಯಾದ ಬಳಿಕ ಜೀವನ ನಡೆಸೋದೇ ಕಷ್ಟವಾಗಿದೆ. ಇತ್ತ ನಿಗಮದಿಂದ ಬರಬೇಕಾದ 30 ಲಕ್ಷ ರೂ.ಗಳ ಪರಿಹಾರವೂ ಕಳೆದೊಂದು ವರ್ಷದಿಂದ ಬಂದೇ ಇಲ್ಲ. ಕೂಡಲೇ ಪರಿಹಾರ ಧನ ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ಕುಟುಂಬಗಳ ನೆರವಿಗೆ ಧಾವಿಸಬೇಕು" ಎಂದು ಮೃತ ಸಾರಿಗೆ ನೌಕರರೊಬ್ಬರ ಪತ್ನಿ ಮನವಿ ಮಾಡಿದರು.

"ಮೃತ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಲಾಗುವುದು. ಈ ಕುರಿತಂತೆ ನೌಕರರ ಸಮರ್ಪಕ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ. ಸಾರಿಗೆ ನಿಗಮದಲ್ಲಿ ಹಣದ ಕೊರತೆಯಿದೆ. ಹಾಗಂತ ಪರಿಹಾರ ಕೊಡೋದನ್ನು ನಿಲ್ಲಿಸುವುದಿಲ್ಲ. ರಾಜ್ಯ ಸರ್ಕಾರದ ಬಳಿ ಮನವಿ ಮಾಡೋ ಮುಖೇನ ಸಾರಿಗೆ ನೌಕರರ ಹಿತ ಕಾಪಾಡಲಾಗುವುದು" ಎಂದು ಕಲಬುರಗಿ ವಲಯದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕುರ್ಮಾರಾವ್ ಹೇಳುತ್ತಾರೆ.

ಎನ್​ಇಕೆಎಸ್​ಆರ್​ಟಿಸಿ ನಿಗಮ ವ್ಯಾಪ್ತಿಯ ವಿವರ

ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳು ಈ ನಿಗಮದ ವ್ಯಾಪ್ತಿಗೆ ಒಳಗೊಂಡಿದೆ. 9 ವಿಭಾಗ, 50 ಬಸ್ ಘಟಕ, ತಲಾ ಒಂದೊಂದು ಪ್ರಾದೇಶಿಕ ಕಾರ್ಯಾಗಾರ ಕಚೇರಿ, ವಾಹನ ಚಾಲಕರ ತರಬೇತಿ ಕೇಂದ್ರ, ಪ್ರಾದೇಶಿಕ ತರಬೇತಿ ಕೇಂದ್ರದಡಿ 4,599 ಬಸ್‍ಗಳು ಕಾರ್ಯಾಚರಣೆ ಮಾಡುತ್ತಿವೆ. ಇದರಡಿ ಮಹಿಳೆಯರು ಸೇರಿ 19,265 ಸಿಬ್ಬಂದಿ 4,126 ಅನುಸೂಚಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಪೈಕಿ ಚಾಲಕರು/ನಿರ್ವಾಹಕ-13,171, ತಾಂತ್ರಿಕ ಸಿಬ್ಬಂದಿ- 3,077, ಆಡಳಿತ ಸಿಬ್ಬಂದಿ-3,027 ಮಂದಿ ಇದ್ದಾರೆ. ಮಹಾಮಾರಿ ಕೊರೊನಾ ಮೊದಲ ಅಲೆಯಲ್ಲಿ 28 ಮಂದಿ ಸಿಬ್ಬಂದಿ ಮೃತರಾದರೆ ಎರಡನೇ ಅಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.