ETV Bharat / state

ಐತಿಹಾಸಿಕ ಹಂಪಿಯಲ್ಲಿದೆ 500 ವರ್ಷಗಳ ಹಿಂದಿನ ಮಾವಿನ ತೋಪು! - ಹೊಸಪೇಟೆ ವಿಜಯನಗರ ಲೇಟೆಸ್ಟ್ ನ್ಯೂಸ್

ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿ 500 ವರ್ಷಗಳ ಹಿಂದಿನ ಮಾವಿನತೋಪು ಇದೆ‌. ಈ ಹಿಂದೆ ಮಾವಿನತೋಪಿನಲ್ಲಿ 21 ಮರಗಳಿದ್ದವು. ಆದ್ರೆ ಇದೀಗ 7 ಮರಗಳು ಮಾತ್ರ ಉಳಿದುಕೊಂಡಿದ್ದು, ಸೂಕ್ತ ನಿರ್ವಹಣೆ ಆಗಬೇಕಿದೆ.

500 years old mango trees is in Hampi
500 ವರ್ಷಗಳ ಹಿಂದಿನ ಮಾವಿನ ತೋಪು
author img

By

Published : Jul 6, 2021, 6:59 AM IST

Updated : Jul 6, 2021, 7:23 AM IST

ಹೊಸಪೇಟೆ(ವಿಜಯನಗರ): ವಿಶ್ವವಿಖ್ಯಾತ ಹಂಪಿ ಎಂದಾಕ್ಷಣ ಎಲ್ಲರಿಗೂ‌‌‌ ನೆನಪಿಗೆ ಬರೋದು ಸ್ಮಾರಕಗಳ ಸೌಂದರ್ಯ. ಆದರೆ, ಇದರೊಂದಿಗೆ ಐತಿಹಾಸಕವಾದ 500 ವರ್ಷಗಳ ಹಿಂದಿನ ಮಾವಿನತೋಪು ಸಹ ಇಲ್ಲಿದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ವಿರೂಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಈ ಮಾವಿನತೋಪು ಇದೆ‌. ತುಂಗಭದ್ರಾ ನದಿಗೆ ಹೊಂದಿಕೊಂಡಂತೆ ಹಳೆಯ ಮಾವಿನ ಮರಗಳಿವೆ. ಒಂದೊಂದು ಮರಗಳು ಬೃಹತ್ ಆಕಾರದಲ್ಲಿವೆ. ನೂರು ಅಡಿಕ್ಕಿಂತ ಹೆಚ್ಚು ಈ ಮರಗಳು ಬೆಳೆದು ನಿಂತಿವೆ. 500 ವರ್ಷಗಳ ಹಿಂದಿನ ಮರಗಳು ಈಗಲೂ ಇವೆ ಎಂಬುದೇ ಆಶ್ಚರ್ಯಕರ ಸಂಗತಿ.

ಹಂಪಿಯಲ್ಲಿದೆ 500 ವರ್ಷಗಳ ಹಿಂದಿನ ಮಾವಿನ ತೋಪು

ಪೂಜಾ ಕೈಂಕರ್ಯಗಳಿಗೆ ಮಾವಿನ ತೋಪು:

500 ವರ್ಷಗಳ ಹಿಂದೆ ಒಂದು ಕಾಲು ಎಕರೆಯಲ್ಲಿ ಮಾವಿನ ಸಸಿಗಳನ್ನು ನೆಡಲಾಗಿತ್ತು. ದಸರಾ, ದೀಪಾವಳಿ, ಶಿವರಾತ್ರಿ, ಹಂಪಿಯ ಜಾತ್ರೆ ಸಂದರ್ಭದಲ್ಲಿ ಮಾವಿನ ಎಲೆಗಳನ್ನು ತೋರಣ ಕಟ್ಟಲು ಬಳಸಲಾಗುತ್ತಿತ್ತು. ಸಾಮ್ರಾಜ್ಯದ ದ್ವಾರ ಬಾಗಿಲುಗಳಿಗೆ ತೋರಣ ಕಟ್ಟಲು ಆನೆಗಳ ಮೂಲಕ ಮಾವಿನ ಸೊಪ್ಪನ್ನು ಹೊತ್ತುಕೊಂಡು ಹೋಗಲಾಗುತ್ತಿತ್ತು ಎಂಬ ಪ್ರತೀತಿ ಇದೆ.

21 ಮಾವಿನ ಮರಗಳು:

ಈ ಹಿಂದೆ ಮಾವಿನತೋಪಿನಲ್ಲಿ 21 ಮರಗಳನ್ನು‌‌‌ ಕಾಣಬಹುದಿತ್ತು. ಕಾಲಾನುಕ್ರಮ ಪ್ರವಾಹ, ಗೆದ್ದಲು ಹಿಡಿಯುವಂತದ್ದು, ರಕ್ಷಣೆ ಮತ್ತು ಪೂರಕ ಪೋಷಣೆ ಇಲ್ಲದಿರುವುದರಿಂದ ಅನೇಕ ಮರಗಳು‌ ನಶಿಸಿ ಹೋಗಿವೆ. ಸದ್ಯ ಈ ಮಾವಿನ ತೋಪಿನಲ್ಲಿ 7 ಮರಗಳನ್ನು ಮಾತ್ರ ಕಾಣಬಹುದಾಗಿದೆ. ಹಾಗಾಗಿ ಮುಂದಿನ‌ ಪೀಳಿಗೆಗಾಗಿ ಈ ಮರಗಳನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಇಲ್ಲಿನ ಪುರೋಹಿತರು.

ಬೃಹತ್​​ ಮರಗಳು:

ಮೂರು ಜನ ಮರವನ್ನು ಅಪ್ಪಿಕೊಂಡರೂ ಒಬ್ಬರ ಕೈ ಮತ್ತೊಬ್ಬರಿಗೆ ಸಿಗುವುದಿಲ್ಲ.‌ ಅಷ್ಟೊಂದು ಬೃಹದಾಕಾರದ ಮರಗಳು ಇವಾಗಿವೆ. ಅಲ್ಲದೇ, 100 ಅಡಿಯಷ್ಟು ಎತ್ತರಕ್ಕೆ ಬೆಳೆದು ನಿಂತಿವೆ.

ತೋರಣಗಲ್ಲು ಹೆಸರು ಬಂದಿದ್ದು ಹೇಗೆ?

ತೋರಣ ಕಟ್ಟುವುದರಿಂದ ತೋರಣಗಲ್ಲು ಎಂಬ ಹೆಸರು ಬಂತು. ತೋರಣಗಲ್ಲಿನಿಂದ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ಮಾವಿನ ತೋರಣವನ್ನು ಕಟ್ಟಲಾಗುತ್ತಿತ್ತು. ಅಲ್ಲದೇ, ಹುಲಿಗಿಯ ಹುಲಿಗೆಮ್ಮ ದೇವಸ್ಥಾನದವರೆಗೆ ತೋರಣದ ಸೌಂದರ್ಯವನ್ನು ಕಾಣಬಹುದಾಗಿತ್ತು. ಅನೇಕ ದ್ವಾರಗಳಿಗೆ ಮಾವಿನ ತೋರಣವನ್ನು‌ ಕಟ್ಟಲಾಗುತ್ತಿತ್ತು ಅಂತಾರೆ ಪುರೋಹಿತರು.

ಇದನ್ನೂ ಓದಿ: ಮಾಸ್ಕ್​ನಿಂದ ಇಟ್ಟಿಗೆ ತಯಾರಿಸುವ ಕಾರ್ಕಳದ ಪರಿಸರ ಪ್ರೇಮಿ

'ಈಟಿವಿ‌ ಭಾರತ'ದೊಂದಿಗೆ ಹಂಪಿಯ ಪುರೋಹಿತರಾದ ಮೋಹನ್ ಚಿಕ್ಕಭಟ್ ಜೋಶಿ ಮಾತನಾಡಿ, 500 ವರ್ಷಗಳ ಹಿಂದಿನ ಮಾವಿನತೋಪು ಇಲ್ಲಿದೆ. ಈ‌ ಕುರಿತು ಶಾಸನಗಳು ಇದ್ದವು. ಪ್ರವಾಹಕ್ಕೆ ಸಿಲುಕಿ ಅವು ನಶಿಸಿ ಹೋಗಿವೆ. 1992ರಲ್ಲಿ ದೊಡ್ಡ ಮಟ್ಟದ ಪ್ರವಾಹ ಬಂದಿತ್ತು. ಆ ಸಂದರ್ಭದಲ್ಲಿ ನಾಲ್ಕು ಅಡಿಯಷ್ಟು ನೀರಿನಲ್ಲಿ‌ ಮರಗಳು ಮುಳುಗಿ ಹೋಗಿದ್ದವು. ಸದ್ಯ ಇರುವ ಮಾವಿನ ಮರಗಳನ್ನು ಸಂರಕ್ಷಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

Last Updated : Jul 6, 2021, 7:23 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.