ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 48 ಬಾಲ್ಯವಿವಾಹ ನಡೆದಿದ್ದು, ಮೂರು ಗುಂಪಿನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದು, ಕದ್ದು ಮುಚ್ಚಿ ನಡೆಯುತ್ತಿರುವ ಮದುವೆಗಳ ಸಂಖ್ಯೆ ಹೆಚ್ಚಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ 36 ಬಾಲ್ಯ ವಿವಾಹಗಳು ನಡೆದರೆ, ಮೇ ತಿಂಗಳಲ್ಲಿ 12 ಬಾಲ್ಯ ವಿವಾಹಗಳು ನಡೆದಿವೆ. ಆ ಪೈಕಿ ಕೇವಲ ಮೂರು ಪ್ರಕರಣಗಳ ವಿರುದ್ಧ ಮಾತ್ರ ಎಫ್ಐಆರ್ ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ. ಕಳೆದ ಬಾರಿ ಲಾಕ್ಡೌನ್ ಜಾರಿಯಾದಾಗಲೂ ಕೂಡ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಿತ್ತು. ಸದ್ಯ ಬಾಲ್ಯ ವಿವಾಹ ಪ್ರಕರಣದ ಸಂಖ್ಯೆ ಬರೋಬ್ಬರಿ 240ರ ಗಡಿ ದಾಟಿದೆ.
ಈ ಬಾರಿಯೂ ಕೂಡ ಮದುವೆ ಸಮಾರಂಭಗಳು ಹೆಚ್ಚಿರುವ ವೇಳೆಯಲ್ಲಿಯೇ ಲಾಕ್ಡೌನ್ ಜಾರಿಯಾಗಿದೆ. ಆದರೂ ಬಾಲ್ಯ ವಿವಾಹ ಸಂಖ್ಯೆಯ ಪ್ರಮಾಣ ಹೆಚ್ಚಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಣ್ತಪ್ಪಿಸಿ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ಸೂಕ್ತ ಕ್ರಮ ಜರುಗಿಸಬೇಕಿದೆ.
ಈ ಸಂಬಂಧ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಯು. ನಾಗರಾಜ ಅವರು, ಈ ಬಾರಿಗಿಂತಲೂ ಕಳೆದ ಬಾರಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದ್ದವು. ಈ ಬಾರಿ ಕೇವಲ ಎರಡೇ ತಿಂಗಳಲ್ಲಿ ಅಂದಾಜು 48 ಬಾಲ್ಯ ವಿವಾಹಗಳು ನಡೆದಿವೆ. ಮೂರು ಎಫ್ಐಆರ್ ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಏಪ್ರಿಲ್ - ಮೇ ತಿಂಗಳಲ್ಲಿ ನಡೆದ ಬಾಲ್ಯ ವಿವಾಹಗಳು:
ಏಪ್ರಿಲ್
- ಸಿರುಗುಪ್ಪ- 1,
- ಸಂಡೂರು- 3,
- ಬಳ್ಳಾರಿ- 4,
- ಹಡಗಲಿ- 5,
- ಹರಪನಹಳ್ಳಿ- 3,
- ಹೊಸಪೇಟೆ- 17,
- ಹಗರಿಬೊಮ್ಮನಹಳ್ಳಿ- 3.
ಮೇ
- ಸಿರುಗುಪ್ಪ-2,
- ಬಳ್ಳಾರಿ- 2,
- ಹಡಗಲಿ-1,
- ಹರಪನಹಳ್ಳಿ-1,
- ಹೊಸಪೇಟೆ- 4,
- ಕೂಡ್ಲಿಗಿ- 1,
- ಹಗರಿಬೊಮ್ಮನಹಳ್ಳಿ-1.
ಇದನ್ನೂ ಓದಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಮುಂದೂಡಿದ ಕೋರ್ಟ್