ಬಳ್ಳಾರಿ: ಜಿಲ್ಲೆಯಲ್ಲಿ ಮನೆ ಮನೆ ಸರ್ವೇ ಕಾರ್ಯಾರಂಭವಾಗಿ ಮೂರು ದಿನವಾಗಿದ್ದು, ಶೇ. 95ಕ್ಕಿಂತಲೂ ಆಕ್ಸಿಜನ್ ಸ್ಯಾಚುರೇಷನ್ ಕಡಿಮೆ ಇರುವ 45 ಮಂದಿಗೆ ಕೋವಿಡ್ ಸೋಂಕಿರೋದು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ (ಡಿಹೆಚ್ಒ) ಡಾ. ಹೆಚ್.ಎಲ್.ಜನಾರ್ಧನ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದಲೂ ಕೂಡ ಸೋಂಕಿತರ ಏರಿಯಾದಲ್ಲಿ 2ನೇಯ ಹಂತದ ಮನೆ ಮನೆ ಸರ್ವೇ ಕಾರ್ಯಾರಂಭವಾಗಿದೆ. ಆ ಪೈಕಿ 201 ಮಂದಿಯಲ್ಲಿ ಆಕ್ಸಿಜನ್ ಸ್ಯಾಚುರೇಷನ್ ಕಮ್ಮಿ ಇರೋದು ಕಂಡು ಬಂದಿದ್ದು, ಅವರೆಲ್ಲರನ್ನೂ ಕೋವಿಡ್ ಟೆಸ್ಟ್ಗೆ ಒಳಪಡಿಸಿದಾಗ ಅಂದಾಜು 45 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಅವರೆಲ್ಲರನ್ನೂ ಕೂಡ ಕೋವಿಡ್ ಕೇರ್ ಸೆಂಟರ್ಗೆ ಕಳಿಸಿಕೊಡಲಾಗಿದೆ. ನಿನ್ನೆಯವರೆಗೂ ಸುಮಾರು 6,591 ಮನೆಗಳಿಗೆ ಕಿರಿಯ ಆರೋಗ್ಯ ಸಹಾಯಕರು ಭೇಟಿ ನೀಡಿ, ಅಂದಾಜು 30 ಸಾವಿರಕ್ಕೂ ಹೆಚ್ಚು ಮಂದಿಯನ್ನ ಆಕ್ಸಿಜನ್ ಸ್ಯಾಚುರೇಷನ್ಗೆ ಒಳಪಡಿಸಿದ್ದಾರೆ ಎಂದು ಡಾ. ಜನಾರ್ಧನ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಫೀವರ್ ಕ್ಲಿನಿಕ್ಗೆ ಭೇಟಿ ಕೊಡಿ: ಯಾರಿಗಾದ್ರೂ ನೆಗಡಿ, ಕೆಮ್ಮು ಹಾಗೂ ಜ್ವರ ಸೇರಿದಂತೆ ತೀವ್ರ ತರಹದ ಕಾಯಿಲೆ ಕಂಡು ಬಂದರೆ ಕೂಡಲೇ ಫೀವರ್ ಕ್ಲಿನಿಕ್ಗೆ ಭೇಟಿ ಕೊಡಿ. ಅಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ಗೆ ಒಳಗಾಗಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.