ETV Bharat / state

ಗಣಿನಾಡಿನಲ್ಲಿ ಒಂದೇ ದಿನ 43 ಮಂದಿಗೆ ಕೊರೊನಾ: 239ರ ಗಡಿದಾಟಿದ ಸೋಂಕಿತರ ಸಂಖ್ಯೆ - ಬಳ್ಳಾರಿಯಲ್ಲಿ 239ರ ಗಡಿದಾಟಿದ ಸೋಂಕಿತರ ಸಂಖ್ಯೆ

ಜಿಲ್ಲೆಯಲ್ಲಿ ನಿನ್ನೆಯವರೆಗೆ ಅಂದಾಜು 196 ಮಂದಿ ಕೊರೊನಾ ಸೋಂಕಿತರಿದ್ದು, ಅದರೊಳಗೆ 107 ಕೇಸ್​ಗಳು ಜಿಂದಾಲ್​ನಲ್ಲಿ ಕಾಣಿಸಿಕೊಂಡಿದ್ದವು. ಈ ದಿನ 22 ಮಂದಿಗೆ ಈ ಕೊರೊನಾ ಸೋಂಕಿರುವುದು ಖಾತ್ರಿಯಾಗಿದೆ.

43 news Corona Positive Cases
ಗಣಿನಾಡಿನಲ್ಲಿ ಒಂದೇ ದಿನದಲ್ಲೇ 43 ಮಂದಿ ಕೊರೊನಾ ಸೋಂಕಿತರು ಪತ್ತೆ
author img

By

Published : Jun 15, 2020, 10:16 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನದಲ್ಲೇ 43 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 239ರ ಗಡಿದಾಟಿದೆ.

ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ಸೋಂಕಿತರ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿರುವ 22 ಮಂದಿಗೆ ಈ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಜಿಂದಾಲ್​ನಲ್ಲೇ 129 ಮಂದಿಗೆ ಈವರೆಗೆ ಕೊರೊನಾ ಸೋಂಕು‌ ಕಾಣಿಸಿಕೊಂಡಂತಾಗಿದೆ.

ಜಿಂದಾಲ್ ಸೇರಿದಂತೆ ಐಎಲ್​ಐ ರೋಗದ ಗುಣಲಕ್ಷಣಗಳಿರುವವರಿಗೆ ಸೋಂಕು ಹರಡಿದ್ದು, ಜಿಲ್ಲೆಯ ಬಳ್ಳಾರಿ, ಹೊಸಪೇಟೆ ಹಾಗೂ ಸಂಡೂರು ಮತ್ತು ಕೂಡ್ಲಿಗಿ ತಾಲೂಕಿನಲ್ಲೇ ಈ ಕೇಸ್​ಗಳು ಪತ್ತೆಯಾಗಿವೆ ಎಂದು ಡಿಹೆಚ್ಒ ಡಾ.ಹೆಚ್.ಎಲ್.ಜನಾರ್ದನ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಿನ್ನೆಯವರೆಗೆ ಅಂದಾಜು 196 ಮಂದಿ ಕೊರೊನಾ ಸೋಂಕಿತರಿದ್ದು, ಅದರೊಳಗೆ 107 ಕೇಸ್​ಗಳು ಜಿಂದಾಲ್​ನಲ್ಲಿ ಕಾಣಿಸಿಕೊಂಡಿದ್ದವು. ಈ ದಿನ 22 ಮಂದಿಗೆ ಈ ಕೊರೊನಾ ಸೋಂಕು ಇರುವುದು ಖಾತ್ರಿಯಾಗಿದೆ.

ಹೀಗಾಗಿ, ಗಣಿಜಿಲ್ಲೆಯು ಮಹಾಮಾರಿ ಕೊರೊನಾ ಸೋಂಕಿಗೆ ನಲುಗಿ ಹೋಗಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಸಾಂಸ್ಥಿಕ ಹಾಗೂ ವಸತಿ ನಿಲಯದ ಕ್ವಾರಂಟೈನ್​ನಲ್ಲಿರುವವರಲ್ಲೇ ಈ‌ ಸೋಂಕು ಪತ್ತೆಯಾಗುತ್ತಿರೋದಕ್ಕೆ ಗಣಿಜಿಲ್ಲೆಯ ಜನರು ಕೊಂಚಮಟ್ಟಿಗೆ ನಿರಾಳಾಗಿದ್ದಾರೆ. ಈವರೆಗೂ 55 ಮಂದಿ ಗುಣಮುಖರಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಉಳಿದ 183 ಮಂದಿ ಕೋವಿಡ್- 19 ಜಿಲ್ಲಾಸ್ಪತ್ರೆಯಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.