ETV Bharat / state

ಬಳ್ಳಾರಿಯಲ್ಲಿ 38 ಜನ ಕೊರೊನಾದಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬಳ್ಳಾರಿಯಲ್ಲಿ ಇಂದು 38 ಜನ ಕೊರೊನಾ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Bellary
Bellary
author img

By

Published : Jun 26, 2020, 7:00 PM IST

ಬಳ್ಳಾರಿ : ಇಂದು ಜಿಲ್ಲೆಯಲ್ಲಿ 38 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದುವರೆಗೆ 232 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇಂದು 38 ಜನರು ಆಸ್ಪತ್ರೆಗೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 8 ಜನ ಸಾವನ್ನಪ್ಪಿದ್ದಾರೆ.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸವರೆಡ್ಡಿ ಅವರು ಗುಣಮುಖರಾದವರಿಗೆ ಹೂ ಗುಚ್ಛ, ಹಣ್ಣು- ಹಂಪಲು ನೀಡಿದರು. ಬಳಿಕ ಕಂದಾಯ ಇಲಾಖೆ ವತಿಯಿಂದ ಮಾಸ್ಕ್ ವಿತರಿಸಿದರು.

ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಡಾ.ದೈವಿಕ್, ಹಿರಿಯ ತಜ್ಞರಾದ ಡಾ.ಪ್ರಕಾಶ್ ಭಾಗವತಿ, ಡಾ.ಉದಯ್ ಶಂಕರ್, ಡಾ.ಮಧು ಜುಮ್ಲ, ಶುಶ್ರೂಷಾ ಅಧೀಕ್ಷಕಿ ಶಾಂತಾಬಾಯಿ, ಡಾ.ಚಿತ್ರಶೇಖರ ಸೇರಿದಂತೆ ಆಸ್ಪತ್ರೆ ಇತರ ಸಿಬ್ಬಂದಿಗಳು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.